AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ, ಜನ ಅವನ ಮುಖಕ್ಕೆ ಉಗಿಯುತ್ತಿದ್ದಾರೆ: ಈಶ್ವರಪ್ಪ

ಪ್ರಜ್ವಲ್ ರೇವಣ್ಣನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ, ಜನ ಅವನ ಮುಖಕ್ಕೆ ಉಗಿಯುತ್ತಿದ್ದಾರೆ: ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2024 | 4:40 PM

ನಮ್ಮ ದೇಶದಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ, ದ್ರೌಪದಿಯ ಮಾನಪಹರಣಕ್ಕೆ ಕೈ ಹಾಕಿದ ದುಶ್ಶಾಸನನ ಗತಿಯೇನಾಯಿತು? ಸೀತೆಯ ಮೇಲೆ ಕಣ್ಣು ಹಾಕಿದ ರಾವಣನ ಸಂಹಾರವೂ ನಡೆಯಿತು. ದುಷ್ಟರಿಗೆ ದಂಡನೆಯಾಗುತ್ತದೆ ಆದರೆ ಮಹಿಳೆಯರು ಕಳಂಕಿತರಲ್ಲ ಎಂದು ಈಶ್ವರಪ್ಪ ಹೇಳಿದರು.

ಉಡುಪಿ: ಜಿಲ್ಲೆಯ ಬೈಂದೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಅವರು ಪ್ರಜ್ವಲ್ ರೇವಣ್ಣ (Prajwal Revanna) ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಕೋಪಾವಿಷ್ಠರಾದರು. ಅದೊಂದು ದರಿದ್ರ ವಿಷಯ ಅದರ ಬಗ್ಗೆ ಮಾತಾಡಿದರೆ ಬಾಯಲ್ಲಿ ಹುಳಬೀಳುತ್ತವೆ ಎಂದ ಈಶ್ವರಪ್ಪ ಸೆಕ್ಸ್ ಟೇಪ್ ಗಳು ಸಾರ್ವಜನಿಕಗೊಂಡಿರವುದರಿಂದ ಅದರಲ್ಲಿರುವ ಸಂತ್ರಸ್ತೆಯರ (victims) ಮಾನವೇನೂ ಹರಾಜಾಗಿಲ್ಲ, ಅದರೆ ಅವರನ್ನು ಬಳಸಿಕೊಂಡಿದ್ದಾನಲ್ಲ ಅವನ ಮಾನ ರಾಜ್ಯ, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ, ಜನರೆಲ್ಲ ಅವನಿಗೆ ಛೀ ಥೂ ಅನ್ನುತ್ತಿದ್ದಾರೆ ಎಂದರು. ನಮ್ಮ ದೇಶದಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ, ದ್ರೌಪದಿಯ ಮಾನಪಹರಣಕ್ಕೆ ಕೈ ಹಾಕಿದ ದುಶ್ಶಾಸನನ ಗತಿಯೇನಾಯಿತು? ಸೀತೆಯ ಮೇಲೆ ಕಣ್ಣು ಹಾಕಿದ ರಾವಣನ ಸಂಹಾರವೂ ನಡೆಯಿತು. ದುಷ್ಟರಿಗೆ ದಂಡನೆಯಾಗುತ್ತದೆ ಆದರೆ ಮಹಿಳೆಯರು ಕಳಂಕಿತರಲ್ಲ ಎಂದು ಈಶ್ವರಪ್ಪ ಹೇಳಿದರು. ಚುನಾವಣೆಯ ಸಂದರ್ಭದಲ್ಲಿ ಇಂಥ ಕುತಂತ್ರಗಳು ನಡೆಯುತ್ತಿರುತ್ತವೆ ಅಂತ ಅವರು ಯಾವ ಅರ್ಥದಲ್ಲಿ ಹೇಳಿದರೋ? ಅದು ಕುತಂತ್ರ ಅಂತಾದರೆ ಪ್ರಜ್ವಲ್ ನಿರಪರಾಧಿಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ, ಪತ್ರದಲ್ಲೇನಿದೆ?