ನನ್ನ ಕಕ್ಷಿದಾರ ವಿದೇಶಕ್ಕೆ ತೆರಳುವಾಗ ಎಫ್ ಐಅರ್ ದಾಖಲಾಗಿರಲಿಲ್ಲ: ಜಿ ಅರುಣ್, ಪ್ರಜ್ವಲ್ ರೇವಣ್ಣ ವಕೀಲ

ನನ್ನ ಕಕ್ಷಿದಾರ ವಿದೇಶಕ್ಕೆ ತೆರಳುವಾಗ ಎಫ್ ಐಅರ್ ದಾಖಲಾಗಿರಲಿಲ್ಲ: ಜಿ ಅರುಣ್, ಪ್ರಜ್ವಲ್ ರೇವಣ್ಣ ವಕೀಲ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2024 | 7:02 PM

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ನೂರಾರು ವಿಡಿಯೋಗಳ ಬಗ್ಗೆ ತಾನು ಮಾತಾಡಲಾರೆ, ಸಾಮಾಜಿಕ ಪ್ರಜ್ಞೆ ಬಗ್ಗೆ ಮಾತಾಡಿದರೆ ಅದು ಚರ್ಚೆಯೆನಿಸಿಕೊಳ್ಳುತ್ತದೆ, ತನ್ನದೇನಿದ್ದರೂ ನ್ಯಾಯಾಲಯದ ವ್ಯಾಪ್ತಿ ಮಾತ್ರ ಎಂದು ಅರುಣ್ ಹೇಳಿದರು.

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಅವರು ವಕೀಲ ಜಿ ಅರುಣ್ (G Arun) ಟಿವಿ9 ವಾಹಿನಿಗೆ ಒಂದಷ್ಟು ಮಾಹಿತಿ ನೀಡಿದ್ದಾರೆ. ಅದರೆ aವರು ಹೊಳೆನರಸೀಪುರದ (Holennarasipura) ಅಪರಾಧ ಸಂಖ್ಯೆ 107 ಪ್ರಕರಣವನ್ನು ಮಾತ್ರ ಡೀಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ನೂರಾರು ವಿಡಿಯೋಗಳ ಬಗ್ಗೆ ತಾನು ಮಾತಾಡಲಾರೆ, ಸಾಮಾಜಿಕ ಪ್ರಜ್ಞೆ ಬಗ್ಗೆ ಮಾತಾಡಿದರೆ ಅದು ಚರ್ಚೆಯೆನಿಸಿಕೊಳ್ಳುತ್ತದೆ, ತನ್ನದೇನಿದ್ದರೂ ನ್ಯಾಯಾಲಯದ ವ್ಯಾಪ್ತಿ ಮಾತ್ರ ಎಂದು ಅರುಣ್ ಹೇಳಿದರು. ತನ್ನ ಕಕ್ಷಿದಾರನ ಬಗ್ಗೆ ಒಂದು ಮಾತನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ, ಅವರು ವಿದೇಶಕ್ಕೆ ಹೊರಡುವಾಗ ಯಾವುದೇ ಎಫ್ ಐಅರ್ ದಾಖಲಾಗಿರಲಿಲ್ಲ ಮತ್ತು ಎಸ್ ಐಟಿಯನ್ನೂ ರಚಿಸಲಾಗಿರಲಿಲ್ಲ ಎಂದು ಅರುಣ್ ಹೇಳಿದರು.

ಒಂದು ವರ್ಷದ ಹಿಂದೆಯೇ ವಿಡಿಯೋಗಳಲ್ಲಿ ಮಾರ್ಫಿಂಗ್ ಅಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಲಯದ ಮೊರೆಹೊಕ್ಕಿದ್ದರು, ಆಗ ಅವರು ಮುಂದೆ ಜರುಗಬಹುದಾದ ಕೆಟ್ಟ ಘಟನೆಗಳ ಬಗ್ಗೆ ಹೊಂದಿದ್ದ ಆತಂಕ ಈಗ ನಿಜವಾಗಿದೆ ಎಂದು ವಕೀಲ ಹೇಳಿದರು. ವಿಡಿಯೋ ಸಾರ್ವಜನಿಕ ವಲಯದಲ್ಲಿ ಹರಿ ಬಿಟ್ಟಿದ್ದು ಯಾರು, ಅದರ ಮೂಲ ಯಾವುದು ಮೊದಲಾದ ಸಂಗತಿಗಳ ತನಿಖೆ ಎಸ್ ಐಟಿ ವ್ಯಾಪ್ತಿಯಲ್ಲಿ ಬರುತ್ತದೆ ಅಂತ ತಾನು ಭಾವಿಸುವುದಾಗಿ ಅರುಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣ; ಸಂತ್ರಸ್ತೆಯರ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಅವರ ಭವಿಷ್ಯವೇನು? ವಿನಯ್ ಕುಲಕರ್ಣಿ