
ಚಳಿಗಾಲದಲ್ಲಿ ಹೆಚ್ಚಿನ ಜನ ಆಟೋ, ಬೈಕ್ಗಿಂತ ಕಾರುಗಳನ್ನು ಬುಕ್ ಮಾಡುತ್ತಾರೆ. ಕಾರಿನಲ್ಲಿ ಹೊರಗಿನ ಗಾಳಿ ಬರದಂತೆ ಗ್ಲಾಸ್ ಹಾಕಿಕೊಂಡು ಪ್ರಯಣ ಮಾಡಬಹುದು, ಆದರೆ ಆಟೋ, ಬೈಕ್ನಲ್ಲಿ ಎಲ್ಲವೂ ಓಪನ್ ಇರುತ್ತದೆ. ಇದರಿಂದ ಚಳಿ ಹೆಚ್ಚಾಗುತ್ತದೆ. ಅದಕ್ಕೆ ಹೆಚ್ಚಿನ ಜನ ಕಾರುಗಳನ್ನು ಉಪಯೋಗಿಸುತ್ತಾರೆ. ಇದರಿಂದ ಆಟೋ ಚಾಲಕರಿಗೆ ನಷ್ಟ ಆಗುತ್ತದೆ. ಅದಕ್ಕೆ ಇಲ್ಲೊಬ್ಬ ಆಟೋ ಚಾಲಕ (viral auto rickshaw) ತನ್ನ ಗ್ರಾಹಕರಿಗೆ ಚಳಿಗಾಲದಲ್ಲಿ ರಿಕ್ಷಾ ಸವಾರಿಯೂ ಉತ್ತಮವಾಗಿರಲಿ ಎಂದು ವಿಭಿನ್ನವಾಗಿ ಯೋಚನೆ ಮಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಆಟೋದಲ್ಲಿ ವಿಶೇಷ ಬದಲಾವಣೆಯನ್ನು ಮಾಡಿಕೊಂಡು ಹೊಸ ಲುಕ್ ನೀಡಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಅಚ್ಚರಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ಚಾಲಕ ತನ್ನ ಆಟೋದ ಎರಡೂ ಬದಿಗಳಲ್ಲಿ ಗಾಳಿ ಬರದಂತೆ ಎರಡು ದಪ್ಪ ಪರದೆಗಳನ್ನು ಅಳವಡಿಸಿದ್ದಾನೆ. ಜೊತೆಗೆ, ಚಾಲಕನ ಬದಿ ಮತ್ತು ಪ್ರಯಾಣಿಕರ ನಡುವೆ ದಪ್ಪ ಹಾಳೆಯನ್ನು ಕೂಡ ಅಳವಳಡಿಸಿರುವುದನ್ನು ಕಾಣಬಹುದು. ಇದನ್ನು ಚಾಲಕ ಹಾಗೂ ಪ್ರಯಾಣಿಕರ ನಡುವೆ ಸುಗಮ ಸಂವಹನ ಇರಲಿದೆ ಎಂದು ಅಳವಡಿಸಿದ್ದಾನೆ. ಈ ವಿಡಿಯೋವನ್ನು @mukul0112_ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಆಟೋವನ್ನು ‘ಟಾಪ್ ಮಾಡೆಲ್’ ಎಂದು ಕರೆದಿದ್ದಾರೆ. ಈ ವಿಡಿಯೋವನ್ನು ಸುಮಾರು 1 ಮಿಲಿಯನ್ ಜನರು ನೋಡಿದ್ದಾರೆ.
ಇದನ್ನೂ ಓದಿ: ಇಂದಿರಾನಗರದ ಪಾದಚಾರಿ ಮಾರ್ಗ ಅಪಾಯದಲ್ಲಿ: ಕೆನಡಾ ವ್ಯಕ್ತಿಯ ಹೇಳಿದ್ದೇನು?
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 40,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.ಆಟೋರಿಕ್ಷಾದ ವಿಶಿಷ್ಟ ಸೆಟಪ್ ಬಗ್ಗೆ ಆನ್‌ಲೈನ್‌ನಲ್ಲಿ ಭಾರೀ ಚರ್ಚೆ ನಡೆದಿದೆ. ಈ ಆಟೋದಲ್ಲಿ ಸನ್‌ರೂಫ್ ಒಂದು ಕಾಣೆಯಾಗಿದೆ ಎಂದು ಹಾಸ್ಯವಾಗಿ ಒಬ್ಬರು ಹೇಳಿದ್ದಾರೆ. ಇದು ನಿಜವೇ? ನನಗೆ ಅಚ್ಚರಿಯಾಗಿ ಕಾಣುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದೊಂದು ನಿಜಕ್ಕೂ ಮಾದರಿಯ ವಿಚಾರ, ಹಾಗೂ ಇದು ಚಳಿಯ ವಿರುದ್ಧ Z+ ರಕ್ಷಣೆ ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ