Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ಪ್ರಕರಣ; ಸಂತ್ರಸ್ತೆಯರ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಅವರ ಭವಿಷ್ಯವೇನು? ವಿನಯ್ ಕುಲಕರ್ಣಿ

ಪ್ರಜ್ವಲ್ ರೇವಣ್ಣ ಪ್ರಕರಣ; ಸಂತ್ರಸ್ತೆಯರ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಅವರ ಭವಿಷ್ಯವೇನು? ವಿನಯ್ ಕುಲಕರ್ಣಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2024 | 4:03 PM

ರಾಜಕಾರಣದಲ್ಲಿ ಅರೋಪ ಪ್ರತ್ಯಾರೋಪಗಳುಇದ್ದಿದ್ದೇ, ಆದರೆ ವಿಡಿಯೋಗಳಲ್ಲಿರುವ ಮಹಿಳೆಯರ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ, ಒಬ್ಬನ ಕಾಮತೃಷೆಗೆ ಬಲಿಯಾಗಿ ಅವರು ತಾವು ವಾಸ ಮಾಡುವ ಸ್ಥಳಗಳಲ್ಲಿ ತಲೆಯೆತ್ತಿ ತಿರುಗಾಡದ ಸ್ಥಿತಿ ಅವರಿಗೆ ನಿರ್ಮಾಣವಾಗಿದೆ, ಅವರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ ಎಂದು ವಿನಯ್ ಹೇಳಿದರು.

ಹಾವೇರಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರು, ಪ್ರಜ್ವಲ್ ರೇವಣ್ಣ (Prajwal Revanna) ಸೆಕ್ಸ್ ಟೇಪ್ ಗಳ ಬಗ್ಗೆ ವಿವೇಚನೆ ಮತ್ತು ವಿವೇಕದಿಂದ ಮಾತಾಡಿದರು. ರಾಜಕಾರಣದಲ್ಲಿ ಅರೋಪ ಪ್ರತ್ಯಾರೋಪಗಳು (allegations) ಇದ್ದಿದ್ದೇ, ಆದರೆ ವಿಡಿಯೋಗಳಲ್ಲಿರುವ ಮಹಿಳೆಯರ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ, ಒಬ್ಬನ ಕಾಮತೃಷೆಗೆ ಬಲಿಯಾಗಿ ಅವರು ತಾವು ವಾಸ ಮಾಡುವ ಸ್ಥಳಗಳಲ್ಲಿ ತಲೆಯೆತ್ತಿ ತಿರುಗಾಡದ ಸ್ಥಿತಿ ಅವರಿಗೆ ನಿರ್ಮಾಣವಾಗಿದೆ, ಅವರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ ಎಂದು ವಿನಯ್ ಹೇಳಿದರು. ಪ್ರಜ್ವಲ್ ವಿದೇಶಕ್ಕೆ ಹಾರಿ ಹೋಗಲು ರಾಜ್ಯ ಸರ್ಕಾರದ ನಿಷ್ಕ್ರಿತೆಯೇ ಕಾರಣ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ ಅಂದಾಗ ವಿನಯ್, ಅವರ ಮಾತು ಬೇಡ, ಇಂಥ ಮಾತುಗಳನ್ನಾಡೇ ಅವರು ಈ ಮಟ್ಟಕ್ಕೆ ಬೆಳೆದಿರೋದು, ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ, ವೀಸಾ ರಾತ್ರೋರಾತ್ರಿ ಸಿಗಲ್ಲ, ಒಂದು ದೇಶದ ವೀಸಾ ಪಡೆಯಬೇಕಾದರೆ ಜನ ಚಪ್ಪಲಿ ಸವೆಸಬೇಕಾಗುತ್ತದೆ. ಪ್ರಜ್ವಲ್ ಗೆ ಒಂದೇದಿನದಲ್ಲಿ ವೀಸಾ ಸಿಗೋದಿಕ್ಕೆ ದೊಡ್ಡ ಶಕ್ತಿಗಳು ನೆರವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಭವಿಷ್ಯ ಆ ಪಕ್ಷಗಳ ನಾಯಕರಿಗೆ ಬಿಟ್ಟ ವಿಚಾರ: ಜಿ ಪರಮೇಶ್ವರ್