Viral Video: ಇದಂತೂ ಗುಟ್ಕಾ ಪ್ರಿಯರ ಫೇವರಿಟ್; ವೈರಲ್ ಆಗುತ್ತಿದೆ ವಿಮಲ್ ಪಾನ್ ಮಸಾಲ ಐಸ್ ಕ್ರೀಮ್ ರೋಲ್

ವಿಮಾಲ್ ಪಾನ್ ಮಸಾಲದ ಟ್ರೋಲ್ ಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಇನ್ನೂ ಈ ಪಾನ್ ಮಸಾಲದ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಅಕ್ಷಯ್ ಕುಮಾರ್, ಅಜಯ್ ದೇವಗನ್, ಶಾರುಖ್ ಖಾನ್ ಅವರು ಕೂಡಾ ಟ್ರೋಲ್ ಆಗಿದ್ದುಂಟು. ಇದೀಗ ಈ ವಿಮಲ್ ಪಾನ್ ಮಸಾಲವನ್ನೇ ಬಳಸಿಕೊಂಡು ಇಲ್ಲೊಬ್ಬರು ಐಸ್ಕ್ರೀಮ್ ವ್ಯಾಪಾರಿ ಸ್ಪೆಷಲ್ ಐಸ್ಕ್ರೀಮ್ ರೋಲ್ ತಯಾರಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.

Viral Video: ಇದಂತೂ ಗುಟ್ಕಾ ಪ್ರಿಯರ ಫೇವರಿಟ್; ವೈರಲ್ ಆಗುತ್ತಿದೆ ವಿಮಲ್ ಪಾನ್ ಮಸಾಲ ಐಸ್ ಕ್ರೀಮ್ ರೋಲ್
Edited By:

Updated on: Apr 23, 2024 | 6:40 PM

ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಕಾಂಬಿನೇಷನ್ ಫುಡ್ ವೆರೈಟಿಗಳ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಬರ್ಗರ್ ಐಸ್ ಕ್ರೀಮ್, ಸಮೋಸಾ ಐಸ್ ಕ್ರೀಂ, ಇಡ್ಲಿ ಸಾಂಬರ್ ಐಸ್ ಕ್ರೀಮ್, ಗುಲಾಬ್ ಜಾಮೂನ್ ದೋಸೆ ಹೀಗೆ ಒಂದಾ… ಎರಡಾ ತರಹೇವಾರಿ ವಿಯರ್ಡ್ ಫುಡ್ ಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬರು ಐಸ್ಕ್ರೀಮ್ ವ್ಯಾಪಾರಿ ನಾನ್ ಕೂಡಾ ಏನಾದ್ರೂ ಡಿಫ್ರೆಂಟ್ ಆಗಿ ಟ್ರೈ ಮಾಡ್ತೀನಿ ಅಂತಾ ವಿಮಲ್ ಪಾನ್ ಮಸಾಲ ಐಸ್ ಕ್ರೀಂ ರೋಲ್ ಅನ್ನು ತಯಾರಿಸಿದ್ದಾರೆ. ಈ ವಿಡಿಯೋವನ್ನು ಕಂಡು ಇದಂತೂ ಗುಟ್ಕಾ ಪ್ರಿಯರ ಫೇವರಿಟ್ ಐಸ್ಕ್ರೀಮ್ ಅಂತ ನೆಟ್ಟಿಗರು ಕಾಲೆಳೆದಿದ್ದಾರೆ.

ಪಿಯುಶ್ ಸಿಂಗ್ (@who_piyush98) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಐಸ್ಕ್ರೀಮ್ ವ್ಯಾಪಾರಿಯೊಬ್ಬರು ವಿಮಲ್ ಪಾನ್ ಮಸಾಲ ಬಳಸಿ ವಿಶಿಷ್ಟ ಐಸ್ ಕ್ರೀಮ್ ರೋಲ್ ತಯಾರಿಸಿ, ಅದನ್ನು ಒಂದು ಬೌಲ್ ಗೆ ವರ್ಗಾಯಿಸಿ ನಂತರ ಅದಕ್ಕೆ ಚಾಕೊಲೇಟ್ ಸಿರಪ್ ಹಾಕಿ ಅಲಂಕರಿಸುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಎಂಥಾ ಕಾಲ ಬಂತು ಗುರು ಫೋನ್ ಕಾಲಿಂಗ್ ಮೂಲಕ ದೇವರಿಗೆ ಪ್ರಾರ್ಥನೆ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 25.2 ಮಿಲಿಯನ್ ವೀಕ್ಷಣೆಗಳನ್ನು ಪಡದುಕೊಂಡಿದ್ದು, ಇದಂತೂ ಗುಟ್ಕಾ ಪ್ರಿಯರಿಗೆ ಹೇಳಿ ಮಾಡಿಸಿದ ಐಸ್ಕ್ರೀಮ್ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us