ಯಾವ ತನಿಖೆಗೂ ಹೆದರಲ್ಲ, ತಪ್ಪು ಮಾಡದಿರುವಾಗ ಯಾವುದರ ಭಯ? ಹೆಚ್ ಡಿ ರೇವಣ್ಣ
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಕಾರನ್ನು ನಿಲ್ಲಿಸದೆ ಪ್ರತಿಕ್ರಿಯೆ ನೀಡಿದರು. ತಾನು ಎಲ್ಲಿಗೂ ಹೋಗಲ್ಲ, ಯಾವ ತನಿಖೆಯನ್ನಾದರೂ ಎದುರಿಸುತ್ತೇನೆ, ತಪ್ಪು ಮಾಡದಿರುವಾಗ ಭಯ ಯಾತರದ್ದು? ಪೆನ್ ಡ್ರೈವ್ ಗಳೆಲ್ಲ ಸುಳ್ಳು ತಮ್ಮ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೀಗೆ ಮಾಡಲಾಗಿದೆ ಎಂದು ರೇವಣ್ಣ ಹೇಳಿದರು.
ಹಾಸನ: ಸಂಕಷ್ಟ ಇರಲಿ ಬಿಡಲಿ, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna) ದೈವಭಕ್ತರು. ಅವರ ಕುಟುಂಬಕ್ಕೆ ಈಗ ಭಾರೀ ದೊಡ್ಡ ಸಂಕಷ್ಟ ಒದಗಿಬಂದಿರುವಾಗ ಅವರು ದೇವಸ್ಥಾನಕ್ಕೆ (temple) ಭೇಟಿ ನೀಡದಿರುತ್ತಾರೆಯೇ? ಗುಡಿಯಲ್ಲಿ ದೇವರ ದರ್ಶನ ಮಾಡಿಕೊಂಡು ಹಾಸನದಿಂದ ಬೆಂಗಳೂರಿಗೆ ಹೊರಟ ರೇವಣ್ಣ ಒಲ್ಲದ ಮನಸ್ಸಿನೊಂದಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಅವರು ಮಾತಾಡಿದ್ದೆಲ್ಲ್ಲ ಪಾಸಿಂಗ್ ರಿಮಾರ್ಕ್ ನಂತಿತ್ತು (passing remark). ಅವರ ಧ್ವನಿ ಸಂಪೂರ್ಣವಾಗಿ ಉಡುಗಿ ಹೋಗಿರುವುದನ್ನು ಗಮನಿಸಬಹುದು. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಕಾರನ್ನು ನಿಲ್ಲಿಸದೆ ಪ್ರತಿಕ್ರಿಯೆ ನೀಡಿದರು. ತಾನು ಎಲ್ಲಿಗೂ ಹೋಗಲ್ಲ, ಯಾವ ತನಿಖೆಯನ್ನಾದರೂ ಎದುರಿಸುತ್ತೇನೆ, ತಪ್ಪು ಮಾಡದಿರುವಾಗ ಭಯ ಯಾತರದ್ದು? ಪೆನ್ ಡ್ರೈವ್ ಗಳೆಲ್ಲ ಸುಳ್ಳು ತಮ್ಮ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೀಗೆ ಮಾಡಲಾಗಿದೆ ಎಂದು ರೇವಣ್ಣ ಹೇಳಿದರು. ಶಾಸಕರೇನೋ ಭಂಡ ಧೈರ್ಯದಿಂದ ಇಲ್ಲಿ ಮಾತಾಡಿರಬಹುದು, ಆದರೆ ಸಂತ್ರಸ್ತೆಯರು ದಾಖಲಿಸಿರುವ ದೂರಿನಲ್ಲಿ ಅವರು ಆರೋಪಿ ನಂಬರ್ ವನ್ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
