ಪ್ರಜ್ವಲ್ ರೇವಣ್ಣ ಪ್ರಕರಣ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಭವಿಷ್ಯ ಆ ಪಕ್ಷಗಳ ನಾಯಕರಿಗೆ ಬಿಟ್ಟ ವಿಚಾರ: ಜಿ ಪರಮೇಶ್ವರ್
ನೇಹಾ ಹಿರೇಮಠ ಪ್ರಕರಣದ ಮೇಲೆ ಜೋರು ಸದ್ದು ಮಾಡಿದ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ಕೇಸಲ್ಲಿ ಮೌನವಾಗಿದ್ದಾರಲ್ಲ ಎಂದಾಗ ಪ್ರತಿಕ್ರಿಯೆ ನೀಡದ ಪರಮೇಶ್ವರ್, ಈ ಪ್ರಕರಣದ ನಂತರ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯನ್ನು ಮುಂದುವರಿಸುವುದು ಅಥವಾ ಮೊಟಕುಗೊಳಿಸುವುದು ಆ ಪಕ್ಷಗಳ ನಾಯಕರಿಗೆ ಬಿಟ್ಟ ವಿಚಾರವಾಗಿದೆ ಎಂದರು.
ಬೆಂಗಳೂರು:ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara), ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪ್ ಗಳನ್ನು ಬಹಿರಂಗ ಮಾಡಿದರನ್ನು ಶಿಕ್ಷೆಗೆ ಗುರಿಮಾಡಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಸಮಂಜಸ ಉತ್ತರ ನೀಡಲಿಲ್ಲ. ಮೊದಲಿಗೆ ಟೇಪ್ ಗಳು ಒರಿಜಿನೇಟ್ (originate) ಆಗಿದೆಲ್ಲಿಂದ ಅನ್ನೋದು ಪತ್ತೆಯಾಗಬೇಕು ಹಾಗೆಯೇ ಟರ್ಮ್ಸ್ ಆಫ್ ರೆಫರೆನ್ಸ್ ಮೊದಲಾದ ಸಂಗತಿಗಳ ದೃಢೀಕರಣವಾದ ಬಳಿಕ ಮಿಕ್ಕಿದ ವಿಷಯಗಳನ್ನೂ ಎಸ್ ಐಟಿ ತನಿಖೆ (SIT investigation) ಮಾಡುತ್ತದೆ ಎಂದು ಪರಮೇಶ್ವರ್ ಹೇಳಿದರು. ಕೇಂದ್ರದ ಕೆಲ ಸಚಿವರು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ, ತನಿಖೆಗಾಗಿ ಎಸ್ ಐಟಿಯನ್ನು ರಚಿಸಿದ್ದು ತಮ್ಮ ಉತ್ತರಾಗಿದೆ ಎಂದು ಸಚಿವ ಹೇಳಿದರು. ನೇಹಾ ಹಿರೇಮಠ ಪ್ರಕರಣದ ಮೇಲೆ ಜೋರು ಸದ್ದು ಮಾಡಿದ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ಕೇಸಲ್ಲಿ ಮೌನವಾಗಿದ್ದಾರಲ್ಲ ಎಂದಾಗ ಪ್ರತಿಕ್ರಿಯೆ ನೀಡದ ಪರಮೇಶ್ವರ್, ಈ ಪ್ರಕರಣದ ನಂತರ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯನ್ನು ಮುಂದುವರಿಸುವುದು ಅಥವಾ ಮೊಟಕುಗೊಳಿಸುವುದು ಆ ಪಕ್ಷಗಳ ನಾಯಕರಿಗೆ ಬಿಟ್ಟ ವಿಚಾರವಾಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ