Father and Daughter: ಈ ವಿಚಿತ್ರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಿದೆ. 8 ವರ್ಷದ ಬಾಲಕಿ ಹೀಗೆ ತನ್ನ ಅಪ್ಪನಿಗೆ ಹೇಳಲು ಸಾಧ್ಯವೆ? ಅಷ್ಟಕ್ಕೂ ಅವಳಿಗೆ ಅಪ್ಪನನ್ನು ಮಾರುವಂಥ ಐಡಿಯಾ ಬಂದಿದ್ದಾದರೂ ಹೇಗೆ? ಮತ್ತೆ ಅಪ್ಪನ ಮೇಲೆ ಈ ಪರಿ ಕೋಪ ಬರಲು ಕಾರಣವೇನು? ಅಂತೆಲ್ಲ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಅನೇಕರು ಈ ಪೋಸ್ಟ್ ಅನ್ನು ವಿನೋದದಿಂದ ನೋಡಿದ್ದಾರೆ. ನಿಮಗೆ ಅವಳು ತುಂಬಾ ಪ್ರಾಮುಖ್ಯತೆಯನ್ನು ಕೊಟ್ಟಿದ್ಧಾಳೆ, ಅದಕ್ಕೇ ಅವಳಿಗೆ ನಿಮ್ಮ ಮೇಲೆ ಕೋಪ ಬಂದಿದೆ ಎಂದು ಅನೇಕರು ತಂದೆಯನ್ನು ಉದ್ದೇಶಿಸಿ ಹೇಳಿದ್ದಾರೆ. ಹಾಗಿದ್ದರೆ ವಿಷಯವೇನು?
ಇದನ್ನೂ ಓದಿ : Viral Video: ಬೈಕ್ ಆ್ಯಕ್ಸಿಡೆಂಟ್; ಇವನ ತಪ್ಪಿಗೆ ಅವನಿಗೆ ಶಿಕ್ಷೆ, ಈ ಹುಡುಗರಿಗೆ ಸೈಡ್ಮಿರರ್ ಯಾಕೆ ಬೇಡ?
‘ರೂ. 2 ಲಕ್ಷಕ್ಕೆ ಅಪ್ಪ ಮಾರಾಟಕ್ಕಿದ್ದಾನೆ’ ಎಂದು ಮನೆ ಬಾಗಿಲಿಗೆ ಸೇಲ್ ನೋಟ್ (Sale Note) ಅಂಟಿಸಿದ್ದಾಳೆ 8 ವರ್ಷದ ಮಗಳು. ಯಾವುದೋ ಒಂದು ಸಣ್ಣ ವಿಷಯಕ್ಕೆ ಆಕೆ ಭಯಂಕರ ಕೋಪಗೊಂಡಿದ್ದಾಳೆ. ಆ ಕೋಪವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಪೋಸ್ಟ್ ಹಾಕುವ ಮೂಲಕ ತೀರಿಸಿಕೊಂಡಿದ್ದಾಳೆ. ಇದು ತಮಾಷೆಗಾಗಿ ಎಂದು ಅಪ್ಪ ಸಮಜಾಯಿಷಿನ್ನೂ ಕೊಟ್ಟಿದ್ದಾನೆ.
A minor disagreement and 8-year-old decided to put up a Father For Sale notice out of our apartment door.
Methinks I am not valued enough. 😞 pic.twitter.com/Epavc6gBis
— Melanchoholic (@Malavtweets) October 2, 2023
X ನಲ್ಲಿ @Malavtweets ಎಂಬ ಖಾತೆದಾರರು ಈ ಪೋಸ್ಟ್ ಮಾಡಿದ್ದಾರೆ. ತನ್ನ ಮತ್ತು ಅಪ್ಪನ ಮಧ್ಯೆ ಉಂಟಾದ ಸಣ್ಣ ಭಿನ್ನಾಭಿಪ್ರಾಯದಿಂದಾಗಿ ಈ ಬಾಲಕಿ ಹೀಗೆ ಅಪಾರ್ಟ್ಮೆಂಟ್ನ ಬಾಗಿಲಿಗೆ ಸೇಲ್ ನೋಟ್ ತೂಗು ಹಾಕಿದ್ದಾಳೆ. ಈ ಪೋಸ್ಟ್ ಅನ್ನು ಈತನಕ ಸುಮಾರು 30,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ತುಂಬಾ ಮುದ್ದಾಗಿದೆ. ಈಕೆ ಟಿವಿ ಟೈಮ್, ಚಾಕೋಲೇಟ್, ಪಿಕ್ನಿಕ್, ರೌಂಡ್, ಸಿನೆಮಾ, ಬಟ್ಟೆಬರೆ ಏನನ್ನೂ ಕೇಳದೆ ಹೀಗೆ ಇಷ್ಟೊಂದು ವ್ಯಾವಹಾರಿಕವಾಗಿ ಮಾತನಾಡಿದ್ದಾಳೆಂದರೆ! ನಾನಂತೂ ಬಿದ್ದುಬಿದ್ದು ನಗುತ್ತಿದ್ದೇನೆ ಎಂದಿದ್ದಾರೆ ಅನೇಕರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:45 pm, Fri, 6 October 23