ಪ್ರಜ್ವಲ್ ರೇವಣ್ಣ ರಾಸಲೀಲೆಗಳು ನಡೆದಿದ್ದೆಲ್ಲಿ? ಸ್ಫೋಟಕ ಮಾಹಿತಿ ಬಹಿರಂಗ

ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ ಜೆಡಿಎಸ್​​ನ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಸದ್ಯ ಕಳೆದೊಂದು ವಾರದಿಂದ ಅಲ್ಲೋಲ ಕಲ್ಲೋಲ ಶುರುವಾಗಿದೆ. ಪ್ರಜ್ವಲ್ ರೇವಣ್ಣರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಎಲ್ಲೆಡೆ ಸಾಕಷ್ಟು ವೈರಲ್​ ಆಗಿದೆ. ಎಸ್​​ಐಟಿ ತನಿಖೆಗೆ ಆರಂಭಿಸಿದ್ದು, ಪೆನ್ ಡ್ರೈವ್​ನಲ್ಲಿರುವ ಸಾವಿರಾರು ವಿಡಿಯೋಗಳು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಆಗಿದೆ. ​

Follow us
| Updated By: ಗಂಗಾಧರ​ ಬ. ಸಾಬೋಜಿ

Updated on:May 01, 2024 | 3:43 PM

ಹಾಸನ, ಮೇ 1: ಕಳೆದೊಂದು ವಾರದಿಂದ ರಾಜ್ಯ, ದೇಶದಲ್ಲಿ ಈ ವಿಚಾರ ಬಗ್ಗೆಯೇ ಸಾಕಷ್ಟು ಚರ್ಚೆ ಆಗುತ್ತಿದೆ. ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಪ್ರಜ್ವಲ್ ರೇವಣ್ಣರದ್ದು (Prajwal Revanna)  ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣವನ್ನ ಸರ್ಕಾರ ಈಗ ಎಸ್​​ಐಟಿ ತನಿಖೆಗೆ ವಹಿಸಿದ್ದು, ಸದ್ಯ ಪ್ರಕರಣದ ತನಿಖೆಯ ಬೆನ್ನಟ್ಟಿದೆ. ಇದರ ಮಧ್ಯೆ ಮೊಬೈಲ್​​ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋಗಳು ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಲಾಗಿದ್ದ ಹಾಸನದ ಆರ್​ಸಿ ರಸ್ತೆಯಲ್ಲಿರುವ ಎಂಪಿ ಗೆಸ್ಟ್ ಹೌಸ್​​​ ರೂಂ ನಲ್ಲಿ ಎಂಬ ಅನುಮಾನಗಳು ಇದೀಗ ಹುಟ್ಟಿಕೊಂಡಿವೆ.

ಹಾಸನದ ಸಂಸದರ ನಿವಾಸದಲ್ಲೇ ನಡೆಯಿತಾ ನೀಚ ಕೃತ್ಯ

ಕಾಂಗ್ರೆಸ್ ನಾಯಕ ಸಂಸದ ಡಿಕೆ ಸುರೇಶ್ ಹೇಳಿಕೆ ಬೆನ್ನಲ್ಲೇ ಇಂತಹದೊಂದು ಹೊಸ ಚರ್ಚೆ ಶುರುವಾಗಿದೆ. ಮಾಜಿ ಪ್ರದಾನಿ ದೇವೇಗೌಡರು ಹಾಸನದ ಸಂಸದರಾಗಿದ್ದಾಗ ಸರ್ಕಾರದಿಂದ ನಿವೇಶನ ಮಂಜೂರಾಗಿದ್ದು, ಅವರ ವಾಸ್ತವ್ಯಕ್ಕಾಗಿ ಕೆಳ ಅಂತಸ್ತು ಹಾಗೂ ಮೊದಲ ಮಹಡಿ ಒಳಗೊಂಡ 2019ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಒಟ್ಟು ನಾಲ್ಕು ಕೊಠಡಿಗಳನ್ನು ನಿವಾಸ ಒಳಗೊಂಡಿದ್ದು, ನೆಲ ಅಂತಸ್ತಿನಲ್ಲಿ ಎರಡು ಹಾಗೂ ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳಿವೆ. ದೇವೇಗೌಡರ ಸಲುವಾಗಿಯೇ ಲಿಫ್ಟ್ ಅಳವಡಿಕೆ ಮಾಡಿ ಮನೆ ನಿರ್ಮಾಣ ಮಾಡಲಾಗಿತ್ತು. ದೇವೇಗೌಡರು ಹಾಸನಕ್ಕೆ ಬಂದಾಗ ಹೆಚ್ಚಾಗಿ ಇದೇ ಗೆಸ್ಟ್ ಹೌಸ್​ನಲ್ಲಿ ಉಳಿಯುತ್ತಿದ್ದರು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಬಹಿರಂಗಕ್ಕೆ ಬಿಗ್ ಟ್ವಿಸ್ಟ್: ದೇವರಾಜೇಗೌಡಗಷ್ಟೇ ಕೊಟ್ಟಿದ್ದೆ ಎಂದ ಪ್ರಜ್ವಲ್ ಮಾಜಿ ಕಾರು ಚಾಲಕ

ತಾವು ಸಂಸದರಾಗಿದ್ದವರೆಗೂ ಹಾಸನದ ಎಂಪಿ ಕ್ವಾಟ್ರಸ್​​​ ದೇವೇಗೌಡರ ಅಧಿಕೃತ ನಿವಾಸವಾಗಿತ್ತು. ಬಳಿಕ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗುತ್ತಲೇ ಪ್ರಜ್ವಲ್​​ಗೆ ಮನೆ ಹಸ್ತಾಂತರ ಮಾಡಲಾಗಿದ್ದು, ಹಾಸನಕ್ಕೆ ಬಂದಾಗ ಸಂಸದರ ನಿವಾಸದಲ್ಲೇ ಪ್ರಜ್ವಲ್ ವಾಸ್ತವ್ಯ ಹೂಡುತ್ತಿದ್ದರು. ಇದೀಗ ಚುನಾವಣಾ ಸಮಯದಲ್ಲಿ ಇದೇ ಮನೆಯಲ್ಲಿ ಪ್ರಜ್ವಲ್ ರೇವಣ್ಣ ನೆಲೆಸಿದ್ದರು. ಅಧಿಕಾರಿಗಳ ಸಭೆ ಸೇರಿದಂತೆ ಜೆಡಿಎಸ್ ಮುಖಂಡರ ಸಭೆಗಳನ್ನು ಪ್ರಜ್ವಲ್ ನಡೆಸುತ್ತಿದ್ದರು.

ಇದನ್ನೂ ಓದಿ: ಯಾವ ತನಿಖೆಗೂ ಹೆದರಲ್ಲ, ತಪ್ಪು ಮಾಡದಿರುವಾಗ ಯಾವುದರ ಭಯ? ಹೆಚ್ ಡಿ ರೇವಣ್ಣ

ಚುನಾವಣೆ ಮುಗಿದ ರಾತ್ರಿಯೇ ಪ್ರಜ್ವಲ್ ರೇವಣ್ಣ ದೇಶಬಿಟ್ಟು ಎಸ್ಕೇಪ್ ಆಗಿದ್ದ ವಿಚಾರ ಬಯಲಾಗುತ್ತಲೆ ಪೆನ್ ಡ್ರೈವ್ ವಿಚಾರ ದೊಡ್ಡ ಹಂತದ ಚರ್ಚೆಗೆ ಶುರುವಾಗಿತ್ತು. ಅದೇ ದಿನ ಸಿಎಂ ಟ್ವೀಟ್ ಮೂಲಕ ಪ್ರಕರಣದ ಎಸ್​ಐಟಿ ತನಿಖೆಗೆ ಆದೇಶ ಕೊಡುವ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲಿಯೇ ಪ್ರಕರಣದ ದಿಕ್ಕೆ ಬದಲಾಗಿ ಹೋಗಿದೆ. ಎಲ್ಲೆಡೆ ಹೋರಾಟ ಶುರುವಾಗಿದ್ದು, ಪ್ರಜ್ವಲ್ ವಿರುದ್ದ ಕ್ರಮಕ್ಕೆ ಒತ್ತಡ ಹೆಚ್ಚಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:31 pm, Wed, 1 May 24

‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು