ಪ್ಯಾನೆಲಿಸ್ಟ್‌ಗಳು ಪರಸ್ಪರ ಕಪಾಳಮೋಕ್ಷ ಮಾಡುತ್ತಾ ಲೈವ್ನಲ್ಲೇ ಹೊಡೆದಾಡಿಕೊಂಡಿರುವ ಘಟನೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆದಿದೆ. ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರ ಪಾಕಿಸ್ತಾನದ ಭೇಟಿಯ ಕುರಿತಾದ ಆ್ಯಂಕರ್ ಅನುರಾಗ್ ಮುಸ್ಕಾನ್ ಅವರು ನಡೆಸುತ್ತಿರುವ ‘ತಾಲ್ ತೊಕ್ ಕೆ’ ಝೀ ನ್ಯೂಸ್ ಚರ್ಚಾ ಕಾರ್ಯಕ್ರಮದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಒಬ್ಬ ಹಿಂದೂ ಮುಖಂಡ ಮತ್ತು ಒಬ್ಬ ಮುಸ್ಲಿಂ ಮುಖಂಡ ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಚರ್ಚೆ ಹೊಡೆದಾಟದ ವರೆಗೆ ತಲುಪಿದೆ. ಚರ್ಚೆಯ ಮಧ್ಯೆದಲ್ಲೇ ಆಚಾರ್ಯ ವಿಕ್ರಮಾದಿತ್ಯ ಅವರು ಕೋಪ ತಡೆಯಲಾರದೇ ಸಹ-ಪ್ಯಾನೆಲಿಸ್ಟ್ ಹಾಜಿಕ್ ಖಾನ್ ಅವರ ಕೊಲಾರ್ ಹಿಡಿದು ಕೆನ್ನೆಗೆ ಬಾರಿಸಿದ್ದಾರೆ. ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
@Indian_Analyzer ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಅಕ್ಟೋಬರ್ 04 ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ