ಸ್ಮಶಾನದಿಂದ ಎದ್ದುಬಂದ ಎರಡು ದೆವ್ವಗಳಿಂದ ಜಮೀನು ವ್ಯಾಪಾರ!
ದೆವ್ವಗಳನ್ನು ಯಾರಾದರೂ ನೋಡಿದ್ದೀರಾ, ಅವುಗಳ ಬಗ್ಗೆ ಕೇಳಿರಬಹುದಲ್ಲವೇ, 1961ರಲ್ಲಿ ಹಾಗೂ 2019ರಲ್ಲಿ ನಿಧನರಾದ ಇಬ್ಬರು ಜಮೀನು ವ್ಯಾಪಾರ ಮಾಡುತ್ತಿದ್ದ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಬಲ್ಲಿಯಾದ ರಾಸ್ರಾ ಪ್ರದೇಶದ ನಿವಾಸಿ ಅಜಿಮುದ್ದೀನ್ 1961ರಲ್ಲಿ ನಿಧನರಾಗಿದ್ದರೆ ಶೋಯೆಬ್ 2019ರಲ್ಲಿ ನಿಧನರಾಗಿದ್ದರು. ಆದರೆ ಅವರ ಸಾವಿನ ನಂತರವೂ ಭೂ ವ್ಯವಹಾರ ನಡೆಯುತ್ತಿತ್ತು.
ದೆವ್ವಗಳನ್ನು ಯಾರಾದರೂ ನೋಡಿದ್ದೀರಾ, ಅವುಗಳ ಬಗ್ಗೆ ಕೇಳಿರಬಹುದಲ್ಲವೇ, 1961ರಲ್ಲಿ ಹಾಗೂ 2019ರಲ್ಲಿ ನಿಧನರಾದ ಇಬ್ಬರು ಜಮೀನು ವ್ಯಾಪಾರ ಮಾಡುತ್ತಿದ್ದ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಬಲ್ಲಿಯಾದ ರಾಸ್ರಾ ಪ್ರದೇಶದ ನಿವಾಸಿ ಅಜಿಮುದ್ದೀನ್ 1961ರಲ್ಲಿ ನಿಧನರಾಗಿದ್ದರೆ ಶೋಯೆಬ್ 2019ರಲ್ಲಿ ನಿಧನರಾಗಿದ್ದರು. ಆದರೆ ಅವರ ಸಾವಿನ ನಂತರವೂ ಭೂ ವ್ಯವಹಾರ ನಡೆಯುತ್ತಿತ್ತು. ಈ ವಿಷಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಸತ್ಯ ಹೊರ ಬಂದಾಗ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಿಜವಾಗಿಯೂ ಅಲ್ಲಿ ನಡೆದಿರುವುದೇ ಬೇರೆ, ಇಲ್ಲಿ ಯಾವ ಭೂತಗಳೂ ಇಲ್ಲ ಬದಲಾಗಿ ಮೃತರ ಹೆಸರಿನಲ್ಲಿ ವ್ಯವಹಾರಗಳು ನಡೆಯುತ್ತಿತ್ತು. ಮೃತರ ಸಹಿ ನಕಲಿ ಮಾಡಿ ಜಮೀನು ನೋಂದಣಿ ಮಾಡಲಾಗಿದೆ. ಸೆಕ್ಷನ್ 229 ಬಿ ಅಡಿಯಲ್ಲಿ ಎಸ್‌ಡಿಎಂ ರಾಸ್ರಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸತ್ತವರ ಭೂಮಿಯನ್ನು ಲೂಟಿ ಮಾಡಿ ಕಬಳಿಸುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಕೆಲವರು ಸತ್ತವರನ್ನು ಬದುಕಿಸಿದರು, ಅಷ್ಟೇ ಅಲ್ಲ. ಸತ್ತವರ ಪರವಾಗಿ ವಕೀಲರನ್ನು ನೇಮಿಸಿದರು. ಭೂಮಿಯನ್ನು ಖರೀದಿಸಿ ಮಾರಲಾಯಿತು. ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ರಾಸ್ರಾ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ಓದಿ: ಔರಾದ್ ಪಟ್ಟಣದ ಹೃದಯ ಭಾಗದಲ್ಲಿರುವ 2 ಎಕರೆ ಸ್ಮಶಾನ ಭೂಮಿಯ ಮೇಲೆ ಧನಪಿಶಾಚಿಗಳ ಕಣ್ಣು!
ರಸ್ರಾ ಪೊಲೀಸರು ಆರೋಪಿಗಳಾದ ರೆಯಾಜ್ ಅಹ್ಮದ್, ಫೈಯಾಜ್ ಅಹಮದ್, ಮುಸ್ತಾಕ್, ಮುಮ್ತಾಜ್, ಮುಷರಫ್ ಜಹಾಂಗೀರ್, ಸಾಯಿರಾ ಬಾನೋ ವಿರುದ್ಧ ಕಲಂ 419, 20, 67, 68, 71 ಮತ್ತು 506 ರ ಅಡಿಯಲ್ಲಿ ಅಕ್ರಮವಾಗಿ ಭೂಮಿಯನ್ನು ಕಬಳಿಸಲು ಯತ್ನಿಸಿದ ಪ್ರಕರಣದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸುಮನ್ ಜೈಸ್ವಾಲ್ ಮತ್ತು ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ