Viral Video: ನನ್ನ ಪ್ರಿಯಕರ ನಮ್ಮ ಜತೆ ಇರಬೇಕು ಎಂದು ಟ್ರಾನ್ಸ್ ಫಾರ್ಮರ್ ಕಂಬವೇರಿದ 3 ಮಕ್ಕಳ ತಾಯಿ
ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, 3 ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರ ಕೂಡಾ ನಮ್ಮ ಜೊತೆ ಇದೇ ಮನೆಯಲ್ಲಿ ಇರಬೇಕೆಂದು ಪಟ್ಟು ಹಿಡಿದಿದ್ದಾಳೆ. ಪತಿ ಇದಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆ ವಿದ್ಯುತ್ ಕಂಬವೇರಿ ಹೈ ಡ್ರಾಮ ಸೃಷ್ಟಿಸಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಕೆಲವೊಬ್ಬರು ವಿವಾಹೇತರ ಸಂಬಂಧದಲ್ಲಿ ತೊಡಗುತ್ತಾರೆ. ಅದು ಅವರ ವೈವಾಹಿಕ ಜೀವನವನ್ನು ನಾಶ ಪಡಿಸುವುದಂತು ಖಂಡಿತ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಪತಿಗೆ ತನ್ನ ಪತಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ, ನನ್ನ ಪ್ರಿಯಕರ ಕೂಡಾ ನಮ್ಮ ಜೊತೆ ಇದೇ ಮನೆಯಲ್ಲಿ ಇರಬೇಕೆಂದು ಆ ಮಹಿಳೆ ಒತ್ತಾಯಿಸಿದ್ದಾಳೆ. ಪತಿ ಇದಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆ ಟ್ರಾನ್ಸ್ ಫಾರ್ಮರ್ ಕಂಬವೇರಿ ಹೈ ಡ್ರಾಮವನ್ನೇ ಸೃಷ್ಟಿಸಿದ್ದಾಳೆ.
ಈ ಘಟನೆ ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಪಿಪ್ರೈಚ್ ಪಟ್ಟಣದಲ್ಲಿ ನಡೆದಿದ್ದು, ಪತಿಯೊಬ್ಬನಿಗೆ ತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ ಹೈವೋಲ್ಟೇಜ್ ನಾಟಕವೊಂದು ನಡೆದಿದೆ. ವರದಿಗಳ ಪ್ರಕಾರ ಮೂರು ಮಕ್ಕಳ ತಾಯಿಯಾದ 34 ವರ್ಷದ ಮಹಿಳೆಯೊಬ್ಬಳು ತನ್ನ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ತಿಳಿದ ನಂತರ ಆಕೆ ವಿದ್ಯುತ್ ಕಂಬವೇರಿ ಹೈ ಡ್ರಾಮ ಸೃಷ್ಟಿಸಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ:
मोहब्बत का ऐसा सिला…’, 3 बच्चों की मां को चढ़ा ‘इश्क का बुखार’, प्रेमी को साथ रखने की बात पर पति से नाराज, खंभे पर चढ़ करने लगी तांडव !!#यूपी के #गोरखपुर से एक हैरान कर देने वाला मामला सामने आया है। यहां तीन बच्चो की माँ को प्यार का खुमार चढ़ा है और प्यार का खुमार भी इस कदर… pic.twitter.com/J6XQ4FMxRh
— MANOJ SHARMA LUCKNOW UP🇮🇳🇮🇳🇮🇳 (@ManojSh28986262) April 3, 2024
ಸುಮಾರು ಏಳು ವರ್ಷಗಳಿಂದ ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಳು. ಇದೀಗ ಈ ಬಗ್ಗೆ ಆಕೆಯ ಪತಿಗೆ ತಿಳಿದಿದ್ದು, ಇಬ್ಬರ ನಡುವೆ ಜಗಳ ನಡೆದಿದೆ. ಇಷ್ಟಾದರೂ ಪ್ರಿಯಕರ ಕೂಡಾ ಇದೇ ಮನೆಯಲ್ಲಿ ನಮ್ಮ ಜೊತೆಯಲ್ಲಿಯೇ ಇರಲಿ, ಇದರಿಂದ ನಮ್ಮ ಆರ್ಥಿಕತೆಯು ಸುಧಾರಿಸುತ್ತದೆ ಎಂದು ಆ ಮಹಿಳೆ ಒತ್ತಾಯಿಸಿದ್ದಾಳೆ. ಆದರೆ ಈಕೆಯ ನಿರ್ಧಾರಕ್ಕೆ ಪತಿ ಒಪ್ಪಿಗೆ ನೀಡಲಿಲ್ಲ. ಇದರಿಂದ ಕೋಪಗೊಂಡ ಆ ಮಹಿಳೆ ಮನೆಯಿಂದ ಹೊರ ನಡೆದು ಟ್ರಾನ್ಸ್ ಫಾರ್ಮರ್ ಕಂಬವೇರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇವರ ಹೈಡ್ರಾಮವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಆ ತಕ್ಷಣ ಪೊಲೀಸರು ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಆ ಮಹಿಳೆಯ ಮನವೊಲಿಸಿ ಆಕೆಯನ್ನು ಕಂಬದಿಂದ ಕೆಳಗಿಳಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಸದ್ಯ ಮಹಿಳೆ ಸುರಕ್ಷಿತವಾಗಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನ ಹವಾಮಾನ ಚಿಲ್ನಿಂದ ಗ್ರಿಲ್ ಆಗುತ್ತಿದೆ, ಕೂಲ್ ಆಗಲು ಓಯೋ ರೂಮ್ ಬುಕ್ ಮಾಡಿದ ವ್ಯಕ್ತಿ
ಮನೋಜ್ ಶರ್ಮ (@ManojSh28986262) ಎಂಬವರು ಈ ಕುರಿತ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಒಂದಷ್ಟು ಜನ ಟ್ರಾನ್ಸ್ಫಾರ್ಮರ್ ಕಂಬವೇರಿ ಮಹಿಳೆಯ ಮನವೊಲಿಸಿ ಆಕೆಯನ್ನು ಕೆಳಗಿಳಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಹಿಳೆಯ ನಡೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದು, ಇಂತಹವರು ಸಮಾಜಕ್ಕೆ ಕಳಂಕ, ಇವರುಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ