ಮಧ್ಯಪ್ರದೇಶ: ಕತ್ತೆಗಳಿಗೆ ಮದುವೆ ಮಾಡಿಸಿದ್ರೆ ಮಳೆ ಆಗುತ್ತೇ ಎಂಬ ನಂಬಿಕೆ ಸಾಕಷ್ಟು ಕಡೆಗಳಲ್ಲಿವೆ. ಇದರಂತೆ ಮಧ್ಯಪ್ರದೇಶದಲ್ಲೂ ಒಂದು ವಿಶಿಷ್ಟ ಸಂಪ್ರದಾಯವಿದೆ. ಇಲ್ಲಿನ ಬಹುತೇಕ ಭಾಗಗಳಲ್ಲಿ ಬರಗಾಲ ಬಾರದೇ ಇರಲು ಕತ್ತೆಗಳಿಗೆ ಗುಲಾಬ್ ಜಾಮೂನು ತಿನಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತವೆ ಎಂಬುದು ಅಲ್ಲಿನ ಜನರ ನಂಬಿಕೆ. ಸದ್ಯ ಈ ಸಂಪ್ರದಾಯಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಹಳ್ಳಿಗರು ಕತ್ತೆಗಳಿಗೆ ಗುಲಾಬ್ ಜಾಮೂನ್ ಅನ್ನು ತಿನ್ನಿಸುತ್ತಿವುದನ್ನು ಕಾಣಬಹುದು. ಕತ್ತೆಗಳಿಗೆ ಸ್ನಾನ ಮಾಡಿಸಿ, ಬಳಿಕ ಹೂವಿನ ಹಾರಗಳನ್ನು ತೊಡಿಸಿ ಪೂಜೆಗೈದು ಸಿಹಿ ತಿನಸು, ವಿಶೇಷವಾಗಿ ಗುಲಾಬ್ ಜಾಮೂನು ತಿನಿಸುವುದು ಇಲ್ಲಿನ ಸಂಪ್ರದಾಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Video: ಗ್ಯಾಸ್ ಸೋರಿಕೆಯಿಂದ ಆಟೋ ಸ್ಫೋಟ; ಭೀಕರ ಅಗ್ನಿ ಅವಘಡದ ಭಯಾನಕ ದೃಶ್ಯ ವೈರಲ್