Viral: ನ್ಯಾಚುರಲ್ ಲುಕ್ ಪಡೆಯಲು ಮತ್ತೊಮ್ಮೆ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋದ ರಿಯಲ್ ಲೈಫ್ ಬಾರ್ಬಿ ಡಾಲ್ 

ಪ್ಲಾಸ್ಟಿಕ್ ಸರ್ಜರಿ ಮೂಲಕ ಏನು ಬೇಕಾದ್ರೂ ಮಾಡ್ಬಹುದು. ನಮ್ಮ ಮುಖವನ್ನೇ ಸಂಪೂರ್ಣವಾಗಿ ಬದಲಿಸಿಕೊಳ್ಳಬಹುದು. ಅದೇ ರೀತಿ ಪ್ಲಾಸ್ಟಿಕ್ ಸರ್ಜರಿಯ ಮೂಲಕ ತನ್ನ ಲುಕ್ ಅನ್ನು  ಬದಲಿಸಿಕೊಂಡ ರಿಯಲ್ ಬಾರ್ಬಿ ಇದೀಗ ತನ್ನ ನ್ಯಾಚುರಲ್ ಲುಕ್ ಮರಳಿ ಪಡೆಯಲು ಮತ್ತೊಮ್ಮೆ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗಿದ್ದಾಳೆ. 

Viral: ನ್ಯಾಚುರಲ್ ಲುಕ್ ಪಡೆಯಲು ಮತ್ತೊಮ್ಮೆ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋದ ರಿಯಲ್ ಲೈಫ್ ಬಾರ್ಬಿ ಡಾಲ್ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 05, 2024 | 4:27 PM

ಪ್ಲಾಸ್ಟಿಕ್ ಸರ್ಜರಿಯ ಮೂಲಕ ಏನು ಬೇಕಾದ್ರೂ ಮಾಡ್ಬಹುದು. ಹೆಚ್ಚಾಗಿ ಸೆಲೆಬ್ರಿಟಿಗಳು ತಮ್ಮ ಮುಖ, ದೇಹದ ಅಂದ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಹೀಗೆ ಸೌಂದರ್ಯ ವರ್ಧನೆಗಾಗಿ  ಹಲವು ಸರ್ಜರಿಗಳನ್ನು ಮಾಡಿಸಿಕೊಂಡವರನ್ನು ನೀವು ನೋಡಿರಬಹುದಲ್ವಾ.  ಅದೇ ರೀತಿ ಬಾರ್ಬಿ ಡಾಲ್ ತರಹ ಕಾಣಿಸಿಕೊಳ್ಳಲು 42 ಲಕ್ಷ ರೂಪಾಯಿ ಖರ್ಚು ಮಾಡಿದ್ದ ರಿಯಲ್ ಲೈಫ್ ಬಾರ್ಬಿ ಇದೀಗ ತಾನು ಮುಂಚಿನ ರೀತಿಯಲ್ಲಿ ನೈಸರ್ಗಿಕವಾಗಿ ಕಾಣಬೇಕೆಂದು ಮತ್ತೊಮ್ಮೆ ಮೇಕ್ ಓವರ್ ಮಾಡಲು ಮುಂದಾಗಿದ್ದಾಳೆ.

ಹೌದು ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಿವಾಸಿಯಾದ 24 ವರ್ಷದ ಸೆರೆನಾ ಸ್ಮಿತ್ ತನ್ನ ನ್ಯಾಚುರಲ್ ಲುಕ್ ಅನ್ನು  ಮರಳಿ ಪಡೆಯಲು ಮತ್ತೊಮ್ಮೆ ಸರ್ಜರಿ ಮೊರೆ ಹೋಗಿದ್ದಾಳೆ. ಆಕೆ 2016 ರಲ್ಲಿ ತನ್ನ 18ನೇ ವಯಸ್ಸಿನಲ್ಲಿ ಬಾರ್ಬಿ ಡಾಲ್ ತರಹ ಕಾಣಿಸಿಲು 42 ಲಕ್ಷ ರೂಪಾಯಿ ಖರ್ಚು ಮಾಡಿ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಳು. ಅಷ್ಟೇ ಅಲ್ಲದೆ ಲಿಪ್, ಚೀಕ್ಸ್ ಫಿಲ್ಲರ್, ಬೊಟೆಕ್ಸ್ ಇತ್ಯಾದಿ ಕಾಸ್ಮೆಟಿಕ್ ಸರ್ಜರಿಗೂ ಕೂಡಾ ಒಳಗಾಗಿದ್ದಳು. ಆದರೆ ಇದೀಗ ಆಕೆ ತಾನು ಅನ್ಯ ಲೋಕದ ಏಲಿಯನ್ ರೀತಿಯಲ್ಲಿ ಕಾಣಿಸುತ್ತಿದ್ದೇನೆ ಎಂದು ಭಾವಿಸಿ ನ್ಯಾಚುರಲ್ ಲುಕ್ ಮರಳಿ ಪಡೆಯಲು ಮತ್ತೊಮ್ಮೆ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾಳೆ.

ಇದನ್ನೂ ಓದಿ: ನಾನು ಸುಂದರವಾಗಿದ್ದೇನೆ, ಎಲ್ಲಾ ಹುಡುಗಿಯರು ನನ್ನನ್ನು ಬಯಸುತ್ತಾರೆ; 20 ವರ್ಷದ ಹುಡುಗನಿಗೆ ವಿಚಿತ್ರ ಕಾಯಿಲೆ

ಆಕೆ ಈಗಾಗಲೇ ತನ್ನ ಮುಖದ ಫಿಲ್ಲರ್ ಗಳನ್ನು ಕರಗಿಸಿ, ನೈಸರ್ಗಿಕವಾಗಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ತನ್ನ ಗಲ್ಲದ ಆಕಾರವನ್ನು ಬದಲಾಯಿಸಿದ್ದು,   ʼನ್ಯಾಚುರಲ್ ಲುಕ್ ಅನ್ನು ಸ್ವಲ್ಪ ಮಟ್ಟಿಗೆ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆʼ ಎಂದು ಸೆರೆನಾ ಹೇಳಿದ್ದಾಳೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ