Video Viral: ತಡವಾಗಿ ಬಂದ ಶಿಕ್ಷಕಿಯ ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್ ಪಾಲ್

ಶಿಕ್ಷಕಿ ಹಾಗೂ ಪ್ರಿನ್ಸ್ ಪಾಲ್ ನಡುವೆ ತೀವ್ರ ವಾಗ್ವಾದ ಬಳಿಕ ಹೊಡೆದಾಟ ನಡೆದಿದೆ. ಇವರಿಬ್ಬರ ಜಗಳದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Video Viral: ತಡವಾಗಿ ಬಂದ ಶಿಕ್ಷಕಿಯ ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್ ಪಾಲ್
ಶಿಕ್ಷಕಿಯ ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್ ಪಾಲ್

Updated on: May 04, 2024 | 3:33 PM

ಆಗ್ರಾ: ಶಾಲೆಯ ಪ್ರಾಂಶುಪಾಲರು ಶಿಕ್ಷಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಶಿಕ್ಷಕಿ ಶಾಲೆಗೆ ತಡವಾಗಿ ಬಂದಿದ್ದು, ಇದರಿಂದ ಕೋಪಕೊಂಡ ಪ್ರಿನ್ಸ್ ಪಾಲ್ ಬಟ್ಟೆ ಹಿಡಿದೆಳೆದು ಮನಬದ್ದಂತೆ ಥಳಿಸಿದ್ದಾರೆ. ಶಿಕ್ಷಕಿ ಹಾಗೂ ಪ್ರಿನ್ಸ್ ಪಾಲ್ ನಡುವೆ ಗುದ್ದಾಟ ನಡೆದಿದ್ದು, ಇಬ್ಬರಿಬ್ಬರ ಜಗಳದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮೇ 3 ರಂದು ಆಗ್ರಾದ ಪ್ರಾಥಮಿಕ ಶಾಲೆಯೊಂದರಲ್ಲಿ ಈ ಘಟನೆ ಸಂಭವಿಸಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಒಂದೇ ದಿನದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿ ಗುಂಜಾ ಚೌಧರಿ ಅವರನ್ನು ಪ್ರಾಂಶುಪಾಲರು ಪ್ರಶ್ನಿಸಿದ್ದಾರೆ. ಬಳಿಕ ಇವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಉದ್ವಿಗ್ನತೆ ಹೆಚ್ಚಾದಂತೆ, ಘರ್ಷಣೆಯು ದೈಹಿಕವಾಗಿ ತಿರುಗಿದ್ದು,ವೀಡಿಯೊದಲ್ಲಿ ಸೆರೆಯಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ

ಸ್ಥಳದಲ್ಲಿದ್ದ ಇತರ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು. ಘಟನೆ ಸಂಬಂಧ ಸಿಕಂದರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು, “ಪಾಠ ಕಳಿಸುವ ಶಿಕ್ಷಕರೇ ಈ ರೀತಿಯ ವರ್ತನೆ ತೋರಿದರೆ ಮಕ್ಕಳ ಗತಿಯೇನು” ಎಂದು ಕಾಮೆಂಟ್​ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sat, 4 May 24

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us