Viral Video: ಇಳಿ ವಯಸ್ಸಿನಲ್ಲೂ ಕುಂದದ ಜೀವನೋತ್ಸಾಹ… ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಗಟ್ಟಿಗಿತ್ತಿ
ಆ ಅಜ್ಜಿಯ ವಯಸ್ಸು ಸುಮಾರು 70 ದಾಟಿರಬಹುದು. ವಯಸ್ಸಾಯಿತು ಇನ್ನೇನೂ ದುಡಿಯುವ ಅವಶ್ಯಕತೆಯಿಲ್ಲ, ಮಕ್ಕಳು ನನ್ನನೂ ಸಾಕುತ್ತಾರೆ ಎಂಬ ಯಾವ ಅಭಿಲಾಷೆಯನ್ನು ಇಟ್ಟುಕೊಳ್ಳದೆ ತನ್ನ ಇಳಿವಯಸ್ಸಿನಲ್ಲೂ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಜ್ಜಿಯ ಸ್ವಾವಲಂಬಿ ಜೀವನವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಜೀವನದಲ್ಲಿ ಒಂದು ಸಣ್ಣ ಕಷ್ಟ ಬಂದ್ರೂ ಸಾಕು ಜೀವನವೇ ಸಾಕಾಗಿದೆ ಎಂದು ಜೀವನದಲ್ಲಿನ ಉತ್ಸಾಹವನ್ನೇ ಕಳೆದುಕೊಳ್ಳುವ ಈಗಿನ ಪೀಳಿಗೆಯ ಜನರ ಮಧ್ಯೆ ಇಲ್ಲೊಬ್ರು ವೃದ್ಧೆ ವಯಸ್ಸಾದರೆ ಏನಂತೆ ದುಡಿಯುವ ಹುಮ್ಮಸ್ಸು, ಜೀವನೋತ್ಸಾಹ ನನ್ನಲ್ಲಿದೆ ಎನ್ನುತ್ತಾ ತನ್ನ ಇಳಿ ವಯಸ್ಸಿನಲ್ಲೂ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಡುತ್ತಾ ಜೀವನವನ್ನು ಸಾಗಿಸುತ್ತಿದ್ದಾರೆ. ವಯಸ್ಸಾಯಿತು, ಇನ್ನೇನು ಕೆಲಸ ಮಾಡುವ ಅವಶ್ಯಕತೆ ನನಗಿಲ್ಲ, ನನ್ನ ಮಕ್ಕಳು ನನನ್ನು ಸಾಕುತ್ತಾರೆ, ಮನೆಯಲ್ಲಿ ಆರಾಮವಾಗಿ ಇದ್ದರಾಯಿತು ಎಂದು ಯೋಚಿಸದೆ ಇದ್ದಷ್ಟು ದಿನ ಸ್ವಾವಲಂಬಿ ಜೀವನವನ್ನು ನಡೆಸಬೇಕೆಂದು ಪೆಟ್ರೋಲ್ ಬಂಕ್ನಲ್ಲಿ ರಾತ್ರಿ ಪಾಳಿಯ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರ ಈ ಸ್ಪೂರ್ತಿದಾಯಕ ಕಥೆಯ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಯಸ್ಸು ಬರೀ ಸಂಖ್ಯೆಯಷ್ಟೇ, ಇದು ಜೀವನೋತ್ಸಾಹಕ್ಕೆ ಅಡ್ಡಿಯಾವುದುದಿಲ್ಲ ಎಂಬುದನ್ನು ಸಾಕಷ್ಟು ವೃದ್ಧರು ಸಾಬೀತು ಮಾಡಿದ್ದಾರೆ. ಅದೇ ರೀತಿ ಕೇರಳದಲ್ಲಿನ ಸುಮಾರು 70 ವರ್ಷ ದಾಟಿರುವ ಅಜ್ಜಿಯೊಬ್ಬರೂ ಕೂಡಾ ತನ್ನ ಸ್ವಾವಲಂಬಿ ಜೀವನಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ತಮ್ಮ ಇಳಿ ವಯಸ್ಸಿನಲ್ಲೂ ಮುಲಮ್ ಕಾಡಕ್ ಎಂಬಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಾ ಯಾರಿಗೂ ಹೊರೆಯಾಗದೇ ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ.
View this post on Instagram
ಕೇರಳದ ಫೋಟೋಗ್ರಾಫರ್ ಪೊನ್ನು ಸೂರ್ಯ (@ponnusuryar) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಇಳಿ ವಯಸ್ಸಿನಲ್ಲೂ ಅಜ್ಜಿಯೊಬ್ಬರು ಪೆಟ್ರೋಲ್ ಬಂಕ್ ಒಂದರಲ್ಲಿ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕುವಂತಹ ಕೆಲಸ ಮಾಡುತ್ತಿರುವ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇದೆಂಥಾ ಕ್ರೂರ ವರ್ತನೆ? ವೃದ್ಧ ರೋಗಿಗೆ ಮನಬಂದಂತೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಗಟ್ಟಿಗಿತ್ತಿಯ ಸ್ಪೂರ್ತಿದಾಯಕ ಕಥೆ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ