ಸಂತ್ರಸ್ತೆಯ ಸಂಬಂಧಿಕರೆಂದು ಮಾಧ್ಯಮಗಳ ಮುಂದೆ ಬಂದ ಮಹಿಳೆಯರು ಆಕೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದರು!

ಸಂತ್ರಸ್ತೆಯ ಸಂಬಂಧಿಕರೆಂದು ಮಾಧ್ಯಮಗಳ ಮುಂದೆ ಬಂದ ಮಹಿಳೆಯರು ಆಕೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 29, 2024 | 6:07 PM

ಒಂದು ಮಾತು ಮಾತ್ರ ಸತ್ಯ, ಸಂಬಂಧಿಕರೆಂದು ಹೇಳಿಕೊಂಡ ಮಹಿಳೆಯರು ತಮ್ಮ ಸಂಬಂಧಿಯನ್ನೇ (ಸಂತ್ರಸ್ತೆ) ಕಟಕಟೆಯಲ್ಲಿ ನಿಲ್ಲಿಸಿದರು. ಅವರು ಹೇಳೋದೇ ನಿಜವಾದರೆ, ವಿಡಿಯೋಗಳಲ್ಲಿ ಇರುವವರು ಪ್ರಜ್ವಲ್ ಅಲ್ಲವೇ? ಪ್ರಜ್ವಲ್ ನಿರಪರಾಧಿಯಾಗಿದ್ದರೆ ವಿದೇಶಕ್ಕೆ ಹಾರಿಹೋಗುವ ಅವಶ್ಯಕತೆ ಏನಿತ್ತು? ಎನ್ನುವ ಪ್ರಶ್ನೆಗಳು ಜನರಲ್ಲಿ ಹುಟ್ಟುತ್ತವೆ.

ಹಾಸನ: ಹೆಚ್ ಡಿ ರೇವಣ್ಣ (HD Revanna) ಮಗ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ಪೆನ್ ಡ್ರೈವ್ ಗಳಿಗೆ ಸಂಬಂಧಿಸಿದ ವಿಚಾರಕ್ಕೆ ಹೊಸ ತಿರುವು ಸಿಕ್ಕಿದೆ. ಸಂತ್ರಸ್ತೆಯ ಸಂಬಂಧಿಕರು ಎಂದು ಹೇಳಿಕೊಂಡ ಕೆಲ ಮಹಿಳೆಯರು ರೇವಣ್ಣ ಪರ ವಕಾಲತ್ತು ವಹಿಸಿಕೊಂಡಿರುವ ಒಬ್ಬ ವಕೀಲನೊಂದಿಗೆ ಹಾಸನ ಪ್ರೆಸ್ ಕ್ಲಬ್ ನಲ್ಲಿ ಹಾಜರಾಗಿ ಸಂತ್ರೆಸ್ತೆಯ (victim) ವಿರುದ್ಧ ಸಾಲಸೋಲ ಮಾಡಿಕೊಂಡವಳು, ನಡತೆಗೆಟ್ಟವಳು ಎಂಬ ಆರೋಪಗಳನ್ನು ಮಾಡಿ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ಮಾಡಿದರು. ಅವರು ಮೊದಲ ಬಾರಿಗೆ ಮಾಧ್ಯಮಗಳ ಕೆಮೆರಾ ಮುಂದೆ ಬಂದ ಕಾರಣ, ಮಾತುಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಪ್ರೆಸ್ ಕ್ಲಬ್ ಗೆ ಬಂದಿದ್ದ 5-6 ಜನರಲ್ಲಿ ಯಾರೂ ಗಟ್ಟಿಯಾಗಿ ಮಾತಾಡಲಿಲ್ಲ. ಅವರು ಹೇಳಿಕೆ ಬಳಿಕ ಪತ್ರಕರ್ತರು ಮರುಪ್ರಶ್ನೆ ಕೇಳಿದಾಗ ಉತ್ತರಿಸಲು ತಡವರಿಸುತ್ತಿದ್ದರು ಇಲ್ಲವೇ ಸುಮ್ಮನಾಗಿಬಿಡುತ್ತಿದ್ದರು. ಅವರ ಬದಲು ವಕೀಲರು ಮತಾಡಲು ಮುಂದಾದಾಗ ಪತ್ರಕರ್ತರು ಮಹಿಳೆಯರೇ ಮಾತಾಡಲಿ ಎಂದರು. ಒಂದು ಮಾತು ಮಾತ್ರ ಸತ್ಯ, ಸಂಬಂಧಿಕರೆಂದು ಹೇಳಿಕೊಂಡ ಮಹಿಳೆಯರು ತಮ್ಮ ಸಂಬಂಧಿಯನ್ನೇ (ಸಂತ್ರಸ್ತೆ) ಕಟಕಟೆಯಲ್ಲಿ ನಿಲ್ಲಿಸಿದರು. ಅವರು ಹೇಳೋದೇ ನಿಜವಾದರೆ, ವಿಡಿಯೋಗಳಲ್ಲಿ ಇರುವವರು ಪ್ರಜ್ವಲ್ ಅಲ್ಲವೇ? ಪ್ರಜ್ವಲ್ ನಿರಪರಾಧಿಯಾಗಿದ್ದರೆ ವಿದೇಶಕ್ಕೆ ಹಾರಿಹೋಗುವ ಅವಶ್ಯಕತೆ ಏನಿತ್ತು? ಎನ್ನುವ ಪ್ರಶ್ನೆಗಳು ಜನರಲ್ಲಿ ಹುಟ್ಟುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ: ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆಗಳಿವು