AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇಲ್ಲ, ವಧುವಿನ ಕಡೆಯವರ ಕಿರಿಕ್, ರಣರಂಗವಾಯ್ತು ಮದುವೆ ಮನೆ 

ಈ ಮದುವೆ ಮನೆಗಳಲ್ಲಿ ಕೆಲವು ಕ್ಷುಲ್ಲಕ ಕಾರಣಗಳಿಗೆ ವಧು ಹಾಗೂ ವರ ಕಡೆಯ ಸಂಬಂಧಿಕರ ಮಧ್ಯೆ ಜಗಳ, ರಂಪಾಟಗಳು ನಡೆಯುವ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಸುದ್ದಿಯೊಂದು ವೈರಲ್ ಆಗಿದ್ದು, ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇರಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ವಧುವಿನ ಕಡೆಯ ಸಂಬಂಧಿಕರು ವರನ ಕಡೆಯವರಿಗೆ ಥಳಿಸಿದ್ದಾರೆ.

Viral Video: ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇಲ್ಲ, ವಧುವಿನ ಕಡೆಯವರ ಕಿರಿಕ್, ರಣರಂಗವಾಯ್ತು ಮದುವೆ ಮನೆ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Jun 25, 2024 | 12:09 PM

Share

ಮದುವೆ ಅಂದ್ರೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಈ ವಿಶೇಷ ದಿನ ಮದುವೆ ಮನೆಯ ಹಬ್ಬದ ವಾತಾವರಣ ಸೃಷ್ಟಿಯಾಗಿರುತ್ತದೆ. ವಧು ಮತ್ತು ವರನ ಕಡೆಯ  ಅಥಿತಿಗಳೆಲ್ಲರೂ ಮೋಜು ಮಸ್ತಿ ಮಾಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಆದರೆ ತೀರಾ ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಗಲಾಟೆಯಾಗುವುದು, ಜಗಳಗಳಾಗುವುದು ಸಾಮಾನ್ಯವಾಗಿಬಿಟ್ಟಿದೆ. ಹೌದು ಈ ಹಿಂದೆಯೂ ಊಟದ ವಿಚಾರವಾಗಿ, ವರನ ನಡವಳಿಕೆ ಸರಿಯಿಲ್ಲ ಎಂಬಲ್ಲಾ ವಿಚಾರವಾಗಿ ಮದುವೆ ಮನೆಗಳಲ್ಲಿ ರಂಪಾಟ ನಡೆದ ಸುದ್ದಿಗಳು ಕೇಳಿ ಬಂದಿದ್ದವು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇರಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ವಧುವಿನ ಕಡೆಯ ಸಂಬಂಧಿಕರು ವರನ ಕಡೆಯವರಿಗೆ ಥಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ವಿವಾಹ ಸಮಾರಂಭದಲ್ಲಿ ಅತಿಥಿಗಳಿಗೆ ಬಡಿಸಿದ ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇರಲಿಲ್ಲವೆಂದು ವಧುವಿನ ಕಡೆಯವರು ಹೈಡ್ರಾಮ ಶುರು ಮಾಡಿದ್ದಾರೆ. ಪರಸ್ಪರ ವಾಗ್ವಾದಗಳು ನಡೆದಿದ್ದು ಮಾತ್ರವಲ್ಲದೆ ಅಡುಗೆ ಮಾಡಿದವರು ಹಾಗೂ ವರನ ಕುಟುಂಬದ ಮೇಲೆ ವಧುವಿನ ಕಡೆಯವರು ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ. ಅಂತಿಮವಾಗಿ ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ ಈ ಜಗಳಕ್ಕೆ ತೆರೆ ಎಳೆದು ಮದುವೆ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ.

ರಾಜೀವ್ ಚೋಪ್ರಾ (@Raajeev_Chopra) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇಲ್ಲದಿದ್ದಕ್ಕೆ ಮದುವೆ ಮನೆಯಲ್ಲಿ ಬಾರೀ ಕೋಲಾಹಲ ಉಂಟಾಯಿತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಮನೆಯಲ್ಲಿ ಕುರ್ಚಿಗಳನ್ನು ಪರಸ್ಪರ ಎಸೆಯುತ್ತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲೂ ಕೋಪಗೊಂಡ ವಧುವಿನ ಕಡೆಯ ಸಂಬಂಧಿಕರು ವರನ ಕಡೆಯವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದನ್ನೂ ಓದಿ: 33 ಕೋಟಿ ರೂ. ಗೆದ್ದ ವ್ಯಕ್ತಿ, ಖುಷಿ ತಡೆಯಲಾರದೇ ಹೃದಯಾಘಾತದಿಂದ ಸಾವು

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 13 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇಂತಹ ಕ್ಷುಲ್ಲಕ ಕಾರಣಕ್ಕೂ ಜಗಳವಾಡುವ ಅವಶ್ಯಕತೆ ಇದೆಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಸಿಎಂಗೆ ಹೈಕಮಾಂಡ್​ ದಿಲ್ಲಿ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು
ಸಿಎಂಗೆ ಹೈಕಮಾಂಡ್​ ದಿಲ್ಲಿ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!