Video: ಪೋಸ್ಟ್ ಮಾಸ್ಟರ್ ನಾಪತ್ತೆ; ಆತಂಕದಲ್ಲಿ ಠೇವಣಿದಾರರು

|

Updated on: Feb 20, 2024 | 4:34 PM

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸ ಮಂಡಲದ ಗರುಡಖಂಡಿ ಗ್ರಾಮಾಂತರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ 2 ಲಕ್ಷ ನಗದು ಹಣದೊಂದಿಗೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಉಳಿತಾಯ ಮಾಡುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಧ್ಯಮವರ್ಗದ ಬಹುದೊಡ್ಡ ಆಸೆ ಹಣ ಕೂಡಿದಬೇಕು. ಬ್ಯಾಂಕು, ಪೋಸ್ಟ್​​​ ಆಫೀಸುಗಳಲ್ಲಿ ಉಳಿತಾಯ ಖಾತೆ ತೆರೆದು ಹಣ ಪಾವತಿಸುತ್ತಾ ಬಂದರೆ ಅಧಿಕ ಬಡ್ಡಿಯೂ ಸಿಗುತ್ತದೆ ಹಾಗೂ ನಮ್ಮ ಹಣಕ್ಕೆ ಸುರಕ್ಷತೆಯೂ ಸಿಗುತ್ತದೆ ಎಂಬ ನಂಬಿಕೆ. ಆದರೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸ ಮಂಡಲದ ಗರುಡಖಂಡಿ ಗ್ರಾಮಾಂತರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 2 ಲಕ್ಷ ನಗದು ಹಣದೊಂದಿಗೆ ಪೋಸ್ಟ್ ಮಾಸ್ಟರ್ ಪರಾರಿಯಾಗಿರುವ ಆಘಾತಕಾರಿ ಘಟನೆ ಸ್ಥಳೀಯರಲ್ಲಿ ಸಂಚಲನ ಮೂಡಿಸಿದೆ. ಪೋಸ್ಟ್ ಮಾಸ್ಟರ್ ಪ್ರಶಾಂತ್ ಕುಮಾರ್ ಗ್ರಾಹಕರು ಠೇವಣಿ ಇಟ್ಟಿದ್ದ 2 ಲಕ್ಷ ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಗರುಡಖಂಡಿ ಅಂಚೆ ಕಛೇರಿಯಲ್ಲಿ ಹಣಕಾಸಿನ ವ್ಯವಹಾರದ ವಿವರ ನೀಡದ ಹಿನ್ನೆಲೆಯಲ್ಲಿ ಶ್ರೀಕಾಕುಳಂ ಜಿಲ್ಲಾ ಭಾರತೀಯ ಅಂಚೆ ಇಲಾಖೆ ಅಧೀಕ್ಷಕ ಶ್ರವಣ್ ಕುಮಾರ್ ಗರುಡಖಂಡಿ ಗ್ರಾಮಕ್ಕೆ ತೆರಳಿ ವಿಚಾರಿಸಿದ್ದರು. ಈ ಸಮಯದಲ್ಲಿ ಶಾಖೆಯ ಪೋಸ್ಟ್ ಮಾಸ್ಟರ್ ಪ್ರಶಾಂತ್ ಪರಾರಿಯಾಗಿರುವುದು ದೃಢಪಟ್ಟಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ