AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆನೆ ತುಳಿತಕ್ಕೆ ಮಾವುತ ಸಾವು; ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ

Viral Video: ಆನೆ ತುಳಿತಕ್ಕೆ ಮಾವುತ ಸಾವು; ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ

ಅಕ್ಷತಾ ವರ್ಕಾಡಿ
|

Updated on:Apr 04, 2024 | 5:50 PM

Share

ಅರವಿಂದ್ ಎಂಬ 26 ವರ್ಷದ ಮಾವುತ ಆನೆಯ ತುಳಿತಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಭೀಕರ ಘಟನೆಗೆ ಸಂಬಂಧಿಸಿದ ದೃಶ್ಯ ದೇವಾಲಯದ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಮಾವುತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಕೇರಳದ ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದ ಕಾರ್ಯಕ್ರಮದ ವೇಳೆ ಪುತ್ತುಪ್ಪಲ್ಲಿ ಮೂಲದ ಅರವಿಂದ್ ಎಂಬ 26 ವರ್ಷದ ಮಾವುತ ಆನೆಯ ತುಳಿತಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಬುಧವಾರ(ಏ.03) ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಭೀಕರ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ದೇವಾಲಯದ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

@baldwhiner ಎಂಬ ಟ್ವಿಟರ್​​ ಖಾತೆಯಲ್ಲಿ ಈ ವಿಡಿಯೋವನ್ನು ಇಂದು(ಏಪ್ರಿಲ್​​ 04) ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 6 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚಿನ ನೆಟ್ಟಿಗರನ್ನು ತಲುಪಿದೆ.

ಇದನ್ನೂ ಓದಿ: ಕಾರು ಹರಿದು 4 ವರ್ಷದ ಮಗು ಸಾವು: ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆ

ಕುಂಜುಲಕ್ಷ್ಮಿ ಎಂದು ಕರೆಯಲ್ಪಡುವ ಈ ಆನೆಯನ್ನು ದೇವಾಲಯದ ಸಮಾರಂಭಕ್ಕೆ ತಕ್ಕಂತೆ ಅಲಂಕಾರಗೊಳಿಸಲಾಗಿತ್ತು. ಶಾಂತವಾಗಿದ್ದ ಆನೆ ಇದ್ದಕ್ಕಿದ್ದಂತೆ ಓಡಾಡತೊಡಗಿದ್ದು ಆನೆಯ ಪಾದಗಳ ಸಮೀಪದಲ್ಲಿದ್ದ ಮಾವುತ ಅರವಿಂದನನ್ನು ಕಾಲಿನಲ್ಲಿ ತುಳಿದು ಹಾಕಿದೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ವೈಕಂ ತಾಲೂಕು ಆಸ್ಪತ್ರೆ ಮಾವುತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 04, 2024 05:50 PM