ತೆಲಂಗಾಣ: ವರ್ಗಾವಣೆಗೊಂಡ ಪ್ರೀತಿಯ ಶಿಕ್ಷಕನಿಗಾಗಿ ಇಡೀ ಶಾಲೆಯ ಮಕ್ಕಳು ಕಣ್ಣೀರು ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳು ಶಾಲೆಯ ಗೇಟಿನ ಬಳಿ ನಿಂತು “ನಮ್ಮನ್ನು ಬಿಟ್ಟು ಹೋಗಬೇಡಿ ಸರ್ ” ಎಂದು ಅಳುತ್ತಾ ಅಂಗಲಾಚಿದ್ದಾರೆ. ತೆಲಂಗಾಣದ ಜನಗಾಮ ಜಿಲ್ಲೆಯ ಸಮೀರ್‌ಪೇಟೆಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಸುಧೀರ್ ಎಂಬವರು ಮಕ್ಕಳ ಪ್ರೀತಿಯ ಶಿಕ್ಷಕರಾಗಿದ್ದು, ಇತ್ತೀಚಿಗಷ್ಟೇ ಅವರಿಗೆ ವರ್ಗಾವಣೆಯಾಗಿದೆ. ಈ ವಿಷಯ ಮಕ್ಕಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಇದರಿಂದಾಗಿ ಮಕ್ಕಳು ಶಾಲೆಯ ಗೇಟ್ ಬಳಿ ಅಳುತ್ತಾ ನಿಂತು ಸುಧೀರ್ ಸರ್ ಪ್ಲೀಸ್ ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಅತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಜನನಿಬಿಡ ರಸ್ತೆಯಲ್ಲಿ ನಗ್ನವಾಗಿ ಓಡಾಡಿದ ಯುವತಿ, ಬೆತ್ತಲೆ ಅವತಾರಕ್ಕೆ ಬೆಚ್ಚಿ ಬಿದ್ದ ಜನ
ಶಿಕ್ಷಕ ಸುಧೀರ್ ಸಮೀರ್ ಪೇಟಾದಿಂದ ಬಚ್ಚನ್ನಪೇಟೆ ಮಂಡಲದ ಕೊನ್ನೆ ಗ್ರಾಮ ಶಾಲೆಗೆ ವರ್ಗಾವಣೆಯಾಗಿದೆ. ಮಕ್ಕಳ ಪ್ರೀತಿಯನ್ನು ಕಂಡು ಶಿಕ್ಷಕ ಸುಧೀರ್ ಕೂಡ ಬಾವುಕರಾಗಿದ್ದಾರೆ. ಶಿಕ್ಷಕನ ವಿದಾಯದ ವೇಳೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Fri, 28 June 24