Viral Video : ಈ ವಯೋವೃದ್ಧ ದಂಪತಿಯ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 70 ವರ್ಷದ ಈ ವೃದ್ಧ 70 ದಿನಗಳ ಆಸ್ಪತ್ರೆಯ ವಾಸದಿಂದ ಮುಕ್ತರಾಗಿರುವ ಸಂದರ್ಭದಲ್ಲಿ ಅವರ ಪತ್ನಿ ಈ ಮಧುರಗೀರೆಯನ್ನು ಹಾಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಕಲಕಿದೆ. ಗುಡ್ನ್ಯೂಸ್ಮೂವ್ಮೆಂಟ್ ಎಂಬ ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ತನ್ನ ಪತಿಯ ಬಳಿ ಕುಳಿತ ಈಕೆ, ಬ್ರೆಝಿಲಿಯನ್ ಸಂಗೀತಗಾರ ರಾಬರ್ಟೋ ಕಾರ್ಲೋಸ್ ಅವರ ಪೋರ್ಚುಗೀಸ್ ಹಾಡು- ಕೊಮೊ ಎ ಗ್ರಾಂಡೆ ಒ ಮೆಯು ಅಮೋರ್ ಪೋರ್ ವೂಕೆ (ನಿಮಗೆ ಏನೆಲ್ಲ ಹೇಳುವುದಿದೆ. ಆದರೆ ನಿಮ್ಮ ಮೇಲಿನ ಪ್ರೀತಿ ಎಷ್ಟು ಆಳವಾಗಿದೆ ಎಂದು ಹೇಳಲು ಪದಗಳೇ ಸಿಗುತ್ತಿಲ್ಲ) ಹಾಡನ್ನು ಹಾಡುತ್ತಿದ್ದಾರೆ. ಹಾಡು ಮುಗಿಯುತ್ತಿದ್ದಂತೆ ಆಕೆಯ ಪತಿಯ ಸ್ಪಂದನೆ ಹೇಗಿರುತ್ತದೆ ನೋಡಿ.
ಈ ವಿಡಿಯೋ ಅನ್ನು 3ಮಿಲಿಯನ್ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಇಡೀ ನನ್ನ ಜೀವಮಾನದಲ್ಲಿ ಇದು ಅತ್ಯುತ್ತಮ ಮಧುರಗೀತೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಪತಿ, ಪತ್ನಿಯ ಮುಖವನ್ನು ಸ್ಪರ್ಶಿಸುವ ರೀತಿ! ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ನಿಜವಾದ ಪ್ರೀತಿ. ಆರೋಗ್ಯ ಮತ್ತು ಅನಾರೋಗ್ಯದಿಂದ ಹಿಡಿದು ಕೊನೆಯವರೆಗೂ ಇದು ಹೀಗೇ ಇರುತ್ತದೆ ಎಂದು ಮಗದೊಬ್ಬರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಾನಿಲ್ಲಿ ಅಳುತ್ತಿದ್ದೇನೆ ಈ ವಿಡಿಯೋ ನೋಡಿ ಎಂದು ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ.
ವಯೋವೃದ್ಧರ ಪರಸ್ಪರ ಪ್ರೀತಿ, ಕಾಳಜಿ, ಆಪ್ತಭಾವವನ್ನು ಬಿಂಬಿಸುವ ಅನೇಕ ವಿಡಿಯೋಗಳನ್ನು ನೋಡುತ್ತಲೇ ಇರುತ್ತೀರಿ. ಆದರೆ ಇದು ಮಾತ್ರ ಹೃದಯಕಲಕುವಂತಿದೆಯಲ್ಲ. ಆ ವೃದ್ಧನ ಮುಖಭಾವ ನೋಡುತ್ತಿದ್ದರೆ ಬರೆಯಲು ಪದಗಳೇ ಸಿಗುತ್ತಿಲ್ಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:18 am, Tue, 27 September 22