ಬೆಟ್ಟಿಂಗ್​ಗೆ ವೇದಿಕೆಯಾದ ಲೋಕಸಭಾ ಚುನಾವಣಾ ಫಲಿತಾಂಶ; ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನೇರಾನೇರ ಬಾಜಿ

ವರ್ಷಕ್ಕೊಮ್ಮೆ ನಡೆಯುವ ಐಪಿಎಲ್​ ಕ್ರಿಕೆಟ್ ಪಂದ್ಯ​ಕ್ಕೆ ಜನರು ಮುಗಿಬಿದ್ದು ಬೆಟ್ಟಿಂಗ್ ಆಡುತ್ತಾರೆ,​ ಇನ್ನು ಐದು ವರ್ಷಕ್ಕೊಮ್ಮೆ ಬರುವ ದೇಶದ ಚುನಾವಣೆಗೆ ಬಾಜಿ ಕಟ್ಟುವವರ ಸಂಖ್ಯೆ ಹೇಗಿರಬೇಡ, ಅದರಲ್ಲೂ ಆಂಧ್ರ ಹಾಗೂ ತಮಿಳುನಾಡಿನ ಗಡಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಬೆಟ್ಟಿಂಗ್​ ಭರಾಟೆ ಜೋರಾಗಿಯೇ ನಡೆಯುತ್ತಿದೆ.

ಬೆಟ್ಟಿಂಗ್​ಗೆ ವೇದಿಕೆಯಾದ ಲೋಕಸಭಾ ಚುನಾವಣಾ ಫಲಿತಾಂಶ; ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನೇರಾನೇರ ಬಾಜಿ
ಕೋಲಾರದಲ್ಲಿ ಹೆಚ್ಚಾದ ಲೋಕಸಭಾ ಬೆಟ್ಟಿಂಗ್​
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 01, 2024 | 3:21 PM

ಕೋಲಾರ, ಮೇ.01: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆ ಸೇರಾಗಿದೆ. ಹೀಗಿರುವಾಗ ಕೋಲಾರ(Kolar)ದಲ್ಲಿ ನಾಲ್ಕು ಜನರು ಸೇರಿದ್ರೆ ಮಾತು ಶುರುವಾಗೋದೆ ಚುನಾವಣೆ ಏನಾಗಬಹುದೆಂದು. ಈ ಬಾರಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲ್ತಾರೆ, ಎನ್ನುವುದೊಂದೇ ಲೆಕ್ಕಾಚಾರ. ಅದರಲ್ಲೂ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗಂತು ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ. ಅದರಲ್ಲೂ ಚುನಾವಣೆಯ ಫಲಿತಾಂಶಕ್ಕೆ ಬರೋಬ್ಬರಿ ಒಂದುವರೆ ತಿಂಗಳು ಕಾಯಬೇಕಾದ ಪರಿಸ್ಥಿತಿ ಇರುವ ಕಾರಣ ಕುತೂಹಲ ದುಪ್ಪಟ್ಟಾಗುತ್ತಿದ್ದು, ಬೆಟ್ಟಿಂಗ್(Betting)​ ಆಗಿ ಪರಿವರ್ತನೆಯಾಗುತ್ತಿದೆ.

ಬೆಟ್ಟಿಂಗ್​ಗೆ ವೇದಿಕೆಯಾದ ಲೋಕಸಭಾ ಚುನಾವಣೆ

ಚುನಾವಣೆ ಮುಗಿದು ಆರು ದಿನ ಕಳೆದಿದೆ ಈಗ ರಿಲ್ಯಾಕ್ಸ್ ಮೂಡ್​ನಿಂದ ಹೊರ ಬಂದಿರುವ ಕಾರ್ಯಕರ್ತರು ಹಾಗೂ ಮುಖಂಡರಂತೂ ಎಲ್ಲೆಲ್ಲೂ ಒಂದೇ ಮಾತು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬು ಗೆಲ್ತಾರಾ ಅಥವಾ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್​ ಗೆಲ್ಲುತ್ತಾರಾ ಎಂದು. ಈ ಹಿನ್ನಲೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಚುನಾವಣೆಯಲ್ಲಿ ತಮ್ಮ ತಮ್ಮ ಅಭ್ಯರ್ಥಿ ಪರವಾಗಿ ಬೆಟ್ಟಿಂಗ್​ ಆಡೋದಕ್ಕೆ ಶುರುಮಾಡಿದ್ದಾರೆ.

ಬಾಜಿಯಲ್ಲಿವೆ ಕುರಿ, ಕೋಳಿ, ಜಮೀನು

ಇನ್ನು ಐಪಿಎಲ್​ ಕ್ರಿಕೆಟ್​ ಮ್ಯಾಚ್​ಗಳಲ್ಲಿ ಬೆಟ್ಟಿಂಗ್ ಕಟ್ಟಲು ಪ್ರತ್ಯೇಕ ವೆಬ್​ ಸೈಟ್​, ಮೊಬೈಲ್​ ಅಪ್ಲಿಕೇಷನ್​ ಗಳು ಇರುತ್ತವೆ. ಆದರೆ, ಇಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡೆವೆ ನೇರಾನೇರ ಬೆಟ್ಟಿಂಗ್ ನಡೆಯುತ್ತದೆ. ಒಂದು ಗ್ರಾಮದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಬೆಟ್ಟಿಂಗ್​ ಕಟ್ಟಿಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ತಮ್ಮ ನೆಚ್ಚಿನ ನಾಯಕನ ಪರವಾಗಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಈ ಬೆಟ್ಟಿಂಗ್​ನಲ್ಲಿ ಕೇವಲ ಹಣವಷ್ಟೇ ಅಲ್ಲ, ಬೈಕ್​, ಕಾರು, ಕುರಿ, ಕೋಳಿ, ಮೇಕೆ, ಹಸು, ಜೊತೆಗೆ ಬೆಲೆಬಾಳುವ ಭೂಮಿಯನ್ನು ಕೂಡ ಪಣಕ್ಕಿಡಲಾಗಿದೆಯಂತೆ.
ಕೇವಲ ಚುನಾವಣೆ ಸಂಬಂಧವೇ ಜಿಲ್ಲೆಯಾಧ್ಯಂತ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ಗುಪ್ತ ಗುಪ್ತಾಗಿ​ ನಡೆಯುತ್ತಿದೆ ಎನ್ನಲಾಗಿದೆ. ಚುಣಾವಣೆಗೆ ಮುನ್ನವೇ ಅಭ್ಯರ್ಥಿಗಳ ಪರವಾದ ಟ್ರೆಂಡ್​ ನೋಡಿ ಬೆಟ್ಟಿಂಗ್ ಕಟ್ಟಲಾಗಿತ್ತಂತೆ. ಆದರೆ, ಈಗ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಯಾರು ಗೆಲ್ಲಬಹುದು ಎನ್ನುವ ಒಂದು ಲೆಕ್ಕಾಚಾರ ಸಿಕ್ಕಿದೆ. ಹಾಗಾಗಿ ಬೆಟ್ಟಿಂಗ್​ ಕಟ್ಟುವವರ ಸಂಖ್ಯೆ ದುಪ್ಪಾಟ್ಟಾಗಿದೆ. ಇದು ಗುಟ್ಟು ಗುಟ್ಟಾಗಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ನಡೆಯುವ ಬೆಟ್ಟಿಂಗ್ ಆಗಿದೆ.
ನಗರ ಪ್ರದೇಶದಲ್ಲಿ ಹಣ ವಾಹನ, ಚಿನ್ನ ಬೆಳ್ಳಿ, ಮೊಬೈಲ್​​ ಈ ರೀತಿ ಬೆಟ್ಟಿಂಗ್​ ನಡೆಯುತ್ತಿದ್ರೆ, ಗ್ರಾಮೀಣ ಭಾಗಗಳಲ್ಲಂತೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕುರಿ, ಕೋಳಿ, ಹಸು, ಎಮ್ಮೆ ಇಲ್ಲಾ ಹಣವನ್ನು ಅಡವಿಟ್ಟು ಬೆಟ್ಟಿಂಗ್​ ನಡೆಯುತ್ತಿದೆ ಎನ್ನಲಾಗುತ್ತಿದೆ. ಇನ್ನು ಜಿಲ್ಲಾಡಳಿತ ಹಾಗೂ ಪೊಲೀಸ್  ಇಲಾಖೆ ಕೂಡ ಈ ಬೆಟ್ಟಿಂಗ್​ ನಿಯಂತ್ರಣ ಮಾಡೋದು ಕಷ್ಟದ ಕೆಲಸವಾಗಿದೆ. ಹೌದು, ಬೆಟ್ಟಿಂಗ್ ಆಡುವವರು ತಾವು ವೈಯಕ್ತಿಕವಾಗಿ ಬೆಟ್ಟಿಂಗ್​ ಕಟ್ಟಿಕೊಂಡಿರುತ್ತಾರೆ, ಹಾಗಾಗಿ ಯಾವುದೇ ಸಾಕ್ಷಿ, ಪುರಾವೆ ಸಿಗೋದಿಲ್ಲ ಎನ್ನಲಾಗುತ್ತಿದೆ. ಆದರೂ ಪೊಲೀಸ್​ ಇಲಾಖೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಾರ್ವಜನಿಕರ ಮನವಿ ಮಾಡಿದ್ದಾರೆ.
ಒಟ್ಟಾರೆ ಬೆಟ್ಟಿಂಗ್​ ಕಾನೂನು ಬಾಹಿರವಾದರೂ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಕರ್ತರು ತಮ್ಮ ನಾಯಕನ ಗೆಲುವಿನ ಲೆಕ್ಕಾಚಾರ ಹಾಗೂ ಕುತೂಹಲದಲ್ಲಿ ಮುಳುಗಿದ್ದು, ಕಾರ್ಯಕರ್ತರ ಕುತೂಹಲಕ್ಕೆ ತೆರೆ ಬೀಳಲು ಇನ್ನು 34 ದಿನ ಬಾಕಿ ಇದ್ದು, ಯಾರು ಗೆಲ್ಲುತ್ತಾರೆ, ಯಾರು ಸೋಲ್ತಾರೆ, ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವುದು ತಿಳಿಯಲು ಮತಎಣಿಕೆ ಮುಗಿಯುವವರೆಗೆ ಕಾಯಲೇ ಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ