Viral: ನಾನು ಸುಂದರವಾಗಿದ್ದೇನೆ, ಎಲ್ಲಾ ಹುಡುಗಿಯರು ನನ್ನನ್ನು ಬಯಸುತ್ತಾರೆ; 20 ವರ್ಷದ ಹುಡುಗನಿಗೆ ವಿಚಿತ್ರ ಕಾಯಿಲೆ

ಚೀನಾದ 20 ವರ್ಷದ ಯುವಕನೊಬ್ಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಆತ ತಾನು ಓದುತ್ತಿರುವ ಕಾಲೇಜಿನ ಎಲ್ಲಾ ಹುಡುಗಿಯರು ನನ್ನನ್ನು ಇಷ್ಟಪಡುತ್ತಿದ್ದಾರೆ, ನಾನು ಬಹಳ ಸುಂದರವಾದ ಯುವಕ ಎಂಬ ಭ್ರಮೆಯಲ್ಲಿ ಹೊಂದಿದ್ದಾನೆ.

Viral: ನಾನು ಸುಂದರವಾಗಿದ್ದೇನೆ, ಎಲ್ಲಾ ಹುಡುಗಿಯರು ನನ್ನನ್ನು ಬಯಸುತ್ತಾರೆ; 20 ವರ್ಷದ ಹುಡುಗನಿಗೆ ವಿಚಿತ್ರ ಕಾಯಿಲೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 05, 2024 | 12:48 PM

ಈ ಪ್ರಪಂಚದಲ್ಲಿ ಕೆಲವೊಬ್ಬರು ವಿಚಿತ್ರವಾದ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಆ ಅಸ್ವಸ್ಥತೆಗಳ ಬಗ್ಗೆ ಕೇಳಿದಾಗ ಇಂತಹ ಕಾಯಿಲೆಗಳೂ ಇರುತ್ತವೆಯೇ ಎಂದು ಅಚ್ಚರಿ ಪಡುತ್ತವೆ. ಅದೇ ರೀತಿ ಚೀನಾದ 20 ವರ್ಷ ವಯಸ್ಸಿನ ಯುವಕನೊಬ್ಬ ಕೂಡಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಆತ ತಾನು ತುಂಬಾ ಸುಂದರವಾದ ಹುಡುಗ, ಕಾಲೇಜಿನ ಎಲ್ಲಾ ಹುಡುಗಿಯರು ನನ್ನನ್ನು ಪ್ರೀತಿ ಮಾಡುತ್ತಾರೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಈ ಕಾಯಿಲೆಯನ್ನು ʼDelusional love disorderʼ ಎಂದು ಕರೆಯಲಾಗುತ್ತದೆ.

ಸೌತ್ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ವಾಸವಿರುವ ಲಿಯು ಎಂಬಾತ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಆತ ಕಾಲೇಜಿನ ಎಲ್ಲಾ ಹುಡುಗಿಯರು ನನ್ನನ್ನೇ ಬಯಸುತ್ತಾರೆ ಎಂಬ ಭ್ರಮೆಯನ್ನು ಹೊಂದಿದ್ದ. ನಂತರ ಈತನ ಈ ವರ್ತನೆ ಆತನ ದೈನಂದಿನ ಜೀವನದ ಮೇಲೂ ಪರಿಣಾಮ ಬೀರಲಾರಂಭಿಸಿತು. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು, ನಿದ್ದೆ ಸರಿಯಾಗಿ ಮಾಡದಿರುವುದು ಮಾಡುತ್ತಿದ್ದ. ಇದರಿಂದ ಆತನ ಕುಟುಂಬ ಕೂಡಾ ಚಿಂತೆಗೀಡಗಿತ್ತು. ಇದೀಗ ಆತ ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅವನು ಶ್ರೀಘ್ರದಲ್ಲೇ ಗುಣಮುಖವಾಗಲಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:  ನನ್ನ ಪ್ರಿಯಕರ ನಮ್ಮ ಜತೆ ಇರಬೇಕು ಎಂದು ಟ್ರಾನ್ಸ್ ಫಾರ್ಮರ್ ಕಂಬವೇರಿದ 3 ಮಕ್ಕಳ ತಾಯಿ 

ಈ ಡೆಲ್ಯುಷನಲ್ ಲವ್ ಡಿಸಾರ್ಡರ್ ಎಂಬ ಭ್ರಮೆಯ ಅಸ್ವಸ್ಥತೆಯು ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಡುವೆ ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ಅವಧಿಯಲ್ಲಿ ಹವಾಮಾನದಲ್ಲಿ ಬದಲಾವಣೆಗಳಾಗುತ್ತವೆ ಮತ್ತು ಇದರಿಂದ ದೇಹದಲ್ಲಿ ಎಂಡೋಕ್ರೈನ್ ಮಟ್ಟದಲ್ಲಿ ಏರುಪೇರು ಉಂಟಾಗುತ್ತದೆ. ಈ ಸ್ಥಿತಿಯಿಂದ ಬಳಲುತ್ತಿರುವವರು ಸರಿಯಾಗಿ ನಿದ್ರೆ ಮಾಡುವುದಿಲ್ಲ ಮತ್ತು ಲೈಂಗಿಕ ವ್ಯಸನಿಯಾಗುವ ಸಾಧ್ಯತೆಗಳಿವೆ. ಮತ್ತು ಕೆಲವೊಮ್ಮೆ ಈ ರೋಗದಿಂದ ಬಳಲುತ್ತಿರುವವರು ಕೋಪಗೊಂಡು ಜನರ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳಿದ್ಧಾರೆ.