Viral Video: ಸಾಮಾನ್ಯರಂತೆ ವಾರಣಾಸಿ ಬೀದಿಯಲ್ಲಿ ಚಾಟ್ಸ್ ಸವಿದ ನೀತಾ ಅಂಬಾನಿ; ವಿಡಿಯೋ ವೈರಲ್ 

ಜುಲೈ 12 ರಂದು ಅನಂತ್ ಅಂಬಾನಿ ಹಾಗೂ  ರಾಧಿಕ ಮರ್ಚೆಂಟ್ ಅವರ ಅದ್ಧೂರಿ  ವಿವಾಹ ಕಾರ್ಯಕ್ರಮ  ನಡೆಯಲಿದ್ದು, ತಾಯಿ ನೀತಾ ಅಂಬಾನಿ ಕಾಶಿ ವಿಶ್ವನಾಥನ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ರನ ವಿವಾಹ ಆಮಂತ್ರಣ ಪತ್ರಿಕೆಯನ್ನು ವಿಶ್ವನಾಥನಿಗೆ ಅರ್ಪಿಸಿ ಆಶಿರ್ವಾದ ಪಡೆದರು. ಬಳಿಕ ಅವರು ವಾರಣಾಸಿಯ ಚಾಟ್ಸ್ ಶಾಪ್ ಒಂದಕ್ಕೆ ಭೇಟಿ ನೀಡಿ ಅಲ್ಲಿ  ಸಾಮಾನ್ಯರಂತೆ ಸ್ಟ್ರೀಟ್ ಫುಡ್ ಸವಿದಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Viral Video: ಸಾಮಾನ್ಯರಂತೆ ವಾರಣಾಸಿ ಬೀದಿಯಲ್ಲಿ ಚಾಟ್ಸ್ ಸವಿದ ನೀತಾ ಅಂಬಾನಿ; ವಿಡಿಯೋ ವೈರಲ್ 
ವೈರಲ್​​​​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 25, 2024 | 2:16 PM

ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಕಾರ್ಯಕ್ರಮ ಜುಲೈ 12 ರಂದು ನಡೆಯಲಿದೆ. ಇದೀಗ ತನ್ನ ಕಿರಿಯ ಪುತ್ರನ ವಿವಾಹಕ್ಕೂ ಮುನ್ನ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಸೋಮವಾರ (ಜೂನ್ 24) ದಂದು ಕಾಶಿ ವಿಶ್ವನಾಥನ ದೇವಾಲಯಕ್ಕೆ ಭೇಟಿ ನೀಡಿ ಮಗನ ಮದುವೆಯ ಲಗ್ನ   ಪತ್ರಿಕೆಯನ್ನು ಶಿವನಿಗೆ ಅರ್ಪಿಸಿ ಆಶಿರ್ವಾದವನ್ನು ಪಡೆದಿದ್ದಾರೆ. ದೇವಾಲಯದ ಭೇಟಿ ಬಳಿಕ ಅವರು ಅಲ್ಲಿನ ಸ್ಥಳೀಯ ಚಾಟ್ಸ್ ಶಾಪ್ಒಂದಕ್ಕೆ  ಭೇಟಿ ನೀಡಿ ಅಲ್ಲಿನ ಸ್ಥಳೀಯ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್  ಆಗುತ್ತಿದೆ.

ಈ ಹಿಂದೆ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ನನಗೆ  ಹಾಗೂ ಮುಕೇಶ್ ಅವರಿಗೆ ರಸ್ತೆ ಬದಿಗಳಲ್ಲಿನ ಚಾಟ್ಸ್ ತಿನ್ನುವುದೆಂದರೆ ತುಂಬಾನೇ ಇಷ್ಟ ಎಂದು ಹೇಳಿದ್ದರು. ಇದೀಗ ವಾರಣಾಸಿಯಲ್ಲಿ ಸಾಮಾನ್ಯರಂತೆ  ಚಾಟ್ಸ್ ಶಾಪ್ ಒಂದರಲ್ಲಿ ಅಲ್ಲಿನ ಸ್ಥಳೀಯ ಚಾಟ್ಸ್ಗಳನ್ನು  ಸವಿದಿದ್ದಾರೆ.

ಸುದ್ದಿ ಸಂಸ್ಥೆ ANI ಈ ಕುರಿತ ಪೋಸ್ಟ್ ಒಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಚಾಟ್ ಅಂಗಡಿಗೆ ಭೇಟಿ ನೀಡಿ ಅಲ್ಲಿ ಜನ ಸಾಮಾನ್ಯರೊಂದಿಗೆ ಮಾತನಾಡುತ್ತಾ ಚಾಟ್ಸ್ ಸವಿದರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ವಾರಣಾಸಿಯ ಚಾಟ್ಸ್ ಅಂಗಡಿಯೊಂದಕ್ಕೆ ಭೇಟಿ ನೀಡಿದ ನೀತಾ ಅಂಬಾನಿ ಸಾಮಾನ್ಯರಂತೆ ತಮ್ಮಿಷ್ಟದ ಚಾಟ್ಸ್ಗಳನ್ನು ತಿಂದು ಅಲ್ಲಿ ನೆರೆದಿದ್ದ ಸ್ಥಳೀಯರೊಂದಿಗೆ ಬಹಳ ಪ್ರೀತಿಪೂರ್ವಕವಾಗಿ ಮಾತನಾಡುತ್ತಿರುವ ದೃಶ್ಯಗಳನ್ನು ಕಾಣಬಹುದು.

ಇದನ್ನೂ ಓದಿ: ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇಲ್ಲ, ವಧುವಿನ ಕಡೆಯವರ ಕಿರಿಕ್, ರಣರಂಗವಾಯ್ತು ಮದುವೆ ಮನೆ 

ಜೂನ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ತರಹೇವಾರಿ  ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ