Manvita Kamath: ಕೊಂಕಣಿ ಸಂಪ್ರದಾಯದಂತೆ ನಡೆದ ಮಾನ್ವಿತಾ ವಿವಾಹ; ಇಲ್ಲಿದೆ ವಿಡಿಯೋ
ನಟಿ ಮಾನ್ವಿತಾ ಕಾಮತ್ ಅವರ ವಿವಾಹ ಇಂದು (ಮೇ 1) ನಡೆದಿದೆ. ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆದಿದೆ. ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ಮಾನ್ವಿತಾ ವಿವಾಹ ಆಗಿದ್ದಾರೆ.
ನಟಿ ಮಾನ್ವಿತಾ ಕಾಮತ್ (Manvita Kamath) ಅವರ ವಿವಾಹ ಇಂದು (ಮೇ 1) ನಡೆದಿದೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದವರ ಸಮ್ಮುಖದಲ್ಲಿ ಅರುಣ್ ಅವರು ಮಾನ್ವಿತಾಗೆ ತಾಳಿ ಕಟ್ಟಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ವಿವಾಹ ಸಂಪ್ರದಾಯಗಳು ಜರುಗಿವೆ. ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆದಿದೆ ಅನ್ನೋದು ವಿಶೇಷ. ಮಾನ್ವಿತಾ ಅವರು ಸೀರೆಯಲ್ಲಿ ಮಿಂಚಿದ್ದಾರೆ. ತಾಳಿ ಕಟ್ಟುವ ಶುಭಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಮಾನ್ವಿತಾ ಕಾಮತ್ ಅವರು ವಿವಾಹದ ಬಳಿಕವೂ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರೆ. ಇದಕ್ಕೆ ಅರುಣ್ ಅವರಿಂದ ಯಾವುದೇ ವಿರೋಧ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos