Viral Video: ಬೈಕ್ ನಿಲ್ಲಿಸಿ ನಡು ರಸ್ತೆಯಲ್ಲಿ ಯುವತಿಯ ಮುಂದೆ ಹಸ್ತಮೈಥುನ ಮಾಡಿದ ವ್ಯಕ್ತಿ
ಕೆಲವು ಪುಂಡ ಪೋಕರಿಗಳು ಮಾಡುವ ಅಸಹ್ಯ ಕೃತ್ಯಗಳಿಂದ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಓಡಾಡಲು ಕೂಡಾ ಕಷ್ಟವಾಗಿಬಿಟ್ಟಿದೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ರಸ್ತೆಯಲ್ಲಿ ಯುವತಿಯೊಬ್ಬಳು ಬರುತ್ತಿರುವುದನ್ನು ಕಂಡ ಕಾಮುಕನೊಬ್ಬ ಬೈಕ್ ನಿಲ್ಲಿಸಿ, ಯುವತಿಯ ಎದುರೇ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಈತನ ಈ ಹೇಯ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಕೆಲವು ವಿಕೃತಿ ಮನಸ್ಸಿನ ವ್ಯಕ್ತಿಗಳಿಂದ ಹೆಣ್ಣುಮಕ್ಕಳು ಓಡಾಡಲು ಕಷ್ಟವಾಗಿಬಿಟ್ಟಿದೆ. ಒಂಟಿ ಹೆಣ್ಣು ಮಕ್ಕಳು ಸಿಕ್ಕರೆ ಸಾಕು ಕೆಲವು ಕೆಟ್ಟ ಮನಸ್ಥಿತಿಯ ಪುರುಷರು ಅವರ ಮೈ ಮುಟ್ಟುವಂತಹದ್ದೂ, ಆ ಹೆಣ್ಣು ಮಕ್ಕಳನ್ನೂ ಹಿಂಬಾಲಿಸುತ್ತಾ ಹೋಗಿ ಪೀಡಿಸುವಂತಹದ್ದು ಮಾಡುತ್ತಿರುತ್ತಾರೆ. ವಿಶೇಷವಾಗಿ ಬಸ್ಸು, ರೈಲುಗಳಲ್ಲಿ ಹೆಣ್ಣು ಮಕ್ಕಳ ಪಕ್ಕ ಕುಳಿತುಕೊಂಡು ಕೆಲವೊಬ್ಬರು ಮೈ ಮುಟ್ಟುತ್ತಾ ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಇಂತಹ ಹೇಯ ಕೃತ್ಯಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ರಸ್ತೆಯಲ್ಲಿ ಯುವತಿಯೊಬ್ಬಳು ಬರುತ್ತಿರುವುದನ್ನು ಕಂಡ ಕಾಮುಕನೊಬ್ಬ ಬೈಕ್ ನಿಲ್ಲಿಸಿ, ಯುವತಿಯ ಎದುರೇ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಈತನ ಈ ಹೇಯ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪಶ್ಚಿಮ ಬಂಗಾಳದ ಬಸಿರ್ಹತ್ ಎಂಬಲ್ಲಿ ಈ ನಾಚಿಕೆಗೇಡಿನ ಕೃತ್ಯ ನಡೆದಿದ್ದು, ಬೈಕ್ ನಿಲ್ಲಿಸಿ ನಡು ರಸ್ತೆಯಲ್ಲಿಯೇ ಕಾಮುಕನೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿದ್ದಾನೆ. ಈ ಕೃತ್ಯ ಅಲ್ಲೇ ಇದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈತನ ಈ ಅಸಭ್ಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸಿರಾಜ್ (@sirajnoorani) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೆಣ್ಣು ಮಕ್ಕಳಿಗೆ ರಸ್ತೆಯಲ್ಲಿ ಓಡಾಡಲು ಕೂಡಾ ಕಷ್ಟವಾಗಿಬಿಟ್ಟಿದೆ ನೋಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
The viral video is being said to be from #Basirhat in #WestBengal!! See where it has become difficult for sisters and daughters to walk on the road?#viralvideo pic.twitter.com/fbbuc3e1KA
— Siraj Noorani (@sirajnoorani) June 24, 2024
ವೈರಲ್ ವಿಡಿಯೋದಲ್ಲಿ ಕಾಮುಕನೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿರುವ ದೃಶ್ಯವನ್ನು ಕಾಣಬಹುದು. ದೂರದಲ್ಲಿ ಯುವತಿಯೊಬ್ಬಳು ಬರುತ್ತಿರುವುದನ್ನು ಕಂಡ ಬೈಕ್ ಸವಾರ ಅಲ್ಲೇ ಬೈಕ್ ನಿಲ್ಲಿಸಿ, ಯುವತಿ ತನ್ನ ಹತ್ತಿರ ಬರುವವರೆಗೂ ಕಾದೂ, ಆಕೆ ಬಂದ ಕೂಡಲೇ ಅವಳ ಮುಂದೆ ಹಸ್ತ ಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ವರ್ತನೆಯಿಂದ ಭಯಭೀತಳಾದ ಯುವತಿ ಅಲ್ಲಿಂದ ಓಡಿ ಹೋಗಿದ್ದಾಳೆ.
ಇದನ್ನೂ ಓದಿ: ಇದೆಂಥಾ ಕ್ರೂರ ವರ್ತನೆ? ವೃದ್ಧ ರೋಗಿಗೆ ಮನಬಂದಂತೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ
ಜೂನ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇಂತಹ ಕಾಮುಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Tue, 25 June 24