ಚೀಸ್ ಮತ್ತು ಮೇಯನೇಸ್ ಬಳಸಿ ಮಟ್ಕಾ ದೋಸೆ (MatkaDosa) ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೊರೊನಾ ನಂತರದ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಫುಡ್ ವ್ಲಾಗ್ ಕಂಡುಬರುತ್ತದೆ. ಜೊತೆಗೆ ಆಹಾರಗಳಲ್ಲಿಯೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ವಿಡಿಯೋಗಳು ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆ. ಅಂತದ್ದೇ ಒಂದು ವಿಡಿಯೋ ಇದೀಗಾ ಭಾರೀ ವೈರಲ್ ಆಗಿದೆ. ನೀವು ಸಾಮಾನ್ಯವಾಗಿ ಮಟ್ಕಾ ಟೀ ಕುಡಿದಿರುತ್ತೀರಿ, ಆದರೆ ಇಲ್ಲೊಂದು ಮಟ್ಕಾ ದೋಸೆ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಮಟ್ಕಾ ದೋಸೆ ವೈರಲ್ ವಿಡಿಯೋ ಇಲ್ಲಿದೆ.
#MatkaDosa. pic.twitter.com/Jg5K03uFzT
— Deepak Prabhu/दीपक प्रभु (@ragiing_bull) March 14, 2023
ಮಟ್ಕಾ ದೋಸೆಯ ವಿಡಿಯೋವನ್ನು ದೀಪಕ್ ಪ್ರಭು ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು, #MatkaDosa ಎಂದು ಕ್ಯಾಪ್ಷನ್ ಹಾಕಿದ್ದಾರೆ. ವಿಡಿಯೋದಲ್ಲಿ ಚೀಸ್, ಮೇಯನೇಸ್ ಮತ್ತು ಸಾಸ್ ಹಾಕಿ ಮಟ್ಕಾ ದೋಸೆಯನ್ನು ತಯಾರಿಸಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಚೀಸ್, ಮೇಯನೇಸ್ನ ಕಾಂಬಿನೇಷನ್ ಬಾಯಲ್ಲಿ ನಿರೂರಿಸಿದರೂ ಕೂಡ ಮಟ್ಕಾ ಏಕೆ? ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಮೂರು ಹೊತ್ತು ಊಟ ಸಿಗುತ್ತೇ ಎಂದು ಈತ ಮಾಡಿದ ಕೆಲಸ ಏನು ಗೊತ್ತಾ?
ಸಾಕಷ್ಟು ಟ್ವಿಟರ್ ಬಳಕೆದಾರರು ದೋಸೆ ಓಕೆ, ಮಟ್ಕಾ ಯಾಕೆ? ಎಂದು ಕಾಮೆಂಟ್ ಮಾಡಿದ್ದಾರೆ. ಅತಿಯಾದ ಚೀಸ್ ಬಳಸಿ, ಸಂಪ್ರದಾಯಿಕ ತಿಂಡಿಯಾದ ದೋಸೆಯ ರುಚಿಯನ್ನು ಬದಲಾಯಿಸುತ್ತಿದ್ದಾರೆ? ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಸಿದ್ದಾರೆ. ಇನ್ನು ಕೆಲವರು ಬಾಯಲ್ಲಿ ನೀರೂರುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:04 pm, Fri, 17 March 23