Viral News: 150 ವರ್ಷ ಹಳೆಯ ಪೇಂಟಿಂಗ್​ನಲ್ಲಿದ್ದ ಹುಡುಗಿಯ ಕೈಲಿತ್ತು ಸ್ಮಾರ್ಟ್​ಫೋನ್ ಇದು ಹೇಗೆ ಸಾಧ್ಯ?

|

Updated on: Apr 27, 2023 | 12:35 PM

ಸ್ಮಾರ್ಟ್​ಫೋನ್ ಹಾಗಿರಲಿ ಲ್ಯಾಂಡ್​ಲೈನ್ ಕೂಡ ಇರದ ಕಾಲವದು, 150 ವರ್ಷಗಳ ಹಿಂದಿನ ಪೇಂಟಿಂಗ್​ನಲ್ಲಿದ್ದ ಹುಡುಗಿಯ ಕೈಯಲ್ಲಿ ಸ್ಮಾರ್ಟ್​ಫೋನ್​ ಇರುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು.

Viral News: 150 ವರ್ಷ ಹಳೆಯ ಪೇಂಟಿಂಗ್​ನಲ್ಲಿದ್ದ ಹುಡುಗಿಯ ಕೈಲಿತ್ತು ಸ್ಮಾರ್ಟ್​ಫೋನ್ ಇದು ಹೇಗೆ ಸಾಧ್ಯ?
ಚಿತ್ರಕಲೆ
Follow us on

ಸ್ಮಾರ್ಟ್​ಫೋನ್ ಹಾಗಿರಲಿ ಲ್ಯಾಂಡ್​ಲೈನ್ ಕೂಡ ಇರದ ಕಾಲವದು, 150 ವರ್ಷಗಳ ಹಿಂದಿನ ಪೇಂಟಿಂಗ್​ನಲ್ಲಿದ್ದ ಹುಡುಗಿಯ ಕೈಯಲ್ಲಿ ಸ್ಮಾರ್ಟ್​ಫೋನ್​ ಇರುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಜನರು ಮಾರ್ವೆಲ್ ಕಂಪನಿಯ ಪೇಂಟಿಂಗ್​ಗಳನ್ನು ವೀಕ್ಷಿಸಲು ಪ್ರಾರಂಭಿಸಿದಾಗಿನಿಂದ, ಅವರು ಈ ಕಾಲ್ಪನಿಕ ಪರಿಕಲ್ಪನೆಯನ್ನು ನಿಜವೆಂದು ಒಪ್ಪಿಕೊಳ್ಳಲು ಪ್ರಾರಂಭಿಸಿದರು.

ಏಕೆಂದರೆ, ಈ ಚಿತ್ರಕಲೆಯಲ್ಲಿ ಹುಡುಗಿಯೊಬ್ಬಳು ಸ್ಮಾರ್ಟ್‌ಫೋನ್ ನೋಡುತ್ತಾ ನಡೆದುಕೊಂಡು ಹೋಗುತ್ತಿದ್ದಾಳೆ, ಅಲ್ಲಿಯ ಪರಿಸರ, ಆಕೆಯ ಬಟ್ಟೆ ಎಲ್ಲವೂ ಹಳೆಯದೇ ಆದರೆ ಕೈಯಲ್ಲಿ ಮಾತ್ರ ಸ್ಮಾರ್ಟ್​ಫೋನ್ ಇದೆ. ಈ ಫೋಟೊ 150 ವರ್ಷ ಹಳೆಯದು.

ಡೈಲಿ ಸ್ಟಾರ್ ನ್ಯೂಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ದಿ ಎಕ್ಸ್‌ಪೆಕ್ಟೆಡ್ ಒನ್ ಪೇಂಟಿಂಗ್ ಅನ್ನು 1860 ರಲ್ಲಿ ಫರ್ಡಿನಾಂಡ್ ಜಾರ್ಜ್ ವಾಲ್ಡ್‌ಮುಲ್ಲರ್ ರಚಿಸಿದ್ದಾರೆ. ಈ ವರ್ಣಚಿತ್ರವನ್ನು ಜರ್ಮನಿಯ ಮ್ಯೂನಿಚ್‌ನಲ್ಲಿರುವ ನ್ಯೂ ಪಿನಾಕೊಥೆಕ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ.

ಮತ್ತಷ್ಟು ಓದಿ: ಭಾರತದಲ್ಲಿನ ಆಪಲ್ ಸ್ಟೋರ್ ಉದ್ಯೋಗಿಗಳ ಮಾಸಿಕ ಸಂಬಳ ನಿಮ್ಮನ್ನು ಆಶ್ಚರ್ಯಗೊಳಿಸುವುದು ಖಚಿತ!

ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದ ಹುಡುಗಿ
ಮೊದಲ ಬಾರಿಗೆ ಈ ಪೇಂಟಿಂಗ್ 2017 ರಲ್ಲಿ ಎಲ್ಲರ ಕಣ್ಣಿಗೆ ಬಿದ್ದಿತ್ತು ಮತ್ತು ಅದರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮತ್ತೊಮ್ಮೆ ಈ ಚಿತ್ರವು ಅದರ ವಿಚಿತ್ರ ಅಂಶದಿಂದಾಗಿ ಚರ್ಚೆಯಲ್ಲಿದೆ. ಫೋಟೋದಲ್ಲಿ, ಮಹಿಳೆಯೊಬ್ಬರು ಫುಟ್‌ಪಾತ್‌ನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಅದರ ಸುತ್ತಲೂ ಅನೇಕ ಮರಗಳು ಮತ್ತು ಸಸ್ಯಗಳಿವೆ ಮತ್ತು ಪರ್ವತಗಳು ಸಹ ಹಿಂದೆ ಗೋಚರಿಸುತ್ತವೆ.

ಮುಂದೆ, ಪ್ರೇಮಿ ಕೈಯಲ್ಲಿ ಹೂವುಗಳೊಂದಿಗೆ ನೆಲದ ಮೇಲೆ ಮಂಡಿಯೂರಿ ಅವಳಿಗಾಗಿ ಕಾಯುತ್ತಿದ್ದಾನೆ. ಆದರೆ ಅಚ್ಚರಿಯ ವಿಷಯವೆಂದರೆ, ಜನರು ಸ್ಮಾರ್ಟ್ ಫೋನ್ ಎಂದು ಪರಿಗಣಿಸುತ್ತಿರುವುದನ್ನು ಮಹಿಳೆ ತನ್ನ ಎರಡೂ ಕೈಗಳಲ್ಲಿ ಹಿಡಿದಿದ್ದಾಳೆ. ಇಂದಿನ ಕಾಲಘಟ್ಟದಲ್ಲಿ ಜನರು ಬೀದಿಯಲ್ಲಿ ನಡೆಯುವಾಗಲೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಲೇ ಇರುವಂತೆ ಅವರ ಕಣ್ಣುಗಳು ಅದರ ಮೇಲೆಯೇ ನೆಟ್ಟಿವೆ.

ಇದನ್ನು ರಚಿಸಿರುವ ವ್ಯಕ್ತಿಯು ಟೈಂ ಟ್ರಾವೆಲರ್ ಆಗಿರಬೇಕು ಎಂದು ಜನರು ಹೇಳುತ್ತಾರೆ.

ಚಿತ್ರಕಲೆಯ ಸತ್ಯವೇನು?
ಆದರೆ ಚಿತ್ರಕಲೆಯ ಸತ್ಯವನ್ನು ಅದನ್ನು ಇರಿಸಲಾಗಿರುವ ವಸ್ತುಸಂಗ್ರಹಾಲಯವೇ ಹೇಳಿದೆ. ಹುಡುಗಿಯ ಕೈಯಲ್ಲಿ ದೇವರಿಗೆ ಸಂಬಂಧಿಸಿದ ಪುಸ್ತಕ ಕೈಯಲ್ಲಿದ್ದು ಆಕೆ ಏನೋ ನೋಡುತ್ತಾ ಹೋಗುತ್ತಿದ್ದಾಳೆ. ಈ ಚಿತ್ರಕಲೆಯನ್ನು ಅವರವರ ರೀತಿಯಲ್ಲಿ ಜನರು ಅರ್ಥೈಸಿಕೊಳ್ಳುತ್ತಿದ್ದಾರೆ, ಇಂದಿನ ಕಾಲಕ್ಕೆ ತಕ್ಕಂತೆ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಆದ್ದರಿಂದ ಯಾರ ಗಮನವೂ ಪುಸ್ತಕದ ಕಡೆಗೆ ಹೋಗದೆ ಫೋನ್ ಕಡೆಗೆ ಹೋಗಿದೆ. ಏಕೆಂದರೆ ಇದು ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ