ಪ್ರಜ್ವಲ್ ರೇವಣ್ಣನ ವಿಡಿಯೋ ಲೀಕ್ ಆಗಿದ್ದೇಗೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಮುಖಂಡ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು ಎಸ್‌ಐಟಿಗೆ ವರ್ಗಾವಣೆಯಾಗಿದ್ದು, ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ತಂಡ ತನಿಖೆ ತೀವ್ರಗೊಳಿಸಿದೆ. ಇದರ ಮಧ್ಯೆ ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಅವರು ಪ್ರಜ್ವಲ್ ರೇವಣ್ಣ ವಿಡಿಯೋ ಲೀಕ್​ ಆಗಿದ್ದೇಗೆ ಎನ್ನುವ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣನ ವಿಡಿಯೋ ಲೀಕ್ ಆಗಿದ್ದೇಗೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಮುಖಂಡ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Apr 29, 2024 | 9:37 PM

ಹಾಸನ, (ಏಪ್ರಿಲ್ 29): ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ವೈರಲ್ ಆಗಿದ್ದು, ಇದೀಗ ಈ ಪ್ರಕರಣದ ತನಿಖೆಯನ್ನು ಎಸ್​ಐಟಿ ನಡೆಸಿದೆ. ಆದ್ರೆ,  ಮೊದಲಿಗೆ ಈ ವಿಡಿಯೋಗಳು ಲೀಕ್ ಆಗಿದ್ದೇಗೆ? ಯಾರು ಮಾಡಿದ್ರು? ಎನ್ನುವ ಚರ್ಚೆಗಳು ಶುರುವಾಗಿದ್ದು, ಇದೀಗ ವಿಡಿಯೋ ಲೀಕ್ ಆಗಿರುವುದೇಗೆ ಎನ್ನುವುದನ್ನು  ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಹಾಸನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೇವರಾಜೇಗೌಡ, ಈ ವಿಡಿಯೋ ವಿಚಾರ 2023 ರಲ್ಲೇ ಬಂದಿತ್ತು. ಆದ್ರೆ, ಪ್ರಜ್ವಲ್ ರೇವಣ್ಣ ನ್ಯಾಯಾಲಯದಲ್ಲಿ ಸ್ಟೇ ಪಡೆದುಕೊಂಡಿದ್ದರು. ಈ ವೇಳೆ ಅವರ ಅಂದಿನ ಕಾರು ಚಾಲಕ ಕಾರ್ತಿಕ್ ಮೇಲೂ ಸ್ಟೇ ಪಡೆದಿದ್ದರು. ಈ ವೇಳೆ ಕಾರ್ತಿಕ್ ನನ್ನ ಬಳಿಗೆ ಬಂದು ವಕಾಲತ್ತು ಹಾಕಿ ಎಂದಿದ್ದ, ಈ ವೇಳೆ ಪ್ರಜ್ವಲ್ ರೇವಣ್ಣನ ವಿಡಿಯೋಗಳನ್ನು ನೋಡಿದ್ದೆ ಎಂದು ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟರು.

ಹಲವಾರು ಅಶ್ಲೀಲ ವೀಡಿಯೋ ಇತ್ತು. ನಂತರ ಯಾರ್ಯಾರಿಗೆ ಈ ವಿಡಿಯೋಗಳನ್ನು ಕೊಟ್ಟಿದ್ದಿಯಾ ಎಂದು ಕಾರ್ತಿಕ್​ಗೆ ಕೇಳಿದ್ದೆ. ಅದಕ್ಕೆ ಆತ ಈಗಾಗಲೇ ವಿಡಿಯೋಗಳು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್, ಸೇರಿ ಕೆಲ ಕಾಂಗ್ರೆಸ್ ಲೀಡರ್ ಗೆ ಹೋಗಿದೆ ಎಂದು ಹೇಳಿದ್ದ. ಆದ್ರೆ, ಅವರು ಎರಡು ತಿಂಗಳಾಗಿದ್ದರೂ ಏನು ಮಾಡಿಲ್ಲ. ಕೇಳಿದ್ರೆ ರಾಜಕೀಯವಾಗಿ ಇದನ್ನು ಯಾವಾಗ ಬಳಕೆ ಮಾಡಬೇಕು ಅನ್ನೊದು ಗೊತ್ತಿದೆ ಆಗ ಮಾಡುತ್ತೇನೆ ಎಂದು ಕಾರ್ತಿಕ್ ಹೇಳಿದ್ದ ಎಂದು ದೇವರಾಜೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ಐದಾರು ಸಂತ್ರಸ್ತೆಯರು ಪತ್ತೆ, ವಿಡಿಯೋ ಬಗ್ಗೆ ಮಹತ್ವದ ಮಾಹಿತಿ ಕಲೆಹಾಕಿದ ಎಸ್​ಐಟಿ

ಇದಾದ ಬಳಿಕ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡ ಅವ್ರಿಗೆ ಪತ್ರ ಬರೆದು ಇ ಮೇಲ್ ಮಾಡಲಾಗಿತ್ತು. ಆದ್ರೆ ಇ ಮೇಲ್ ಡಿಲಿವರ್ ಆಗಿರಲಿಲ್ಲ. ನಂತರ ವಿಜೇಯೇಂದ್ರ ಅವರಿಗೂ ವಿಡಿಯೋ ಬಗ್ಗೆ ಪತ್ರ ಬರೆದು ಕಛೇರಿಗೆ ನೀಡಿದ್ದೆ ಅವರು ಹೇಳಿದಂತೆ ಪತ್ರ ಅವರಿಗೂ ತಲುಪಿಲ್ಲ. ಕಾಂಗ್ರೆಸ್ ಈಗ ಎಲ್ಲರಿಗೂ ಗೊತ್ತಿತ್ತು ಎನ್ನುತ್ತಿದೆ ಆದ್ರೆ ಇದು ಅವರಿಗೆಲ್ಲ ಗೊತ್ತಿಲ್ಲ. ವಿಡಿಯೋ ಮಾಡಿದ್ದು ತಪ್ಪು. ಅದೇ ರೀತಿ ಹೆಣ್ಣು ಮಕ್ಕಳ ವಿಡಿಯೋ ರಿಲೀಸ್ ಮಾಡಿದ್ದು ಸಹ ತಪ್ಪು. ಕಾರ್ಯಕ್ರಮ ಒಂದರಲ್ಲಿ ಸ್ಟೇಜ್ ಹತ್ತಲು ಬಿಡದೇ ಡರ್ಟಿ ಫೆಲೋ ಎಂದು ನಿಂದಿಸಿದ್ದ. ನಿನ್ನ ಮಗ ಕೋರ್ಟ್ ನಲ್ಲಿ ತೆಗೆದುಕೊಂಡಿರುವ ಸ್ಟೇ ವೆಕೇಟ್ ಮಾಡಿಸಿ ಮಹಿಳೆಯರ ಅನುಮತಿ ಕೊಡಿಸು ನಾನು ಎಲ್ ಇ ಡಿ ಪರದೆಯಲ್ಲಿ ಪ್ಲೇ ಮಾಡಿಸುತ್ತೆನೆ. ಆಗ ಯಾರು ಡರ್ಟಿ ಫೆಲೋ ಎಂದು ಆವಾಗಲೇ ನಾನು ರೇವಣ್ಣನಿಗೆ ಹೇಳಿದ್ದೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ.

ಯಾರು ಈ ಕಾರ್ತಿಕ್?

ಕಾರ್ತಿಕ್ ದಶಕಗಳ ಕಾಲ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ. ಆದ್ರೆ, ಇತ್ತೀಚೆಗೆ ಅದ್ಯಾಕೋ ಏನಾಯ್ತೋ ಏನೋ ಕಾರ್ತಿಕ್, ಪ್ರಜ್ವಲ್ ರೇವಣ್ಣ ಹಾಗೂ ಅವರ ತಾಯಿ ಭವಾನಿ ರೇವಣ್ಣ ವಿರುದ್ಧ ತಿರುಗಿಬಿದ್ದಿದ್ದ. ಅಲ್ಲದೇ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಇಬ್ಬರೂ ಹೊಳೆನರಸೀಪುರ ಠಾಣೆ ಪೊಲೀಸರ ಮೂಲಕ ಬಲವಂತವಾಗಿ ಕರೆದೊಯ್ದು, ಹಿಂಸೆ ನೀಡಿದ್ದಾರೆ. ಅಲ್ಲದೇ ಹೊಳೆನರಸೀಪುರ ತಾಲ್ಲೂಕಿನಲ್ಲಿ ಇರುವ 13 ಎಕರೆ ಭೂಮಿಗಾಗಿ ತನಗೆ ಕಿರುಕುಳ ನೀಡಿದ್ದಾರೆ ಆರೋಪಿಸಿದ್ದ. 2023ರ ಮಾರ್ಚ್ 12ರಂದು ತನ್ನನ್ನು ಕಿಡ್ನಾಪ್ ಮಾಡಿದ್ದರು ಎಂದು ಪ್ರಜ್ವಲ್ ರೇವಣ್ಣ, ಭವಾನಿ ವಿರುದ್ಧವೇ ದೂರು ನೀಡಿದ್ದ. ಇದೀಗ ದೇವರಾಜೇಗೌಡ  ಹೇಳುವ ಪ್ರಕಾರ ಕಾರ್ತಿಕ್​ ಪೆನ್​​ಡ್ರೈವ್ ಆಚೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Mon, 29 April 24

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ