ಮಗು ಹುಟ್ಟಿದ ತಕ್ಷಣ ಜೀವಂತ ಸಮಾಧಿ ಮಾಡಿದ ತಾಯಿ, ಮುಂದೇನಾಯ್ತು?
ಮಗುವನ್ನು ಇಷ್ಟಪಡದಿರುವ ತಾಯಿ ತುಂಬಾ ವಿರಳ, 9 ತಿಂಗಳು ತನ್ನ ಹೊಟ್ಟೆಯಲ್ಲಿ ಜೋಪಾನ ಮಾಡಿ ಹೊರಗೆ ಬರುವುದನ್ನೇ ಕಾಯುತ್ತಿರುವ ತಾಯಂದಿರು ಒಂದು ಕಡೆಯಾದರೆ ಮಗುವನ್ನು ಹೆತ್ತ ತಕ್ಷಣ ಮಗುವನ್ನು ಜೀವಂತ ಸಮಾಧಿ ಮಾಡಿದ ತಾಯಿ ಇನ್ನೊಂದು ಕಡೆ.
ಮಗುವನ್ನು ಇಷ್ಟಪಡದಿರುವ ತಾಯಿ ತುಂಬಾ ವಿರಳ, 9 ತಿಂಗಳು ತನ್ನ ಹೊಟ್ಟೆಯಲ್ಲಿ ಜೋಪಾನ ಮಾಡಿ ಹೊರಗೆ ಬರುವುದನ್ನೇ ಕಾಯುತ್ತಿರುವ ತಾಯಂದಿರು ಒಂದು ಕಡೆಯಾದರೆ ಮಗುವನ್ನು ಹೆತ್ತ ತಕ್ಷಣ ಮಗುವನ್ನು ಜೀವಂತ ಸಮಾಧಿ ಮಾಡಿದ ತಾಯಿ ಇನ್ನೊಂದು ಕಡೆ.
ಆದರೆ 6 ಗಂಟೆಗಳ ಕಾಲ ಮಣ್ಣಿನಡಿ ಇದ್ದರೂ ಮಗು ಬದುಕಿಬಂದಿದೆ. ತಕ್ಷಣವೇ ಕುಟುಂಬದ ಅನೇಕರು ವಿಚಾರ ತಿಳಿದು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಘಟನೆ ನಡೆದಿರುವುದು ಉಗಾಂಡದಲ್ಲಿ, 23 ವರ್ಷದ ಮಹಿಳೆ ಗರ್ಭಿಣಿಯಾಗಿದ್ದಳು, ಆಕೆಗೆ ಈಗಾಗಲೇ ಒಂದು ಮಗು ಇತ್ತು, ಆಕೆಗೆ ಇನ್ನೊಂದು ಮಗು ಆಗುವುದು ಇಷ್ಟವಿರಲಿಲ್ಲ. ಹಾಗಾಗಿ ತಾನು ಗರ್ಭಿಣಿ ಎಂದು ಮನೆಯಲ್ಲಿ ಹೇಳಿರಲಿಲ್ಲ. ಒಂದು ದಿನ ಮಧ್ಯರಾತ್ರಿ ಆಕೆಗೆ ಹೆರಿಗೆ ನೋವು ಶುರುವಾಗಿತ್ತು, ಕುಟುಂಬದವರಿಗೆ ಹೇಳದೇ, ವೈದ್ಯರ ಸಹಾಯ ಪಡೆಯದೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಮನೆಯವರಿಗೆ ತಿಳಿಯದಂತೆ ತೋಟದಲ್ಲಿ ಹೂತಿದ್ದಳು.
ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ತೋಟದಲ್ಲಿ ರಕ್ತದ ಕುರುಹು ಇತ್ತು. ಅಗೆದಾಗ ಮಗು ಕಾಣಿಸಿದೆ. ಇಷ್ಟು ಗಂಟೆಗಳ ಕಾಲ ಮಣ್ಣಿನಡಿ ಹೂತಿದ್ದರೂ ಜೀವಂತವಾಗಿರುವುದನ್ನು ಕಂಡು ಆಶ್ಚರ್ಯಪಟ್ಟರು.
ಮತ್ತಷ್ಟು ಓದಿ: ಚಿಕ್ಕಬಳ್ಳಾಫುರ: ತಂಗಿ ಮೇಲಿನ ಕೋಪಕ್ಕೆ ಆಕೆಯ ಆರು ವರ್ಷದ ಮಗನನ್ನು ಕೊಲೆ ಮಾಡಿ ಹೂತು ಹಾಕಿದ ಅಕ್ಕ
ಮಣ್ಣಿನಡಿ ಹೂತಿದ್ದರಿಂದ ದೇಹದ ಅಲ್ಲಲ್ಲಿ ಗಾಯಗಳಾಗಿವೆ. ಹೊಕ್ಕುಳಬಳ್ಳಿಗೆ ಅಂಟಿಕೊಂಡಿದ್ದವು. ಚರ್ಮವು ನೀಲಿ ಬಣ್ಣಕ್ಕೆ ತಿರುಗಿತ್ತು.
ಕೂಡಲೇ ಮಣ್ಣನ್ನು ಸ್ವಚ್ಛಗೊಳಿಸಿ ಹೊಕ್ಕುಳಬಳ್ಳಿಯನ್ನು ಕತ್ತರಿಸಿ ಮಗುವನ್ನು ಹೊರತೆಗೆದಿದ್ದಾರೆ. ತಕ್ಷಣವೇ ವೈದ್ಯರು ಗಾಯವೆಲ್ಲಾ ಸ್ವಚ್ಛಗೊಳಿಸಿ ಇನ್ಕ್ಯುಬೇಟರ್ನಲ್ಲಿ ಇರಿಸಿದ್ದಾರೆ. ಹೃದಯ, ಹೊಟ್ಟೆ ಅಥವಾ ಇನ್ಯಾವುದೇ ಅಂಗಗಳಲ್ಲಿ ಯಾವುದೇ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ. ಆರು ದಿನಗಳ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.
ವರದಿಯನ್ನು ಇಂಟರ್ ನ್ಯಾಷನಲ್ ಮೆಡಿಕಲ್ ಕೇಸ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಪವಾಡ ಎಂದು ಕರೆಯಲಾಯಿತು. ಮಗುವನ್ನು ಈಗ ಅಜ್ಜಿ ನೋಡಿಕೊಳ್ಳುತ್ತಿದ್ದಾರೆ, ಮಗುವಿನ ಹತ್ಯೆಗೆ ಯತ್ನಿಸಿದ ತಾಯಿಯನ್ನು ಬಂಧಿಸಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ