AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITC: ಇನ್ಫೋಸಿಸ್ ಹಿಂದಿಕ್ಕಿದ ಐಟಿಸಿ; ಷೇರು ಸಂಪತ್ತಿನಲ್ಲಿ 6ನೇ ಸ್ಥಾನ; ಎಷ್ಟಿದೆ ಅದರ ಷೇರುಮೊತ್ತ? ಅಗ್ರಸ್ಥಾನದಲ್ಲಿರುವುದು ಯಾರು?

Companies with most Market Cap: ಷೇರುಮಾರುಕಟ್ಟೆಯಲ್ಲಿ ಅತಿಹೆಚ್ಚು ಷೇರುಮೊತ್ತ ಇರುವ ಕಂಪನಿಗಳ ಪಟ್ಟಿಯಲ್ಲಿ ಐಟಿಸಿ 6ನೇ ಸ್ಥಾನಕ್ಕೇರಿದೆ. ಭಾರತದ ಐಟಿ ದೈತ್ಯ ಇನ್ಫೋಸಿಸ್ ಅನ್ನು ಹಿಂದಿಕ್ಕಿ ಅದು ಮೇಲೇರಿದೆ. ಒಂದು ಸಮಯದಲ್ಲಿ 4ನೇ ಅತಿ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿದ್ದ ಇನ್ಫೋಸಿಸ್ ಇದೀಗ 9ನೇ ಸ್ಥಾನಕ್ಕೆ ಕುಸಿದಿದೆ.

ITC: ಇನ್ಫೋಸಿಸ್ ಹಿಂದಿಕ್ಕಿದ ಐಟಿಸಿ; ಷೇರು ಸಂಪತ್ತಿನಲ್ಲಿ 6ನೇ ಸ್ಥಾನ; ಎಷ್ಟಿದೆ ಅದರ ಷೇರುಮೊತ್ತ? ಅಗ್ರಸ್ಥಾನದಲ್ಲಿರುವುದು ಯಾರು?
ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2023 | 5:15 PM

ನವದೆಹಲಿ: ಐಟಿಸಿ ಕಂಪನಿಯ ಷೇರಿನ ಓಟ ಅಡೆತಡೆ ಇಲ್ಲದೇ ಸಾಗಿದೆ. ಸಿಗರೇಟು ಉತ್ಪನ್ನಗಳಿಗಷ್ಟೇ ಸೀಮಿತವಾಗದೇ ಜನಬಳಕೆಯ ಎಫ್​ಎಂಸಿಜಿ ವಲಯದಲ್ಲಿ ಬೇರೂರಿರುವ ಐಟಿಸಿ ಸಂಸ್ಥೆ (ITC) ಒಳ್ಳೆಯ ಲಾಭದಲ್ಲಿದೆ. ಹಾಗೆಯೇ ಷೇರುಪೇಟೆಯಲ್ಲಿ ಉತ್ತಮ ಬೆಲೆಹೆಚ್ಚಳ ಕಾಣುತ್ತಿದೆ. ಇದರ ಪರಿಣಾಮವಾಗಿ ಷೇರುಮಾರುಕಟ್ಟೆಯಲ್ಲಿ ಅತಿಹೆಚ್ಚು ಷೇರುಮೊತ್ತ (Market Capitalization) ಇರುವ ಕಂಪನಿಗಳ ಪಟ್ಟಿಯಲ್ಲಿ ಐಟಿಸಿ 6ನೇ ಸ್ಥಾನಕ್ಕೇರಿದೆ. ಭಾರತದ ಐಟಿ ದೈತ್ಯ ಇನ್ಫೋಸಿಸ್ ಅನ್ನು ಹಿಂದಿಕ್ಕಿ ಅದು ಮೇಲೇರಿದೆ. ಒಂದು ಸಮಯದಲ್ಲಿ 4ನೇ ಅತಿ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿದ್ದ ಇನ್ಫೋಸಿಸ್ (Infosys) ಇದೀಗ 9ನೇ ಸ್ಥಾನಕ್ಕೆ ಕುಸಿದಿದೆ. ಇನ್ಫೋಸಿಸ್​ನ ಒಟ್ಟು ಷೇರುಮೊತ್ತ 5 ಲಕ್ಷ ಕೋಟಿ ರುಪಾಯಿ ಇದೆ. ಐಟಿಸಿ ಸಂಸ್ಥೆ 5.16 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್​ವೊಂದಿಗೆ 6ನೇ ಸ್ಥಾನದಲ್ಲಿದೆ.

ಐಂಡಿಯನ್ ಟೊಬ್ಯಾಕೋ ಕಂಪನಿ ಎಂದು ಹಿಂದೆ ಹೆಸರು ಹೊಂದಿದ್ದ ಐಟಿಸಿ ಷೇರು ಬೆಲೆ ಇಂದು ಏಪ್ರಿಲ್ 26 ಸಂಜೆ 411.75 ರೂ ಇತ್ತು. ಇವತ್ತಿನ ಟ್ರೇಡಿಂಗ್​ನ ಒಂದು ಹಂತದಲ್ಲಿ ಐಟಿಸಿ ಷೇರು ಬೆಲೆ 413.45 ರುಪಾಯಿ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಇದು ಐಟಿಸಿಯ ಸಾರ್ವಕಾಲಿಕ ದಾಖಲೆ ಬೆಲೆ. ಕೋವಿಡ್ ಬಳಿಕ ಐಟಿಸಿ ಒಂದು ರೀತಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಬೆಳೆದುಹೋಗಿದೆ. 2020 ಮೇ ತಿಂಗಳಲ್ಲಿ ಐಟಿಸಿ ಷೇರು ಬೆಲೆ ಕೇವಲ 155 ರೂ ಇತ್ತು. ಹತ್ತಿರಹತ್ತಿರ 3 ವರ್ಷದಲ್ಲಿ ಎರಡೂವರೆ ಪಟ್ಟು ಹೆಚ್ಚು ಬೆಳೆದಿದೆ. ಈ ವರ್ಷವೇ ಐಟಿಸಿ ಷೇರು ಬೆಲೆ ಶೇ. 25ರಷ್ಟು ಹೆಚ್ಚಾಗಿದೆ. ಕಳೆದ 12 ತಿಂಗಳನ್ನು ಪರಿಗಣಿಸಿದರೆ ಬೆಲೆ ಶೇ. 60ರಷ್ಟು ಉಬ್ಬಿದೆ.

ಇದನ್ನೂ ಓದಿBig Rise: ಬೆಂಗಳೂರು, ಹೈದರಾಬಾದ್​ನ ಈ ಪುಟ್ಟ ಮೆಷೀನ್ ಟೂಲ್ ಕಂಪನಿಗೆ ಹಣ ಹಾಕಿದವರೇ ಸಿರಿವಂತರು; 3 ವರ್ಷದಲ್ಲಿ 7 ಪಟ್ಟು ಬೆಳೆದಿದೆ ಷೇರು

ಐಟಿಸಿಯ ಹಣಕಾಸು ವರದಿ ಇನ್ನೂ ಪ್ರಕಟವಾಗಿಲ್ಲ. ಆದರೆ, ನಿರೀಕ್ಷೆಗಳು ಬಹಳ ಇವೆ. ಕಳೆದ ಹಣಕಾಸು ವರ್ಷದಲ್ಲಿ ಐಟಿಸಿ ವ್ಯವಹಾರ 17 ಸಾವಿರ ಕೋಟಿ ರೂ ಇದ್ದಿರಬಹುದು. ನಿವ್ವಳ ಲಾಭ 5 ಸಾವಿರ ಕೋಟಿ ರೂ ತೋರಿಸಬಹುದು ಎಂದು ಪ್ರಭುದಾಸ್ ಲೀಲಾಧರ್ ಎಂಬ ಬ್ರೋಕರೇಜ್ ಸಂಸ್ಥೆ ಅಂದಾಜು ಮಾಡಿದೆ. ಎಚ್​ಡಿಎಫ್​ಸಿ ಸೆಕ್ಯೂರಿಟೀಸ್, ಮೋತಿಲಾಲ್ ಓಸ್ವಾಲ್ ಮೊದಲಾದ ಬ್ರೋಕರೇಜ್ ಕಂಪನಿಗಳೂ ಕೂಡ ಐಟಿಸಿ ಲಾಭದ ಬಗ್ಗೆ ಮಾಡಿರುವ ಅಂದಾಜು ಸಕಾರಾತ್ಮಕವಾಗಿ ಇದೆ.

ಇದನ್ನೂ ಓದಿFirst Republic Bank: ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್​ಗೆ ಆಘಾತಗಳ ಮೇಲೆ ಆಘಾತ; ಠೇವಣಿ ಹೋಯ್ತು, ಷೇರೂ ಬಿತ್ತು; ಈ ಪರಿಸ್ಥಿತಿಗೆ ಏನು ಕಾರಣ?

ಭಾರತದ ಅತಿದೊಡ್ಡ ಷೇರುಸಂಪತ್ತಿರುವ ಕಂಪನಿಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 16 ಲಕ್ಷ ಕೋಟಿ ರೂ
  2. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್: 11.7 ಲಕ್ಷ ಕೋಟಿ ರೂ
  3. ಎಚ್​ಡಿಎಫ್​ಸಿ ಬ್ಯಾಂಕ್: 10.6 ಲಕ್ಷ ಕೋಟಿ ರೂ
  4. ಐಸಿಐಸಿಐ ಬ್ಯಾಂಕ್: 6.36 ಲಕ್ಷ ಕೋಟಿ ರೂ
  5. ಹಿಂದೂಸ್ತಾನ್ ಯುನಿಲಿವರ್ ಲಿ: 5.95 ಲಕ್ಷ ಕೋಟಿ ರೂ
  6. ಐಟಿಸಿ: 5.16 ಲಕ್ಷ ಕೋಟಿ ರೂ
  7. ಎಚ್​ಡಿಎಫ್​ಸಿ: 5.15 ಲಕ್ಷ ಕೋಟಿ ರೂ
  8. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 5.09 ಲಕ್ಷ ಕೋಟಿ ರೂ
  9. ಇನ್ಫೋಸಿಸ್: 5 ಲಕ್ಷ ಕೋಟಿ ರೂ
  10. ಭಾರ್ತಿ ಏರ್​ಟೆಲ್: 4.65 ಲಕ್ಷ ಕೋಟಿ ರೂ
  11. ಕೋಟಕ್ ಮಹೀಂದ್ರ ಬ್ಯಾಂಕ್: 3.77 ಲಕ್ಷ ಕೋಟಿ ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ