Viral Video: ಇದೆಂಥಾ ಕ್ರೂರ ವರ್ತನೆ? ವೃದ್ಧ ರೋಗಿಗೆ ಮನಬಂದಂತೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ
ರೋಗಿಗಳನ್ನು ಸರಿಯಾಗಿ ಉಪಚರಿಸುವುದು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಕರ್ತವ್ಯವಾಗಿದೆ. ಆದರೆ ಇಲ್ಲೊಬ್ಬ ಸಿಬ್ಬಂದಿ ತನ್ನ ಕರ್ತವ್ಯವನ್ನೂ ಮರೆತೂ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯೊಬ್ಬರಿಗೆ ಮನ ಮನಬಂದಂತೆ ಥಳಿಸಿ, ಮೃಗೀಯ ರೀತಿಯಲ್ಲಿ ವರ್ತಿಸಿದ್ದಾನೆ. ಈ ಅಮಾನವೀಯ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯೂ ವೈದ್ಯರನ್ನು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳನ್ನು ತಮ್ಮ ಜೀವ ಉಳಿಸುವ ದೇವರೆಂದು ಭಾವಿಸುತ್ತಾರೆ. ಹೀಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಸರಿಯಾಗಿ ಉಪಚರಿಸುವುದು ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಕರ್ತವ್ಯವಾಗಿದೆ. ಆದರೆ ಕೆಲ ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನೂ ಮರೆತೂ ರೋಗಿಗಳ ಮೇಲೆ ದರ್ಪ ತೋರಿಸುತ್ತಾರೆ. ಆಸ್ಪತ್ರೆಗಳಲ್ಲಿ ನಡೆಯುವ ಇಂತಹ ಅಮಾನವೀಯ ಘಟನೆಗಳ ಕುರಿತ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ನರ್ಸಿಂಗ್ ಸಿಬ್ಬಂದಿಯೊಬ್ಬ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯೊಬ್ಬರಿಗೆ ಮನ ಮನಬಂದಂತೆ ಥಳಿಸಿ, ಮೃಗೀಯ ರೀತಿಯಲ್ಲಿ ವರ್ತಿಸಿದ್ದಾನೆ. ಈ ಅಮಾನವೀಯ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯೊಬ್ಬರ ಎದೆಗೆ ನರ್ಸಿಂಗ್ ಸಿಬ್ಬಂದಿಯೊಬ್ಬ ತನ್ನ ಮೊಣಕೈಯಿಂದ ಹೊಡೆದಿದ್ದಾನೆ. ಈತನ ಈ ಮೃಗೀಯ ವರ್ತನೆ ಆಸ್ಪತ್ರೆ ವಾರ್ಡ್ನಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಟಿವಿ ಫುಟೇಜ್ ಪ್ರಕಾರ ಈ ಘಟನೆ ಜೂನ್ 19 ರಂದು ನಡೆದಿದೆ. ಆದರೆ ಇದು ಎಲ್ಲಿಯ ಆಸ್ಪತ್ರೆಯಲ್ಲಿ ನಡೆದಿದ್ದು ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಪ್ರೋ. ಸುದಾಂಶು ತ್ರಿವೇದಿ (@Sudanshutrivedi) ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜನರು ವೈದ್ಯರಿಗೆ ದೇವರ ಸ್ಥಾನ ನೀಡಿದ್ದಾರೆ, ಆದರೆ ಇಲ್ಲಿ ವೈದ್ಯರು ರೋಗಿಗೆ ದೆವ್ವದ ರೂಪದಲ್ಲಿ ಕಾಡಿದ್ದಾನೆ” ಎಂಬ ಶಿರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
लोग डॉक्टर को भगवान का दर्जा दिए है
परंतु यहाँ डॉक्टर- शैतान का रूप में है देखिए 😳😳 pic.twitter.com/y8BrEj386x
— Prof. Sudhanshu Trivedi (@Sudanshutrivedi) June 24, 2024
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಂತಹ ವೃದ್ಧ ರೋಗಿಯೊಬ್ಬರ ಬಳಿ ಬಂದ ನರ್ಸಿಂಗ್ ಸಿಬ್ಬಂದಿ ತನ್ನ ಮೊಣಕೈಯಿಂದ ರೋಗಿಯ ಎದೆಗೆ ಜೋರಾಗಿ ಹೊಡೆದಿದ್ದಾನೆ. ತನಗೆ ಬಿದ್ದ ಏಟಿಗೆ ನೋವನ್ನು ತಡೆಯಲಾರದೆ ರೋಗಿ ನರಳಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಸಾಮಾನ್ಯರಂತೆ ವಾರಣಾಸಿ ಬೀದಿಯಲ್ಲಿ ಚಾಟ್ಸ್ ಸವಿದ ನೀತಾ ಅಂಬಾನಿ; ವಿಡಿಯೋ ವೈರಲ್
ಜೂನ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮೃಗೀಯ ವರ್ತನೆಯನ್ನು ತೋರಿದ ಈ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ