Viral Brain Teaser: ಹುಳ ಇಲ್ಲದೇ ಇರುವ ಚೆರ್ರಿ ಹಣ್ಣನ್ನು ಹುಡುಕಬಲ್ಲಿರಾ?

ಎಲ್ಲಾ ಚೆರ್ರಿ ಹಣ್ಣುಗಳ ಮೇಲೆ ಬಿಳಿ ಬಣ್ಣದ ಹುಳಗಳು ನಿಮ್ಮ ಕಣ್ಣಿಗೆ ಕಾಣಬಹುದು. ಆದರೆ ಸರಿಯಾಗಿ ಗಮನಿಸಿದರೆ ಒಂದು ಹಣ್ಣಿನಲ್ಲಿ ಮಾತ್ರ ಹುಳ ಇಲ್ಲ. ನಿಮಗೆ ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ. 

Viral Brain Teaser: ಹುಳ ಇಲ್ಲದೇ ಇರುವ ಚೆರ್ರಿ ಹಣ್ಣನ್ನು ಹುಡುಕಬಲ್ಲಿರಾ?
Viral Brain Teaser
Image Credit source: Facebook

Updated on: Mar 11, 2023 | 3:09 PM

ನಿಮ್ಮ ಮೆದುಳನ್ನು ಚುರುಕುಗೊಳಿಸಲು ಇಂತಹ ಆಟಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್​​ ಮಾಡುವಾಗ ಬ್ರೈನ್ ಟೀಸರ್​ನಂತಹ ಮೆದುಳಿಗೆ ಕೆಲಸ ಕೊಡುವ ಆಟಗಳಲ್ಲಿ ತೊಡಗಿಸಿಕೊಳ್ಳಿ. ಅಂತದ್ದೇ ಪೋಸ್ಟ್​​ ಒಂದನ್ನು ಹಂಗೇರಿಯನ್ ಕಲಾವಿದ ಗೆರ್ಗೆಲಿ ಡುಡಾಸ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಸಾಕಷ್ಟು ಹುಳಗಳಿಂದ ತುಂಬಿದ ಚೆರ್ರಿ ಹಣ್ಣುಗಳನ್ನು ನೀವು ಗಮನಿಸಬಹುದು. ಆದರೆ ನೀವು ಇದನ್ನು ಸರಿಯಾಗಿ ಗಮನಿಸಿದರೆ, ಇದರಲ್ಲಿ ಒಂದೇ ಒಂದು ಚೆರ್ರಿಯಲ್ಲಿ ಮಾತ್ರ ಹುಳವಿಲ್ಲ. ಆದರೆ ಅದನ್ನು ನೀವು ಗುರುತಿಸುವುದು ಅಷ್ಟು ಸುಲಭವಲ್ಲ.

ಚಿತ್ರ ಕಲಾವಿದ ಗೆರ್ಗೆಲಿ ಹಂಚಿಕೊಂಡಿರುವ ಈ ಪೋಸ್ಟ್​​ನಲ್ಲಿ ಹುಳು ಇಲ್ಲದ ಚೆರ್ರಿಯನ್ನು ಹುಡುಕಬಲ್ಲೀರಾ? ಎಂದು ಕ್ಯಾಪ್ಷನ್​​ ಕೂಡ ಹಾಕಲಾಗಿದೆ. ಆ ಪೋಸ್ಟ್​​​ ಇಲ್ಲಿದೆ ನೋಡಿ.

ಇದನ್ನೂ ಓದಿ: ಗಜರಾಜ ಬರುವುದನ್ನು ನೋಡಿ ಜನ ದಿಕ್ಕಾಪಾಲು

ನಿನ್ನೆ (ಮಾ. 10)ರಂದು ಶೇರ್​ ಮಾಡಲಾದ ಈ ಪೋಸ್ಟ್​​ ಸಾಕಷ್ಟು ವೈರಲ್​​ ಆಗಿದೆ. ಇದರಲ್ಲಿ ಸಾಕಷ್ಟು ಜನರು ನಾನು ಗುರುತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಸಾಕಷ್ಟು ಹಾಸ್ಯಸ್ಪದ ಕಾಮೆಂಟ್​ಗಳನ್ನು ಕೂಡ ಕಾಣಬಹುದು. ನೀವು ಕೆಲ ಹೊತ್ತಿನ ವರೆಗೆ ಸರಿಯಾಗಿ ಗಮನಿಸಿ. ಎಲ್ಲಾ ಚೆರ್ರಿ ಹಣ್ಣುಗಳ ಮೇಲೆ ಬಿಳಿ ಬಣ್ಣದ ಹುಳಗಳು ನಿಮ್ಮ ಕಣ್ಣಿಗೆ ಕಾಣಬಹುದು. ಆದರೆ ಸರಿಯಾಗಿ ಗಮನಿಸಿದರೆ ಒಂದು ಹಣ್ಣಿನಲ್ಲಿ ಮಾತ್ರ ಹುಳ ಇಲ್ಲ. ನಿಮಗೆ ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ.

viral brain teaser

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:07 pm, Sat, 11 March 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us