Video Viral: ದೈತ್ಯ ಆನೆಗಳು ಪರಸ್ಪರ ಕಾದಾಟ ನಡೆಸುವ ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ ನೋಡಿ

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ದೈತ್ಯ ಆನೆಗಳು ಪರಸ್ಪರ ತಳ್ಳಿಕೊಂಡು ತಮ್ಮ ದೊಡ್ಡ ದಂತಗಳಿಂದ ಕಾದಾಡುತ್ತಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Video Viral: ದೈತ್ಯ ಆನೆಗಳು ಪರಸ್ಪರ ಕಾದಾಟ ನಡೆಸುವ ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ ನೋಡಿ
ದೈತ್ಯ ಆನೆಗಳ ಕಾದಾಟ
Image Credit source: Twitter

Updated on: Apr 05, 2023 | 12:10 PM

ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ದೈತ್ಯ ಆನೆಗಳು ಪರಸ್ಪರ ತಳ್ಳಿಕೊಂಡು ತಮ್ಮ ದೊಡ್ಡ ದಂತಗಳಿಂದ ಕಾದಾಡುತ್ತಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.
  • ವಿಡಿಯೋದಲ್ಲಿ ಆನೆಗಳ ಕಾದಾಟದ ಸಮಯದಲ್ಲಿ ಮರವೇ ಚಿಕ್ಕ ಗಿಡದಂತೆ ಮುರಿದು ಬೀಳುವುದನ್ನು ಕಾಣಬಹುದು.
  • ಈ ವಿಡಿಯೋ ಒಮ್ಮೆ ನಿಮ್ಮನ್ನು ಬೆಚ್ಚಿ ಬೀಳಿಸುವುದಂತೂ ಖಂಡಿತಾ. ದೈತ್ಯ ಆನೆಗಳ ಕಾದಾಟದ ವಿಡಿಯೋ ಇಲ್ಲಿದೆ ನೋಡಿ.

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ದೈತ್ಯ ಆನೆಗಳು ಪರಸ್ಪರ ತಳ್ಳಿಕೊಂಡು ತಮ್ಮ ದೊಡ್ಡ ದಂತಗಳಿಂದ ಕಾದಾಡುತ್ತಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಆನೆಗಳ ಕಾದಾಟದ ಸಮಯದಲ್ಲಿ ಮರವೇ ಚಿಕ್ಕ ಗಿಡದಂತೆ ಮುರಿದು ಬೀಳುವುದನ್ನು ಕಾಣಬಹುದು. ಈ ವಿಡಿಯೋ ಒಮ್ಮೆ ನಿಮ್ಮನ್ನು ಬೆಚ್ಚಿ ಬೀಳಿಸುವುದಂತೂ ಖಂಡಿತಾ. ದೈತ್ಯ ಆನೆಗಳ ಕಾದಾಟದ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಪುಟ್ಟ ಸಹಾಯದ ಮೂಲಕ ಟ್ರಾಫಿಕ್ ಪೊಲೀಸರ ಮುಖದಲ್ಲಿ ನಗು ಮೂಡಿಸಿದ ವ್ಯಕ್ತಿ

ರಾಷ್ಟ್ರೀಯ ಉದ್ಯಾನವನದಲ್ಲಿನ ಈ ಕಾದಾಟದ ವಿಡಿಯೋವನ್ನು @TheFigen ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇವರಿಬ್ಬರ ಸಮಸ್ಯೆ ಏನು? ಎಂದು ಕ್ಯಾಪ್ಷನ್​​ ಕೂಡ ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗಾಗಲೇ 168,000 ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ 3,200 ಕ್ಕೂ ಹೆಚ್ಚು ಲೈಕ್​ಗಳನ್ನು ಸಂಗ್ರಹಿಸಿದೆ.

ದೈತ್ಯ ಆನೆಗಳು ಪರಸ್ಪರ ತಳ್ಳಿಕೊಂಡು ತಮ್ಮ ದೊಡ್ಡ ದಂತಗಳಿಂದ ಕಾದಾಡುತ್ತಿರುವ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ಜನ ಟ್ವಿಟರ್​​ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು  ಕಾಮೆಂಟ್​ ಮೂಲಕ ವ್ಯಕ್ತಪಡಿಸಿದ್ದಾರೆ. ಕೆಲವೊಂದಿಷ್ಟು ಬಳಕೆದಾರರು ಇದು ಎದೆ ನಡುಕ ಹುಟ್ಟಿಸುವಂತಿದೆ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವು ಬಳಕೆದಾರರು ಅವರಿಬ್ಬರ ನಡುವಿನ ಜಗಳಕ್ಕೆ ಕಾರಣವೇನಾಗಿರಬಹುದು ಎಂದು ಹಸ್ಯಾಸ್ಪದವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:09 pm, Wed, 5 April 23

Follow Us