AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿನ ಆಪಲ್ ಸ್ಟೋರ್ ಉದ್ಯೋಗಿಗಳ ಮಾಸಿಕ ಸಂಬಳ ನಿಮ್ಮನ್ನು ಆಶ್ಚರ್ಯಗೊಳಿಸುವುದು ಖಚಿತ!

ಎಕನಾಮಿಕ್ ಟೈಮ್ಸ್ ವರದಿಯು ಭಾರತದಲ್ಲಿ ಎರಡು ರಿಟೇಲ್ ಅಂಗಡಿಗಳನ್ನು ನಿರ್ವಹಿಸುತ್ತಿರುವ ಉದ್ಯೋಗಿಗಳು ತಿಂಗಳಿಗೆ ಸರಿಸುಮಾರು ರೂ.1 ಲಕ್ಷ ವೇತನ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

ಭಾರತದಲ್ಲಿನ ಆಪಲ್ ಸ್ಟೋರ್ ಉದ್ಯೋಗಿಗಳ ಮಾಸಿಕ ಸಂಬಳ ನಿಮ್ಮನ್ನು ಆಶ್ಚರ್ಯಗೊಳಿಸುವುದು ಖಚಿತ!
ಆಪಲ್ ಸ್ಟೋರ್, ಭಾರತImage Credit source: Business Today
Follow us
ನಯನಾ ಎಸ್​ಪಿ
|

Updated on: Apr 26, 2023 | 4:12 PM

ಭಾರತದಲ್ಲಿ ಆಪಲ್‌ನ (Apple) ಎರಡು ರಿಟೇಲ್ ಅಂಗಡಿಗಳು, ದೆಹಲಿ (Delhi) ಮತ್ತು ಮುಂಬೈನಲ್ಲಿ (Mumbai) ಪ್ರಾರಂಭವಾಗಿದೆ, ಇತರ ಟೆಕ್ ಬ್ರ್ಯಾಂಡ್ ರಿಟೇಲ್ ಸ್ಟೋರ್‌ಗಳಲ್ಲಿ (Retail Stores) ಕೆಲಸ ಮಾಡುವ ಉದ್ಯೋಗಿಗಳ ಸಂಬಳಕ್ಕಿಂತ ನಾಲ್ಕು ಪಟ್ಟು ಹೆಚ್ಚು ಗಳಿಸುವ ಉನ್ನತ ಶಿಕ್ಷಣ ಪಡೆದ ಮತ್ತು ತಂತ್ರಜ್ಞಾನದ ಬಗ್ಗೆ ಅರಿವಿರುವ ತಂಡವು ಈ ಅಂಗಡಿಗಳನ್ನು ನಿರ್ವಹಿಸುತ್ತಿದೆ. ಎಕನಾಮಿಕ್ ಟೈಮ್ಸ್ ವರದಿಯು ಭಾರತದಲ್ಲಿ ಎರಡು ರಿಟೇಲ್ ಅಂಗಡಿಗಳನ್ನು ನಿರ್ವಹಿಸುತ್ತಿರುವ ಉದ್ಯೋಗಿಗಳು ತಿಂಗಳಿಗೆ ಸರಿಸುಮಾರು ರೂ.1 ಲಕ್ಷ ವೇತನ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

170 ಉದ್ಯೋಗಿಗಳನ್ನು ನೇಮಕ ಮಾಡುವ ಮೊದಲು ಆಪಲ್ ಕಂಪನಿ ಸಂಪೂರ್ಣವಾಗಿ ಅವರ ಹಿನ್ನಲೆಯನ್ನು ತಿಳಿದಿದೆ ಎಂದು ವರದಿಗಳು ತಿಳಿಸಿವೆ, ಜೊತೆಗೆ ಇದರಲ್ಲಿ ಬಹು ಭಾಷೆಗಳಲ್ಲಿ ಪರಿಣಿತಿ ಹೊಂದಿದವರು ಇದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ

ಇದಲ್ಲದೆ, ಮಾಹಿತಿ ತಂತ್ರಜ್ಞಾನದ ಉಪ ಸಚಿವ ರಾಜೀವ್ ಚಂದ್ರಶೇಖರ್, ಆಪಲ್ ಮುಂದಿನ ಕೆಲವು ವರ್ಷಗಳಲ್ಲಿ ರಫ್ತು ಜೊತೆಗೆ ಭಾರತದಲ್ಲಿ ಎರಡು ಅಥವಾ ಮೂರು ಹೂಡಿಕೆಗಳನ್ನು ಮಾಡಬಹುದು ಎಂದು ತಿಳಿಸಿದ್ದಾರೆ. “ಈ ಆಪಲ್-ಇಂಡಿಯಾ ಪಾಲುದಾರಿಕೆಯು ಹೂಡಿಕೆಗಳು, ಬೆಳವಣಿಗೆ, ರಫ್ತು ಮತ್ತು ಉದ್ಯೋಗಗಳಿಗೆ ಸಾಕಷ್ಟು ಅವಕಾಶಗಳನ್ನೂ ಹೊಂದಿದೆ – ಮುಂಬರುವ ವರ್ಷಗಳಲ್ಲಿ ಇದು ದ್ವಿಗುಣ ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ ಎಂಬ ವಿಶ್ವಾಸ ನಂಗಿದೆ” ಎಂದು ಸಚಿವ ರಾಜೀವ್ ಚಂದ್ರಶೇಖರ್ ರಾಯಿಟರ್ಸ್‌ಗೆ ತಿಳಿಸಿದರು.

ಆಪಲ್ ಚೀನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವನ್ನು ದೊಡ್ಡ ಉತ್ಪಾದನಾ ನೆಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ತೈವಾನೀಸ್ ಗುತ್ತಿಗೆ ಎಲೆಕ್ಟ್ರಾನಿಕ್ಸ್ ತಯಾರಕರಾದ ಫಾಕ್ಸ್‌ಕಾನ್ ಮತ್ತು ವಿಸ್ಟ್ರಾನ್ ಕಾರ್ಪ್‌ನಿಂದ ಐಫೋನ್‌ಗಳು ಸೇರಿದಂತೆ ಅದರ ಉತ್ಪನ್ನಗಳನ್ನು ಭಾರತದಲ್ಲಿ ಜೋಡಿಸಲಾಗುತ್ತಿದೆ.

ಇದನ್ನೂ ಓದಿ: ಕೆವಿಪಿ, ಪಿಪಿಎಫ್, ಎಸ್​ಎಸ್​ವೈ ಇತ್ಯಾದಿ ಇತ್ಯಾದಿ… ಯಾವ ಸರ್ಕಾರಿ ಸ್ಕೀಮ್ ನಿಮ್ಮ ಹೂಡಿಕೆಗೆ ಬೆಸ್ಟ್? ಇಲ್ಲಿದೆ ಒಂದು ಹೋಲಿಕೆ

ಆಪಲ್‌ನ ಸಿಇಒ ಟಿಮ್ ಕುಕ್ ಅವರ ಇತ್ತೀಚಿನ ಭಾರತ ಭೇಟಿಯು ವ್ಯಾಪಕವಾದ ಮಾಧ್ಯಮ ಪ್ರಸಾರವನ್ನು ಸೆಳೆಯಿತು ಮತ್ತು ಅವರನ್ನು ಸೆಲೆಬ್ರಿಟಿಗಳಂತೆ ಫೇಮಸ್ ಆಗಿದ್ದಾರೆ, ಕೆಲವರು ಸಾಂಪ್ರದಾಯಿಕ ಗೌರವಾರ್ಥವಾಗಿ ಕುಕ್ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದರೆ, ಇತರರು ಅವರ ಆಟೋಗ್ರಾಫ್ ಕೇಳಿದರು. ಮುಂಬೈನಲ್ಲಿ ಆಪಲ್ ತನ್ನ ಮೊದಲ ಔಟ್ಲೆಟ್ ಅನ್ನು ತೆರೆದ ಎರಡು ದಿನಗಳ ನಂತರ, ಟಿಮ್ ಕುಕ್ ಕಳೆದ ವಾರ ನವದೆಹಲಿಯಲ್ಲಿ ಆಪಲ್ ಸ್ಟೋರ್ ಅನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕುಕ್, “ಆಪಲ್ ದೇಶದಾದ್ಯಂತ ಬೆಳೆಯಲು ಮತ್ತು ಹೂಡಿಕೆ ಮಾಡಲು ಬದ್ಧವಾಗಿದೆ” ಎಂದು ಹೇಳಿದರು.

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್