ಬೆಂಗಳೂರು: ಯುವತಿಯೊಂದಿಗೆ ಚಾಟ್​ ಮಾಡಿದ್ದಕ್ಕೆ ಪ್ರಿಯಕರನಿಂದ ಆಕೆಯ ಗೆಳೆಯನ ಮೇಲೆ ಹಲ್ಲೆ

ಬೆಂಗಳೂರಿನ ಡಯೋಗ್ನಾಸ್ಟಿಕ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ, ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸ್ನೇಹ ಬೆಳಸಿದ್ದಾನೆ. ಇಬ್ಬರೂ ನಂಬರ್​ ಎಕ್ಸಚೇಂಜ್​ ಮಾಡಿಕೊಂಡಿದ್ದಾರೆ. ಪ್ರತಿದಿನ ಚಾಟ್​ ಮಾಡಲು ಆರಂಭಿಸಿದ್ದಾರೆ. ಈ ವಿಚಾರ ಯುವತಿಯ ಪ್ರಿಯಕರಿನಿಗೆ ತಿಳಿದಿದೆ. ಮುಂದೇನಾಯ್ತು ಈ ಸ್ಟೋರಿ ಓದಿ...

ಬೆಂಗಳೂರು: ಯುವತಿಯೊಂದಿಗೆ ಚಾಟ್​ ಮಾಡಿದ್ದಕ್ಕೆ ಪ್ರಿಯಕರನಿಂದ ಆಕೆಯ ಗೆಳೆಯನ ಮೇಲೆ ಹಲ್ಲೆ
ಯುವತಿ, ಹಲ್ಲೆ ಮಾಡಿದ ಆರೋಪಿಗಳು
Follow us
ರಾಚಪ್ಪಾಜಿ ನಾಯ್ಕ್
| Updated By: ವಿವೇಕ ಬಿರಾದಾರ

Updated on:May 01, 2024 | 9:28 AM

ಬೆಂಗಳೂರು, ಮೇ 01: ತನ್ನ ಪ್ರಿಯತಮೆ ಜೊತೆ ಗೆಳತನ ಬೆಳಸಿದ್ದಕ್ಕೆ ಯುವಕನ ಲಾಂಗಿನಿಂದ ಹಲ್ಲೆ ಮಾಡಿರುವ ಘಟನೆ ಬಸವನಗುಡಿ ಬುಲ್ ಟೆಂಬಲ್ (Basavangudi Bull Temple) ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್​ನಲ್ಲಿ ನಡೆದಿದೆ. ಹರ್ಷಿತ್ ಹಲ್ಲೆಗೊಳಗಾದ ಯುವಕ. ಶಶಾಂಕ್ ಹಾಗೂ ಚಂದನ್ ಹಲ್ಲೆ ಮಾಡಿದ ಆರೋಪಿಗಳು. ಆರೋಪಿಗಳನ್ನು ಶಂಕರಪುರ ಠಾಣೆ ಪೊಲೀಸರು (Police) ಬಂದಿಸಿದ್ದಾರೆ.

ಇವರ ಮಧ್ಯೆ ಇದ್ದ ವೈಷಮ್ಯ ಏನು?

ಬಿಕಾಂ ಪದವೀಧರನಾಗಿದ್ದು, ತಂದೆಯ ಫ್ಲವರ್ ಡೆಕೊರೇಷನ್ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಫ್ಲವರ್ ಡೆಕೊರೇಷನ್ ಅಂಗಡಿ ಕಟ್ಟಡದಲ್ಲೇ ಒಂದು ಡಯೋಗ್ನಾಸ್ಟಿಕ್ ಸೆಂಟರ್ ಇದೆ. ಈ ಡಗೋಗ್ನಾಸ್ಟಿಕ್ ಸೆಂಟರ್​ನಲ್ಲಿ ಓರ್ವ ಯುವತಿ ಕೆಲಸ ಮಾಡುತ್ತಿದ್ದಾಳೆ. ಅದು ಹೇಗೋ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ. ಚಾಟ್ ಮಾಡುತ್ತಿದ್ದರು. ಈ ಯುವತಿಗೆ ಪ್ರೇಮಿ ಇದ್ದು, ಆತನೆ ಆರೋಪಿ ಶಶಾಂಕ್​.

ಆರೋಪಿ ಶಶಾಂಕ್​ಗೆ ಈ ಇವರ ಗೆಳತನ ವಿಚಾರ ತಿಳಿದಿದೆ. ಇವರಿಬ್ಬರ ಮಧ್ಯೆ ಏನೊ ನಡಿತಿದೆ ಎಂಬ ಅನುಮಾನ ಶಶಾಂಕ್​ನಲ್ಲಿ ಹುಟ್ಟಿದೆ. ಆಗ ಶಂಶಾಂಕ್​ ಪ್ರೇಯಸಿಯ ಮೊಬೈಲ್ ಮಾಡಿದಾಗ ಚಾಟ್ ಮಾಡಿರುವುದು ಕಂಡಿದೆ. ಇದರಿಂದ ರೊಚ್ಚಿಗೆದ್ದ ಶಶಾಂಕ್, ಹರ್ಷಿತ್​ಗೆ ಒಂದು ಗತಿ ಕಾಣಿಸಬೇಕು ಅಂತ ನಿರ್ಧರಿಸಿದನು.

ಇದನ್ನೂ ಓದಿ: ಮಹಿಳೆಯ ಬರ್ಬರ ಕೊಲೆ ಮಾಡಿದ ಪ್ರಿಯಕರ ರೂಮ್​ಗೆ ಬೀಗ ಜಡಿದು ಪರಾರಿ

ಏಪ್ರಿಲ್ 28 ರಂದು ಸ್ನೇಹಿತ ಚಂದನ್ ನನ್ನು ಕರೆಸಿಕೊಂಡು ಬಾರ್​ಗೆ ಹೋಗಿ ಕುಡಿದಿದ್ದಾರೆ. ಬಳಿಕ ಪೇಪರ್​ನಲ್ಲಿ ಲಾಂಗ್ ಸುತ್ತಿಕೊಂಡು ಬೈಕ​ನಲ್ಲಿ ರಾತ್ರಿ 8.30ರ ಸುಮಾರಿಗೆ ಹರ್ಷಿತ್​ನ ಅಂಗಡಿ ಬಳಿ ಬಂದಿದ್ದಾರೆ. ಬಂದವರೇ ​ಲಾಂಗಿನಿಂದ ಹರ್ಷಿತ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದರಿಂದ ಹರ್ಷಿತನ ಬಲಗೈನ ಬಲಗೈನ ಹೆಬ್ಬೆರಳು ತುಂಡಾಗಿದೆ. ಎಡಗೈನ ಮುಂಗೈ ಎರಡು ತುಂಡಾಗಿದೆ. ಬೆಚ್ಚಿ‌‌‌ ಬೀಳುವಂತ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೈನಿಂದ ರಕ್ತ ಸೋರುತ್ತಿದ್ದು, ಹರ್ಷಿತ್​ ಫುಟ್ ಪಾತ್ ಮೇಲೆ ಬಂದು ನಿಂತಿದ್ದಾನೆ. ಕೆಲವೇ ಹೊತ್ತಲ್ಲಿ ಫುಟ್ ಪಾತ್ ರಕ್ತದ ಕೋಡಿಯಾಗಿದೆ. ಬಳಿಕ ಹರ್ಷಿತ ತುಂಡಾದ ಬೆರಳು ಮತ್ತು ಮುಂಗೈಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಆಸ್ಪತ್ರೆಗೆ ಹೋಗಿದ್ದಾನೆ. ವಿಚಾರ ತಿಳಿದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಂಕರಪುರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪತಿಯ ಜೊತೆ ಹೋಗುತ್ತಿದ್ದ ಪತ್ನಿಗೆ ಪುಂಡರಿಂದ ಲೈಂಗಿಕ ಕಿರುಕುಳ

ಪತಿಯ ಜೊತೆ ಹೋಗುತ್ತಿದ್ದ ಪತ್ನಿಗೆ ಪುಂಡರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ ನಡೆದಿದೆ. ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬಿಹಾರ ಮೂಲದ ದಂಪತಿ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಬೆನ್ನಹತ್ತಿ ಬಂದ ಮೂವರು ಪುಂಡರು, ಮಹಿಳೆಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾರೆ. ಒಪ್ಪದಿದ್ದಾಗ ಅಪಹರಿಸುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ.

ಅಲ್ಲದೆ ಪುಂಡರು ಹೆಂಡತಿಯನ್ನ ಕಳಿಸುವಂತೆ ಗಂಡನಿಗೂ ಬೆದರಿಕೆ ಹಾಕಿದ್ದಾರೆ. ಕೂಡಲೆ ದಂಪತಿ ಸಹಾಯ ಕೋರಿ ಬೆಂಗಳೂರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಳಿಕ ಬಿಹಾರ ಪೊಲೀಸರಿಗೂ ಕರೆ ಮಾಡಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 am, Wed, 1 May 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ