ಇತ್ತೀಚಿನ ದಿನಗಳಲ್ಲಿ , ಅನೇಕ ರೈಲುಗಳಲ್ಲಿ ಮೊಬೈಲ್ ಫೋನ್ ಚಾರ್ಜರ್‌ಗಳು ಮತ್ತು ಮೊಬೈಲ್ ಪವರ್ ಬ್ಯಾಂಕ್‌ಗಳ ಮಾರಾಟಗಳು ಹೆಚ್ಚಾಗಿ ನಡೆಯುತ್ತಿದೆ. ಕಡಿಮೆ ಬೆಲೆಗೆ ಯಾವುದೇ ವಸ್ತು ಸಿಗುತ್ತಿದ್ದರೆ ಮುಗಿಬಿದ್ದು ಆ ವಸ್ತು ಖರೀದಿಸುವವರು ಹೆಚ್ಚು. ಆದರೆ ಅವುಗಳನ್ನು ಖರೀದಿಸಿದರೆ ಮೋಸ ಹೋಗುವುದು ಖಚಿತ ಎಂಬುದಕ್ಕೆ ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ವ್ಯಕ್ತಿಯೊಬ್ಬ ಇಯರ್ ಫೋನ್, ಪವರ್ ಬ್ಯಾಂಕ್ ಮಾರಾಟ ಮಾಡುತ್ತಾ ಬಂದಿದ್ದು, ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದರಿಂದ ಆತ ಅದನ್ನು ಖರೀದಿಸಲು ಪ್ರಯತ್ನಿಸುತ್ತಾನೆ. ಈ ವೇಳೆ ಮಾರಾಟಗಾರ “ಪವರ್ ಬ್ಯಾಂಕ್ ಗೆ ಫುಲ್ ಗ್ಯಾರಂಟಿ ನೀಡುವುದರ ಜೊತೆಗೆ ಡ್ಯಾಮೇಜ್ ಆಗಿದ್ದರೆ ವಾಪಸ್ ಕೊಡಬಹುದು” ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಗ್ರಾಹಕ ಪವರ್ ಬ್ಯಾಂಕ್ ಒಡೆದು ನೋಡಿದಾಗ ಅದರೊಳಗೆ ಮಣ್ಣು ಕಂಡು ದಂಗಾಗಿ ಹೋಗಿದ್ದಾನೆ. ಭಯಗೊಂಡ ಸೆಲ್ ಮಾಡುವ ಯುವಕ ಕೂಡಲೇ ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಒತ್ತಾಯಿಸಿದ್ದಾನೆ. ಇದಲ್ಲದೇ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಏತನ್ಮಧ್ಯೆ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ