ಇನ್​ಸ್ಟಾಗ್ರಾಂ ಮಾಯೆ; ರೀಲ್​ನಿಂದ 18 ವರ್ಷದ ಬಳಿಕ ಒಂದಾದ ಅಣ್ಣ-ತಂಗಿ!

ಇನ್‌ಸ್ಟಾಗ್ರಾಂ, ಫೇಸ್​ಬುಕ್ ಬಳಸದವರು ಬಹಳ ಕಡಿಮೆಯೆಂದು ಹೇಳಬಹುದು. ಸ್ಮಾರ್ಟ್​ಫೋನ್ ಇರುವವರು ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಖಾತೆಯನ್ನು ಇಟ್ಟುಕೊಂಡಿರುತ್ತಾರೆ. ಇನ್​ಸ್ಟಾಗ್ರಾಂ ರೀಲ್‌ ನೋಡುತ್ತಿದ್ದ ಮಹಿಳೆಯೊಬ್ಬರು ಆ ಒಂದು ರೀಲ್ ನೋಡಿ ಕಣ್ಣೀರು ಹಾಕಿದ್ದಾರೆ. ಆ ರೀಲ್​ನಿಂದಲೇ 18 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಅಷ್ಟಕ್ಕೂ ಆ ರೀಲ್​ನಲ್ಲಿ ಏನಿತ್ತು?

ಇನ್​ಸ್ಟಾಗ್ರಾಂ ಮಾಯೆ; ರೀಲ್​ನಿಂದ 18 ವರ್ಷದ ಬಳಿಕ ಒಂದಾದ ಅಣ್ಣ-ತಂಗಿ!
ರೀಲ್​ನಿಂದ 18 ವರ್ಷದ ನಂತರ ಒಂದಾದ ಅಣ್ಣ-ತಂಗಿ! Image Credit source: India Today
Follow us
|

Updated on:Jun 28, 2024 | 7:54 PM

ನವದೆಹಲಿ: ಅಣ್ಣ-ತಂಗಿಯ ಬಾಂಧವ್ಯ ಬಹಳ ಅಪರೂಪವಾದುದು. 18 ವರ್ಷಗಳಿಂದ ದೂರವಿದ್ದ ಅಣ್ಣ-ತಂಗಿ ಇನ್​ಸ್ಟಾಗ್ರಾಂ ರೀಲ್​ನಿಂದಾಗಿ ಮತ್ತೆ ಒಂದಾಗಿರುವ ವಿಚಿತ್ರ ಮತ್ತು ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಕಾನ್ಪುರದ ಮಹಿಳೆಯೊಬ್ಬರು ತನ್ನ ಕಳೆದುಹೋದ ಅಣ್ಣನ ನೆನಪಿನಲ್ಲೇ ದಿನ ದೂಡುತ್ತಿದ್ದರು. ಇನ್‌ಸ್ಟಾಗ್ರಾಮ್ ರೀಲ್‌ ನೋಡುವಾಗ ಅದರಲ್ಲಿ ಮುರಿದ ಹಲ್ಲಿನ ವ್ಯಕ್ತಿಯನ್ನು ನೋಡಿ ಅದು ತನ್ನ ಅಣ್ಣನೇ ಎಂದು ಆಕೆ ಗುರುತಿಸಿದ್ದಾಳೆ. ಆ ಮುರಿದ ಹಲ್ಲಿನಿಂದಾಗಿ ಅಣ್ಣ-ತಂಗಿ ಮತ್ತೆ ಒಂದಾಗಿದ್ದಾರೆ.

ಈ ಅಪರೂಪದ ಮತ್ತು ಮನಕಲಕುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ತಂಗಿಯೊಬ್ಬಳು 18 ವರ್ಷಗಳ ನಂತರ ಕಳೆದುಹೋದ ತನ್ನ ಅಣ್ಣನನ್ನು ಇನ್‌ಸ್ಟಾಗ್ರಾಮ್ ರೀಲ್ ಮೂಲಕ ಪತ್ತೆಹಚ್ಚಿದ್ದಾಳೆ. ಬಳಿಕ ಅವನನ್ನು ಸಂಪರ್ಕಿಸಿ, ಆತನ ಹಣೆಗೆ ತಿಲಕವಿಟ್ಟು ಮನೆಗೆ ಬರಮಾಡಿಕೊಂಡಿದ್ದಾಳೆ.

ಹಾಥಿಪುರ್ ಗ್ರಾಮದ ನಿವಾಸಿ ರಾಜಕುಮಾರಿ ಎಂಬಾಕೆ ಆಗಾಗ ಮೊಬೈಲ್​ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ನೋಡುತ್ತಿದ್ದರು. ರೀಲ್​ಗಳನ್ನು ಸ್ಕ್ರೋಲ್ ಮಾಡುತ್ತಿದ್ದಾಗ ಕಂಡ ಪರಿಚಿತ ಮುಖವೊಂದು ಆಕೆಯ ಕಣ್ಣುಗಳಲ್ಲಿ ನೀರು ತುಂಬಿಸಿತು. ಜೈಪುರದ ವ್ಯಕ್ತಿಯೊಬ್ಬ ರೀಲ್‌ನಲ್ಲಿ ಕಾಣಿಸಿಕೊಂಡಿದ್ದ. ಆತನ ಮುಂದಿನ ಹಲ್ಲು ಕಟ್ ಆಗಿತ್ತು. ಅದೇ ರೀತಿಯ ಹಲ್ಲು ಆಕೆಯ ಅಣ್ಣ ಬಾಲ ಗೋವಿಂದ್‌ಗೆ ಬಾಲ್ಯದಿಂದಲೂ ಇತ್ತು.

ಇದನ್ನೂ ಓದಿ: Viral: ನಾನು ಸುಂದರವಾಗಿದ್ದೇನೆ, ಎಲ್ಲಾ ಹುಡುಗಿಯರು ನನ್ನನ್ನು ಬಯಸುತ್ತಾರೆ; 20 ವರ್ಷದ ಹುಡುಗನಿಗೆ ವಿಚಿತ್ರ ಕಾಯಿಲೆ

18 ವರ್ಷಗಳ ಹಿಂದೆ, ಬಾಲ್ ಗೋವಿಂದ್ ಫತೇಪುರ್‌ನ ಇನಾಯತ್‌ಪುರ ಗ್ರಾಮದಿಂದ ಮುಂಬೈಗೆ ಉದ್ಯೋಗಕ್ಕಾಗಿ ತೆರಳಿದ್ದ. ನಂತರ ಮನೆಗೆ ಹಿಂತಿರುಗಲಿಲ್ಲ. ಮುಂಬೈ ತಲುಪಿದ ನಂತರ ಸ್ನೇಹಿತರನ್ನು ಬಿಟ್ಟು ಬೇರೆ ಸ್ಥಳದಲ್ಲಿ ಕೆಲಸ ಆರಂಭಿಸಿದ್ದ. ಮನೆಯವರಿಗೆ ಆತನ ಸುಳಿವು ಕೂಡ ಸಿಕ್ಕಿರಲಿಲ್ಲ. ಅವನು ಆರಂಭದಲ್ಲಿ ತನ್ನ ಸ್ನೇಹಿತರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದನು. ಆದರೆ ಕ್ರಮೇಣ ಎಲ್ಲಾ ಸಂಪರ್ಕವನ್ನು ನಿಲ್ಲಿಸಿದನು. ಅವರ ಎಲ್ಲಾ ಸ್ನೇಹಿತರು ತಮ್ಮ ಹಳ್ಳಿಗೆ ಮರಳಿದರು, ಆದರೆ ಬಾಲ ಗೋವಿಂದ್ ಮುಂಬೈನಲ್ಲಿಯೇ ಉಳಿದುಕೊಂಡಿದ್ದ. ಅವನು ಎಲ್ಲಿದ್ದಾನೆಂದು ಯಾರಿಗೂ ಗೊತ್ತಿರಲಿಲ್ಲ.

ಬಳಿಕ ಒಂದು ದಿನ ಆತ ಮನೆಗೆ ಮರಳಿ ಬರಲು ರೈಲು ಹತ್ತಲು ನಿರ್ಧರಿಸಿದಾಗ ಆತನ ಜೀವನವು ಅನಿರೀಕ್ಷಿತ ತಿರುವು ಪಡೆಯಿತು. ರೈಲು ಆತನನ್ನು ಕಾನ್ಪುರದ ಬದಲು ಜೈಪುರಕ್ಕೆ ಕರೆದೊಯ್ಯಿತು. ಅಲ್ಲಿ ಬಾಲ ಗೋವಿಂದ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾದ. ಅಲ್ಲೇ ಕಾರ್ಖಾನೆಯಲ್ಲಿ ಕೆಲಸ ಪಡೆದ. ನಂತರ ಆತ ಜೈಪುರದಲ್ಲಿ ಜೀವನವನ್ನು ನಡೆಸಲು ಪ್ರಾರಂಭಿಸಿದ. ಅಲ್ಲಿ ಈಶ್ವರ ದೇವಿ ಎಂಬ ಹುಡುಗಿಯನ್ನು ವಿವಾಹವಾದ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬದುಕು ಸಾಕಷ್ಟು ತಿರುವುಗಳನ್ನು ಪಡೆದುಕೊಂಡರೂ ಆತನ ಮುರಿದ ಹಲ್ಲು ಹಾಗೆಯೇ ಇತ್ತು.

ಇದನ್ನೂ ಓದಿ: ವಿಚಿತ್ರ ಘಟನೆ: ಹೆಲ್ಮೆಟ್ ಧರಿಸಿಲ್ಲವೆಂದು ಲಾರಿ ಚಾಲಕನಿಗೆ ದಂಡ ಹಾಕಿದ ಪೊಲೀಸರು!

ಇತ್ತೀಚೆಗೆ ಆತ ಇನ್​ಸ್ಟಾಗ್ರಾಂ ರೀಲ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಇದೇ ರೀಲ್ ಆತನಿಗೆ ಮತ್ತೆ ತಂಗಿಯನ್ನು ತಲುಪಲು ಕಾರಣವಾಯಿತು. ಆತನಿಗೆ ಇನ್​ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ನಂಬರ್ ಪಡೆದ ಆಕೆ ಅಣ್ಣನನ್ನು ಮನೆಗೆ ವಾಪಾಸ್ ಬರಲು ಮನವಿ ಮಾಡಿದಳು. ಅದಕ್ಕೆ ಬಾಲ ಗೋವಿಂದ್ ತಕ್ಷಣ ಒಪ್ಪಿಕೊಂಡ. ಕೊನೆಗೂ ಮನೆಗೆ ವಾಪಾಸ್ ಬಂದ ಬಾಲ ಗೋವಿಂದ್ ತಂಗಿಯೊಂದಿಗೆ ಮತ್ತೆ ಸಂಪರ್ಕ ಬೆಳೆಸಿದ್ದಾನೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Fri, 28 June 24

ತಾಜಾ ಸುದ್ದಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?