ಏಪ್ರಿಲ್ 19ರಂದು ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ ಮತ್ತಿತರ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಈ ಚುನಾವಣೆಯ ಸಂದರ್ಭದಲ್ಲಿ ತನ್ನ ಶಾಲೆಯ ಮೂಲಸೌಕರ್ಯಕ್ಕೆ ಉಂಟಾದ ಹಾನಿಯ ಬಗ್ಗೆ ಚೆನ್ನೈನ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯೊಬ್ಬಳು ಕಳವಳ ವ್ಯಕ್ತಪಡಿಸಿದ್ದಾಳೆ. ಶಾಲೆಯನ್ನು ಮತಗಟ್ಟೆಯಾಗಿ ಬಳಸಿಕೊಂಡಿದ್ದು, ಸ್ಮಾರ್ಟ್ ಬೋರ್ಡ್, ಪ್ರಯೋಗಾಲಯದ ಉಪಕರಣಗಳಂತಹ ಅಗತ್ಯ ವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ವಿದ್ಯಾರ್ಥಿನಿಯು ಆರೋಪಿಸಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗೋಡೆಗಳನ್ನು ಪೋಸ್ಟರ್‌ಗಳಿಂದ ಹೇಗೆ ಹಾಳುಮಾಡಲಾಗಿದೆ ಮತ್ತು ಆಹಾರ ತ್ಯಾಜ್ಯವನ್ನು ಅಲ್ಲಲ್ಲಿ ಹೇಗೆ ಬಿಡಲಾಗಿದೆ ಎಂಬುದನ್ನು ವಿದ್ಯಾರ್ಥಿನಿ ವಿಡಿಯೋದಲ್ಲಿ ತೋರಿಸಿದ್ದಾಳೆ. ಏಪ್ರಿಲ್ 21ರಂದು ಹಂಚಿಕೊಂಡಿರುವ ವಿಡಿಯೋ ಈಗಾಗಲೇ 13 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. “ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ತಂಗುವ ಚುನಾವಣಾ ಅಧಿಕಾರಿಗಳಿಗೆ ಸ್ವಚ್ಛತೆಯ ಬಗ್ಗೆ ಸ್ವಲ್ಪವೂ ತಿಳಿದಿಲ್ಲವೇ. ವಿದ್ಯೆ ನೀಡುವ ಶಾಲೆಯನ್ನು ಇಷ್ಟೊಂದು ಕೊಳಕು ಮಾಡಿ ಹೋಗಿದ್ದಾರೆ ” ಪುಟ್ಟ ಬಾಲಕಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
A student voices concerns about her school’s state after #LokSabhaElection. Despite numerous petitions to the #TamilNadu School Education Department, educators report no action taken to prevent recurring damage. The Hindu had covered this before the election:… pic.twitter.com/ibfEz5YLrA
— Avantika Krishna (@AvantikaKrish) April 20, 2024
ಇದನ್ನೂ ಓದಿ: ಹುಬ್ಬು ಸುಂದರವಾಗಿಸಲು ಬ್ಯೂಟಿ ಪಾರ್ಲರ್ ಹೋದ ಮಹಿಳೆಯ ಮುಖ ಹೇಗಾಯಿತು ನೋಡಿ
“ಶಾಲೆಯಲ್ಲಿ ಈ ಅವ್ಯವಸ್ಥೆಯನ್ನು ಸೃಷ್ಟಿಸಿರುವುದು ನಾಚಿಕೆಗೇಡಿನ ಸಂಗತಿ” ಎಂದು ವಿಡಿಯೋಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು “ಸರ್ಕಾರವು ಸ್ವಚ್ಛತೆ ಬೋಧನೆ ಮತ್ತು ಸ್ವಚ್ ಭಾರತ್ ಘೋಷಣೆಗಳನ್ನು ಮಾಡುವುದಕ್ಕಿಂತ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಮತ್ತು ಮಾದರಿಯಾಗಬೇಕು. ಸರ್ಕಾರವು ಒಂದು ಸೌಲಭ್ಯವನ್ನು ಒದಗಿಸಲು ಮತ್ತೊಂದು ಸೌಲಭ್ಯವನ್ನು ದಮನ ಮಾಡಬಾರದು. ಮತದಾನವನ್ನು ಸಕ್ರಿಯಗೊಳಿಸಲು ನಾವು ಶೈಕ್ಷಣಿಕ ಸೌಲಭ್ಯಗಳನ್ನು ನಾಶಮಾಡಲು ಸಾಧ್ಯವಿಲ್ಲ,” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Mon, 22 April 24