ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಬಹಿರಂಗಕ್ಕೆ ಬಿಗ್ ಟ್ವಿಸ್ಟ್: ದೇವರಾಜೇಗೌಡಗಷ್ಟೇ ಕೊಟ್ಟಿದ್ದೆ ಎಂದ ಪ್ರಜ್ವಲ್ ಮಾಜಿ ಕಾರು ಚಾಲಕ

Hassan sex scandal: ಹಾಸನ ಜಿಲ್ಲೆಯಲ್ಲಿ ಹರಿದಾಡಿದ, ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಮಹಿಳೆಯರ ಅಶ್ಲೀಲ ವಿಡಿಯೋ ಉಳ್ಳ ಪೆನ್​ಡ್ರೈವ್​ ಲೀಕ್ ಆಗಿದ್ದು ಹೇಗೆ ಎಂಬ ವಿಷಯಕ್ಕೆ ಇದೀಗ ದೊಡ್ಡ ಟ್ವಿಸ್ಟ್ ದೊರೆತಿದೆ. ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ರಿಕಾಗೋಷ್ಠಿ ನಡೆಸಿ ಆ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಚಾಲಕ ಕಾರ್ತಿಕ್ ಬಿಚ್ಚಿಟ್ಟ ಸಂಪೂರ್ಣ ವಿವರ ಇಲ್ಲಿದೆ.

Follow us
ಮಂಜುನಾಥ ಕೆಬಿ
| Updated By: Ganapathi Sharma

Updated on:Apr 30, 2024 | 2:02 PM

ಹಾಸನ, ಏಪ್ರಿಲ್ 30: ಹಾಸನ (Hassan) ಸಂಸದ ಪ್ರಜ್ವಲ್ ರೇವಣ್ಣರದ್ದು (Prajwal Revanna) ಎನ್ನಲಾದ ಅಶ್ಲೀಲ ವಿಡಿಯೋಗಳುಳ್ಳ ಪೆನ್​ಡ್ರೈವ್ ಬಹಿರಂಗ ವಿಚಾರಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದೆ. ​ಪೆನ್​ಡ್ರೈವ್ ಅನ್ನು ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೆಗೌಡಗೆ (Devaraje Gowda) ಬಿಟ್ಟು ಬೇರೆ ಯಾರಿಗೂ ನೀಡಿಲ್ಲ ಎಂದು ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ (Kartik) ಹೇಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹರಿದಾಡಿದ ಮಹಿಳೆಯರ ಅಶ್ಲೀಲ ವಿಡಿಯೋ ಉಳ್ಳ ಪೆನ್​ಡ್ರೈವ್​ ಅನ್ನು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದ ಡಿಕೆ ಸುರೇಶ್​ಗೆ ಕಾರ್ತಿಕ್ ನೀಡಿದ್ದ. ನಂತರ ನನಗೆ ನೀಡಿದ್ದ ಎಂದು ದೇವರಾಜೇಗೌಡ ಸೋಮವಾರ ‘ಟಿವಿ9’ಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಕಾರ್ತಿಕ್ ಆ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮಾಜಿ ಚಾಲಕ ಕಾರ್ತಿಕ್ ಹೇಳಿದ್ದೇನು?

‘ನಾನು ರೇವಣ್ಣ ಹಾಗೂ ಪ್ರಜ್ವಲ್ ಜೊತೆ ಹದಿನೈದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದೆ. ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಮಾಡಿದ ದೌರ್ಜನ್ಯ, ನಮ್ಮ ಜಮೀನು ಬರೆಸಿಕೊಂಡಿದ್ದು, ಹೆಂಡತಿ ಮೇಲೆ ಹಲ್ಲೆ ಮಾಡಿದ್ದ ವಿಚಾರವಾಗಿ ನಾನು ಅವರ ಮನೆಯಿಂದ ಹೊರಗೆ ಬಂದೆ. ನಾನು ಅವರ ವಿರುದ್ಧ ಕೇಸ್ ದಾಖಲಿಸಿ ಹೋರಾಟ ಮಾಡುವ ತಯಾರಿಯಲ್ಲಿ ಇದ್ದೆ. ಆಗ ಅವರ ವಿರುದ್ಧ ಹೋರಾಟ ಮಾಡುತ್ತಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಬಗ್ಗೆ ವಿಚಾರ ಗೊತ್ತಾಗಿ ಅವರ ಬಳಿ ಕಷ್ಟ ಹೇಳಿಕೊಂಡಿದ್ದೆ. ಆಗ, ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಅವರು ಕೇಸ್ ತಗೊಳ್ಳಲಿಲ್ಲ. ಹಾಗಾಗಿ ನಾನು ಬೇರೆ ಲಾಯರ್ ಮೂಲಕ ಕೇಸ್ ಹಾಕಿಸಿದೆ. ಆಗ ಮತ್ತೆ ನನ್ನನ್ನು ಕರೆಸಿ, ಕೋರ್ಟ್ ಹೋರಾಟ ಮಾಡಿದರೆ ನಿನಗೆ ನ್ಯಾಯ ಸಿಗಲ್ಲ. ಜನರಿಗೆ ಗೊತ್ತಾಗಬೇಕು ಎಂದರು. ಎಲ್ಲಾ ಮಾದ್ಯಮಗಳ ಎದುರು ಹೇಳಿಕೆ ಕೊಡಿಸಿದರು. ಆಗ ಅವರೇ ನನ್ನ ಜೊತೆ ನಿಂತು ಅವರೇ ಹೇಳಿಕೆ ಕೊಟ್ಟಿದ್ದರು’ ಎಂದು ಕಾರ್ತಿಕ್ ಹೇಳಿದ್ದಾರೆ.

ಇದೆಲ್ಲ ಆದ ಬಳಿಕ ಪ್ರಜ್ವಲ್ ರೇವಣ್ಣ ನನ್ನ ವಿರುದ್ಧ ಸ್ಟೇ ತಂದರು. ಯಾವುದೆ ವೀಡಿಯೋ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು. ಆಗ ಆ ತಡೆಯಾಜ್ಞೆ ಪ್ರತಿಯನ್ನು ತೆಗೆದುಕೊಂಡು ನಾನು ದೇವರಾಜೇಗೌಡ ಬಳಿ ಹೋದೆ. ಆಗ ಅವರು, ‘ನಿನ್ನ ಬಳಿ ಏನೊ ವೀಡಿಯೋ, ಫೋಟೊ ಇದೆಯಂತೆ, ಹಾಗಾಗಿ ತಡೆಯಾಜ್ಞೆ’ ತಂದಿದಾರೆ ಎಂದರು.

‘ವಿಡಿಯೋ ಕೊಡು, ಯಾರಿಗೂ ಕೊಡಲ್ಲ ಎಂದಿದ್ದ ದೇವರಾಜೇಗೌಡ’

ನನ್ನ ಬಳಿ ಏನು ವೀಡಿಯೋ ಇದೆ? ಅದನ್ನು ಅವರಿಗೆ ಯಾರು ಹೇಳಿದರು ಎಂದು ದೇವರಾಜೇಗೌಡರನ್ನು ಪ್ರಶ್ನಿಸಿದೆ. ಅದಕ್ಕವರು, ನಿನ್ನ ಬಳಿ ಇರುವ ಫೋಟೊ ಹಾಗೂ ವೀಡಿಯೊ ನನಗೆ ಕೊಡು ಎಂದರು. ಯಾರಿಗೂ ತೋರಿಸಲ್ಲ, ಜಡ್ಜ್ ಮುಂದೆ ಪ್ರಸ್ತುತಪಡಿಸುತ್ತೇನೆ. ತಡೆಯಾಜ್ಞೆ ತೆರವು ಮಾಡಿಸಿಕೊಡುತ್ತೇನೆ ಎಂದಿದ್ದರು. ಅವರನ್ನು ನಂಬಿ ನನ್ನ ಬಳಿ ಇದ್ದ ಒಂದು ಕಾಪಿಯನ್ನು ಅವರಿಗೆ ಕೊಟ್ಟಿದ್ದೆ. ಅದನ್ನು ಅವರು ಸ್ವಾರ್ಥಕ್ಕೆ ಬಳಸಿಕೊಂಡರು. ನಾನು ಅದನ್ನು ಕೊಟ್ಟು ವಕಾಲತ್ ಪತ್ರಕ್ಕೆ ಸಹಿ ಮಾಡಿ ಬಂದಿದ್ದೆ ಎಂದು ಕಾರ್ತಿಕ್ ತಿಳಿಸಿದ್ದಾರೆ.

‘ತಿಂಗಳಾದರೂ ಕೇಸ್ ಮೂವ್ ಮಾಡದ ದೇವರಾಜೇಗೌಡ’

ದೇವರಾಜೇಗೌಡರು ತಿಂಗಳಾದರೂ ಕೂಡ ಕೇಸ್ ಮೂವ್ ಮಾಡಿರಲಿಲ್ಲ. ಆ ಬಗ್ಗೆ ವಿಚಾರಿಸಿದಾಗ, ಈಗ ಮಾಡೋಕೆ ಆಗಲ್ಲ ಸ್ವಲ್ಪ ದಿನ ಇರು, ಮುಂದೆ ನೋಡೋಣ ಎಂದಿದ್ದರು. ಅಲ್ಲಿಂದ ನಾನು ಸುಮ್ಮನಾದೆ. ಕೊಟ್ಟ ವೀಡಿಯೋ ವಾಪಸ್ ಕೇಳಿದ್ದಕ್ಕೆ, ನನ್ನ ಬಳಿಯೇ ಇರಲಿ ಎಂದರು. ಆಗ ನಾನು ಸುಮ್ಮನಾದೆ ಎಂದು ಕಾರ್ತಿಕ್ ಹೇಳಿದ್ದಾರೆ.

ಇದನ್ನೂ ಓದಿ: ವಿಡಿಯೋ ಕೇಸ್‌: ಪ್ರಜ್ವಲ್ ರೇವಣ್ಣ ತಪ್ಪು ಸಾಬೀತಾದ್ರೆ ಏನು ಶಿಕ್ಷೆ? ಕಾನೂನಿನಲ್ಲಿರುವ ಅವಕಾಶಗಳೇನು?

ರಾಸಲೀಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದ ದೇವರಾಜೇಗೌಡ

ಇತ್ತೀಚೆಗೆ ಆರು ತಿಂಗಳ ಹಿಂದೆ ದೇವರಾಜೇಗೌಡ ಸುದ್ದಿಗೋಷ್ಠಿ ಮಾಡಿದ್ದರು. ಅವರ ಹಾಗು ರೇವಣ್ಣ ಕುಟುಂಬದ ಜಗಳ ನೆಪ ಮಾಡಿಕೊಂಡು, ಹಾಸನದ ಸರ್ಕಲ್​​​ನಲ್ಲಿ ರಾಸಲೀಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆಗ ನಾನು ಅವರ ಬಳಿ ಹೋಗಿ, ಯಾಕೆ ಹೀಗೆ ಮಾಡಿದ್ದೀರಿ ಎಂದು ಕೇಳಿದ್ದೆ. ಆಗ ಅವರು, ನಿನಗೂ ಇದಕ್ಕೂ ಸಂಬಂಧ ಇಲ್ಲ, ಸುಮ್ಮನಿರು ಎಂದಿದ್ದರು ಎಂದು ಕಾರ್ತಿಕ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​ಗೆ ಬಿಗ್ ಟ್ವಿಸ್ಟ್, ಸಂತ್ರಸ್ತೆಯ ಗಂಡನ ತಾಯಿ ಸ್ಫೋಟಕ ಹೇಳಿಕೆ

ಬಿಜೆಪಿ ಹೈಕಮಾಂಡ್​ಗೆ ಪತ್ರ ಬರೆದಿದ್ದ ದೇವರಾಜೇಗೌಡ

ಈ ಎಲ್ಲ ಬೆಳವಣಿಗೆಗಳ ನಂತರ ಪ್ರಜ್ವಲ್​​ಗೆ ಟಿಕೆಟ್ ಕೊಡದಂತೆ ಬಿಜೆಪಿ ಹೈಕಮಾಂಡ್​​ಗೆ ದೇವರಾಜೇಗೌಡ ಪತ್ರ ಬರೆದಿದ್ದರು. ಅದರ ಕಾಪಿಯನ್ನು ನನಗೂ ಕಳುಹಿಸಿದ್ದರು. ಕೋರ್ಟ್​​ನಲ್ಲಿ ನ್ಯಾಯ ಸಿಗದಿದ್ದರೆ ಈ ರೀತಿ ಸಿಗುತ್ತದೆ ಎಂದಿದ್ದರು. ಹೇಗಾದರೂ ಸರಿ, ನ್ಯಾಯ ಸಿಗಲಿ ಎಂದು ನಾನು ಸುಮ್ಮನಿದ್ದೆ. ಆದರೆ, ನೆನ್ನೆ ಅವರು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಪೆನ್​ಡ್ರೈವ್ ಅವರಿಗೆ ಕೊಡುವುದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರಿಗೆ ಕೊಟ್ಟಿದ್ದೆ ಎಂದು ಸುಳ್ಳು ಆರೋಪ‌ ಮಾಡಿದ್ದಾರೆ. ಆದರೆ, ನಾನು ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ಈ ಬಗ್ಗೆ ಪೆನ್ ಡ್ರೈ ವ್ ಕೊಟ್ಟಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Tue, 30 April 24

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ