ಗಡ್ಡ ಮೀಸೆ ಎನ್ನುವುದು ಪುರುಷರ ಸೌಂದರ್ಯಕ್ಕೆ ಆಭೂಷಣವಿದ್ದಂತೆ. ಇದಕ್ಕಾಗಿ ಗಡ್ಡ ಚೆನ್ನಾಗಿ ಕಾಣಲು ಪುರುಷರು ಹೆಚ್ಚಾಗಿ ಕ್ಷೌರದಂಗಡಿಯಲ್ಲಿ ಗಡ್ಡವನ್ನು ಟ್ರಿಮ್ ಮಾಡಿಸುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಯುವತಿಯು ಕೂಡ ಪುರುಷರ ಕ್ಷೌರದಂಗಡಿಯಲ್ಲಿ ಶೇವಿಂಗ್ ಮಾಡಿಸಲು ಬಂದಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗಿದ್ದು, ಯುವತಿಯ ಹೊಸ ಅವತಾರವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಪುರುಷರಂತೆ ಫೇಸ್ ಶೇವಿಂಗ್ ಮಾಡಿಸಿಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋವನ್ನು @HasnaZaruriHai ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಟ್ರೆಂಡ್ ಯಾವಾಗ ಶುರುವಾಯಿತು???” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ;
ये trend कब चालू हुआ ???
😲😲😲😱😱😱 pic.twitter.com/ne4P9SZSzz— HasnaZarooriHai🇮🇳 (@HasnaZaruriHai) April 12, 2024
ವೈರಲ್ ವಿಡಿಯೋದಲ್ಲಿ ಕ್ಷೌರದಂಗಡಿಯಲ್ಲಿ ಯುವತಿಯೊಬ್ಬಳು ಮುಖ ತುಂಬಾ ಶೇವಿಂಗ್ ಕ್ರೀಮ್ ಹಾಕಿ ಕುಳಿತಿರುವುದನ್ನು ಕಾಣಬಹುದು. ಕ್ಷೌರಿಕ ಪುರುಷರಂತೆ ಆಕೆಯ ಮುಖವನ್ನು ಸಹ ಬ್ಲೆಡ್ ಅಲ್ಲಿ ಶೇವ್ ಮಾಡಿದ್ದಾನೆ.
ಇದನ್ನೂ ಓದಿ; ಬಟ್ಟೆ ಅಂಗಡಿಯ ಪುರುಷ ಸಿಬ್ಬಂದಿಯ ಮುಂದೆಯೇ ಬಟ್ಟೆ ಬಿಚ್ಚಿ ಟ್ರಯಲ್ ನೋಡಿದ ಯುವತಿ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11 ಸಾವಿರಕ್ಕೂ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯುವತಿಯ ಅವತಾರವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ