ಔರಾದ್ ಪಟ್ಟಣದ ಹೃದಯ ಭಾಗದಲ್ಲಿರುವ 2 ಎಕರೆ ಸ್ಮಶಾನ ಭೂಮಿಯ ಮೇಲೆ ಧನಪಿಶಾಚಿಗಳ ಕಣ್ಣು!

ಸ್ಮಶಾನ ಭೂಮಿ ತಾಲೂಕು ಕೇಂದ್ರ ಔರಾದ್ ಪಟ್ಟಣದ ಹೃದಯ ಭಾಗದಲ್ಲಿದೆ. ಪ್ರತಿ ಸೋಮವಾರ ಸಂತೆ ನಡೆಯುವ ಸ್ಥಳದಲ್ಲಿಯೇ ಈ ಸ್ಮಶಾನ ಇದೆ. ಇಲ್ಲಿನ ಒಂದು ಗುಂಟೆ ಜಾಗಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇದೆ. ಹೀಗಾಗಿ ಸ್ಮಶಾನ ಭೂಮಿಗೆ ಭೂಗಳ್ಳರ ಕಣ್ಣು ಬಿದ್ದಿದ್ದು ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಳಿಗೆ ಕಟ್ಟಿಸಿ ಅದನ್ನ ಬಾಡಿಗೆ ಕೊಟ್ಟು ಹಣ ಮಾಡಿಕೊಳ್ಳುತ್ತಿದ್ದಾರೆ.

ಔರಾದ್ ಪಟ್ಟಣದ ಹೃದಯ ಭಾಗದಲ್ಲಿರುವ 2 ಎಕರೆ ಸ್ಮಶಾನ ಭೂಮಿಯ ಮೇಲೆ ಧನಪಿಶಾಚಿಗಳ ಕಣ್ಣು!
2 ಎಕರೆ ಸ್ಮಶಾನ ಭೂಮಿಯ ಮೇಲೆ ಧನಪಿಶಾಚಿಗಳ ಕಣ್ಣು!
Follow us
ಸುರೇಶ ನಾಯಕ
| Updated By: ಸಾಧು ಶ್ರೀನಾಥ್​

Updated on:Feb 27, 2024 | 5:30 PM

ಆ ಪಟ್ಟಣದ ಹೃದಯಭಾಗದಲ್ಲೇ ಎರಡು ಎಕರೆಯಷ್ಟು ಸ್ಮಶಾನ ಭೂಮಿಯಿದೆ. ಆ ಸ್ಮಶಾನ ಭೂಮಿಯ ಒಂದು ಕಡೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಳಿಗೆ ಕಟ್ಟಿಕೊಂಡಿದ್ದಾರೆ. ಒತ್ತುವರಿಯಾಗಿರುವ ಸ್ಮಶಾನ ಭೂಮಿ (graveyard land) ತೆರವುಗೊಳಿಸಿ ಎಂದು ಪಟ್ಣಣದ ನಿವಾಸಿಗಳು ಕಳೆದೊಂದು ವಾರದಿಂದ ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸ್ಮಶಾನ ಭೂಮಿಗೂ ಕಣ್ಣ ಹಾಕುತ್ತಿರುವ ಭೂಗಳ್ಳರು… ಸ್ಮಶಾನ ಭೂಮಿಗಾಗಿ ಪಟ್ಟಣದ ಜನರ ಹೋರಾಟ… ಶವಗಳನ್ನು ಹೂಳಲು ಜಾಗೆಯಿಲ್ಲದೆ ಪರದಾಟ… ಸ್ಮಶಾನ ಜಾಗೆ ಒತ್ತುವರಿ (encroachment) ತೆರವುಗೋಳಿಸಿ ಎಂದು ಜನರ ಮನವಿ…ಹೌದು ಹೀಗೆ ತಮ್ಮ ಸ್ಮಶಾನ ಭೂಮಿಯನ್ನ ನಮಗೆ ಕೊಡಿಸಿ ಎಂದು ಬೀದರ್ ಜಿಲ್ಲೆಯ ಔರಾದ್ ಪಟ್ಟಣದ (Aurad, bidar) ತಹಶೀಲ್ದಾರ್ ಕಚೇರಿ ಎದುರು ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ಇವರೆಲ್ಲ ತಾಲೂಕು ಕೇಂದ್ರವಾದ ಔರಾದ್ ಪಟ್ಟಣದ ನಿವಾಸಿಗಳು. ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಔರಾದ್ ಪಟ್ಣದ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಪಟ್ಟಣದ ಹೃದಯ ಭಾಗದಲ್ಲಿಯೇ ಎರಡು ಎಕರೆ 12 ಗುಂಟೆಯಷ್ಟು ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ಸ್ಮಶಾನ ಭೂಮಿಯಿದೆ. ಔರಾದ್ ಪಟ್ಟಣದ ನಿವಾಸಿಗಳು ಮೃತಪಟ್ಟರೆ ಇದೇ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಆದರೆ ಕೆಲವು ವರ್ಷದ ಹಿಂದೆ ಈ ಸ್ಮಶಾನ ಭೂಮಿಯನ್ನ ಒಬ್ಬ ವ್ಯಕ್ತಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಳಿಗೆಯನ್ನ ಕಟ್ಟಿಸಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಪಡೆಯುತ್ತಿದ್ದಾನೆ.

ಇಲ್ಲಿ ಒತ್ತುವರಿಯಾಗಿರುವ ಸ್ಮಶಾನ ಭೂಮಿಯನ್ನ ತೆರವುಗೊಳಿಸಿ ಎಂದು ಹತ್ತಾರು ಸಲ ಪಟ್ಣದ ನಿವಾಸಿಗಳು ಔರಾದ್ ತಹಶೀಲ್ದಾರ್ ಗೆ ಮನವಿ ಮಾಡಿದರೂ ಏನೂ ಪ್ರಯೋಜನ ಆಗಿಲ್ಲ. ಹೀಗಾಗಿ ಕಳೆದೊಂದು ವಾರದಿಂದ ಒತ್ತುವರಿಯಾಗಿರುವ ಸ್ಮಶಾನ ಭೂಮಿಯನ್ನ ನಮಗೆ ಕೊಡಿಸಿ ಎಂದು ಔರಾದ್ ಪಟ್ಟಣದ ನಿವಾಸಿಗಳು ವಿವಿಧ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದು ಒತ್ತುವರಿಯಾಗಿರುವ ಸ್ಮಶಾನ ಭೂಮಿಯನ್ನ ತೆರವುಗೊಳಿಸುವವರೆಗೆ ನಮ್ಮ ಹೋರಾಟ ಮುಂದೂವರೆಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಸ್ಮಶಾನ ಭೂಮಿ ತಾಲೂಕು ಕೇಂದ್ರ ಔರಾದ್ ಪಟ್ಟಣದ ಹೃದಯ ಭಾಗದಲ್ಲಿದೆ. ಪ್ರತಿ ಸೋಮವಾರ ಸಂತೆ ನಡೆಯುವ ಸ್ಥಳದಲ್ಲಿಯೇ ಈ ಸ್ಮಶಾನ ಇದೆ. ಇಲ್ಲಿನ ಒಂದು ಗುಂಟೆ ಜಾಗಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇದೆ. ಹೀಗಾಗಿ ಸ್ಮಶಾನ ಭೂಮಿಗೆ ಭೂಗಳ್ಳರ ಕಣ್ಣು ಬಿದ್ದಿದ್ದು ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಳಿಗೆ ಕಟ್ಟಿಸಿ ಅದನ್ನ ಬಾಡಿಗೆ ಕೊಟ್ಟು ಹಣ ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ಶವ ಹೂಳಲು ಜಾಗದ ಸಮಸ್ಯೆಯಾಗಿ ಜನರ ಪರದಾಟ ನಡೆಸುವಂತಾ ಸ್ಥಿತಿ ಇಲ್ಲೀಗ ನಿರ್ಮಾಣವಾಗಿದೆ. ಇನ್ನು ಒತ್ತುವರಿಯಾಗಿರುವ 16 ಗುಂಟೆ ಜಾಗವನ್ನು ಈ ಹಿಂದೆ 2010 ರಲ್ಲಿ ಪುರಸಭೆಯ ಮುಖ್ಯಾಧಿಕಾರಿಯೊಬ್ಬರು ಪಟ್ಟಣದ ಓರ್ವ ನಿವಾಸಿಗೆ ಜಾಗವನ್ನ ಮ್ಯುಟೆಷನ್ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ಕಾಡಿನಲ್ಲೂ ಮೇವಿಲ್ಲ, ಹೈನುಗಾರಿಕೆಯನ್ನೇ ಅವಲಂಬಿಸಿರುವ 18 ಗೌಳಿ ಗ್ರಾಮಗಳ ನೂರಾರು ಕುಟುಂಬಗಳು ಸಂಕಷ್ಟದಲ್ಲಿ

ಹೀಗಾಗಿ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ಜಾಗೆಯನ್ನ ಬಿಡಲು ಒಪ್ಪುತ್ತಿಲ್ಲ. ಪಟ್ಟಣದ ನಿವಾಸಿಗಳು ಎಷ್ಟೇ ಸಲ ಒತ್ತುವರಿದಾರನಿಗೆ ಜಮೀನು ಬಿಡು ಎಂದರೂ ಕೂಡಾ ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಮ್ಯುಟೆಷನ್ ಮಾಡಿರುವುದನ್ನ ತಹಶೀಲ್ದಾರ್ ಅವರು ಕ್ಯಾನ್ಸಲ್ ಮಾಡುವ ಅಧಿಕಾರವನ್ನ ಹೊಂದಿದ್ದಾರೆ. ಆದರೆ ಅವರು ಕೂಡಾ ಒತ್ತುವರಿದಾರನ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಪಟ್ಟಣದ ನಿವಾಸಿಗಳು ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಹೀಗಾಗಿ ಕಳೆದೊಂದು ವಾರದಿಂದ ಔರಾದ್ ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.

ಸ್ಮಶಾನ ಭೂಮಿಗಳನ್ನ ಯಾರೇ ಒತ್ತುವರಿ ಮಾಡಿಕೊಂಡಿದ್ದರು ಅದನ್ನ ತೆರೆವುಗೊಳಿಸಬೇಕು ಎಂದು ಸರಕಾರ ಆಯಾ ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಆದೇಶ ನೀಡಿದೆ. ಆದರೆ ಅದೇ ಸರಕಾರಿ ಅಧಿಕಾರಿಗಳು ಸರಕಾರದ ಆದೇಶವನ್ನ ಧಿಕ್ಕರಿಸುತ್ತಿದ್ದಾರೆ. ಏನೇ ಇರಲಿ ಜನರ ಮನವಿಯನ್ನ ಜಿಲ್ಲಾಧಿಕಾರಿಗಳು ಪುರಸ್ಕರಿಸಿ ಒತ್ತುವರಿ ಆಗಿರುವ ಸ್ಮಶಾನ ಭೂಮಿ ತೆರವುಗೊಳಿ ಅವರಿಗೆ ಕೊಡಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:13 pm, Tue, 27 February 24