AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

First Republic Bank: ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್​ಗೆ ಆಘಾತಗಳ ಮೇಲೆ ಆಘಾತ; ಠೇವಣಿ ಹೋಯ್ತು, ಷೇರೂ ಬಿತ್ತು; ಈ ಪರಿಸ್ಥಿತಿಗೆ ಏನು ಕಾರಣ?

America Bank Crisis Continues: ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್​ನಲ್ಲಿ ಜನರು 100 ಬಿಲಿಯನ್ ಡಾಲರ್ ಮೊತ್ತದ ಠೇವಣಿಗಳನ್ನು ಹಿಂಪಡೆದಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಲೇ ಷೇರುಪೇಟೆಯಲ್ಲೂ ಬ್ಯಾಂಕ್ ಷೇರು ಕಡಿಮೆ ಬೆಲೆಗೆ ಬಿಕರಿಯಾಗತೊಡಗಿದೆ.

First Republic Bank: ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್​ಗೆ ಆಘಾತಗಳ ಮೇಲೆ ಆಘಾತ; ಠೇವಣಿ ಹೋಯ್ತು, ಷೇರೂ ಬಿತ್ತು; ಈ ಪರಿಸ್ಥಿತಿಗೆ ಏನು ಕಾರಣ?
ಫಸ್ಟ್ ರಿಪಬ್ಲಿಕ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2023 | 12:58 PM

Share

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಕುಸಿದ ಬಳಿಕ ನಿರೀಕ್ಷೆಯಂತೆ ಅಲ್ಲಿ ಬ್ಯಾಂಕ್ ಬಿಕ್ಕಟ್ಟು ಸೃಷ್ಟಿಯಾಗಿದೆ. ಜನರು ಬ್ಯಾಂಕುಗಳಿಂದ ತಮ್ಮ ಠೇವಣಿ ಹಣವನ್ನು ಹಿಂಪಡೆಯಲು ಮುಗಿಬೀಳುತ್ತಿದ್ದಾರೆ. ಬ್ಯಾಂಕುಗಳು ದಿವಾಳಿಯಾಗಬಹುದು ಎಂಬ ಭಯದ ಜೊತೆಗೆ ಬೇರೆ ಬೇರೆ ಕಾರಣಗಳಿಗೆ ಜನರು ಬ್ಯಾಂಕುಗಳಿಂದ ತಮ್ಮ ಹಣ ವಿತ್​ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಅಮೆರಿಕದ ಬಹುತೇಕ ಎಲ್ಲಾ ಬ್ಯಾಂಕುಗಳೂ ಜರ್ಝರಿತವಾಗಿವೆ. ಇಲ್ಲಿಯ ಪ್ರಮುಖ ಬ್ಯಾಂಕುಗಳಲ್ಲೊಂದಾದ ಫಸ್ಟ್ ರಿಪಬ್ಲಿಕ್ ಬ್ಯಾಂಕಂತೂ (First Republic Bank) ಅಕ್ಷರಶಃ ನಲುಗಿ ಹೋಗಿದೆ. ಫಸ್ಟ್ ರಿಪಬ್ಲಿಕ್ ಬ್ಯಾಂಕ್​ನ ಷೇರುಗಳು ಶೇ. 40ರಷ್ಟು ಕುಸಿತ ಕಂಡಿವೆ. ಈ ಕುಸಿತಕ್ಕೆ ಕಾರಣವಾಗಿದ್ದು ಈ ಬ್ಯಾಂಕ್​ನ ಠೇವಣಿ ನಷ್ಟ. ಈ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್​ನಿಂದ ಬಹಳಷ್ಟು ಜನರು ತಮ್ಮ ಠೇವಣಿಗಳನ್ನು ಹೊರತೆಗೆದಿದ್ದಾರೆ. ಬ್ಯಾಂಕ್ ನೀಡಿದ ಮಾಹಿತಿ ಪ್ರಕಾರ ಈ ಮೂರು ತಿಂಗಳಲ್ಲಿ 100 ಬಿಲಿಯನ್ ಡಾಲರ್​ಗೂ (ಸುಮಾರು 8 ಲಕ್ಷ ಕೋಟಿ ರೂ) ಹೆಚ್ಚು ಮೊತ್ತದ ಠೇವಣಿಗಳು ಹೊರಹೋಗಿವೆಯಂತೆ. ಇದರಿಂದ ಬ್ಯಾಂಕಿಗೆ ನಗದು ಹಣದ ಬಿಕ್ಕಟ್ಟು ಉದ್ಭವಿಸಿದೆ.

ಫಸ್ಟ್ ರೀಪಬ್ಲಿಕ್ ಬ್ಯಾಂಕ್​ನಿಂದ ಠೇವಣಿ ನಷ್ಟವಾದ ವರದಿ ಬಂದ ಬೆನ್ನಲ್ಲೇ ಷೇರುಪೇಟೆಯಲ್ಲಿ ಈ ಬ್ಯಾಂಕ್ ಮೇಲೆ ಹಣ ಹಾಕಿದ್ದ ಹೂಡಿಕೆದಾರರೂ ಆತಂಕಗೊಂಡಿದ್ದಾರೆ. ಇದರ ಪರಿಣಾಮವಾಗಿ ಷೇರು ಮೌಲ್ಯ ಶೇ. 40ರಷ್ಟು ಕಡಿಮೆ ಆಗಿದೆ. ಫಸ್ಟ್ ರಿಪಬ್ಲಿಕ್ ಬ್ಯಾಂಕ್ ದಿಢೀರ್ ಆಗಿ ಬಿಕ್ಕಟ್ಟು ಕಂಡಿದ್ದಲ್ಲ. ಎಸ್​ವಿಬಿ ಸೇರಿದಂತೆ ಎರಡು ಅಮೆರಿಕನ್ ಬ್ಯಾಂಕುಗಳು ದಿವಾಳಿ ಆದ ಬಳಿಕ ಅಮೆರಿಕದ ಎಲ್ಲಾ ಬ್ಯಾಂಕುಗಳು ಬಿಕ್ಕಟ್ಟಿನ ಸ್ಥಿತಿಯಲ್ಲಿವೆ.

ಇದನ್ನೂ ಓದಿCrude Oil: ಜಾಗತಿಕವಾಗಿ ಅಗ್ಗವಾಗಿದೆ ಪೆಟ್ರೋಲಿಯಂ ಬೆಲೆ; ಈಗೆಷ್ಟಿವೆ ಕಚ್ಛಾ ತೈಲ ಬೆಲೆಗಳು? ಭಾರತದಲ್ಲಿ ಇನ್ನಷ್ಟು ಇಳಿಯುತ್ತಾ ಪೆಟ್ರೋಲ್ ಬೆಲೆ?

ಬ್ಯಾಂಕು ದಿವಾಳಿಯಾಗಲು ಕಾರಣ?

ಜನರು ಇರಿಸುವ ಠೇವಣಿ ಹಣವೇ ಬ್ಯಾಂಕುಗಳಿಗೆ ಜೀವಾಳ. ಈ ಹಣವನ್ನು ಇತರೆಡೆ ಹೂಡಿಕೆ ಮಾಡಿ ಅದರಿಂದ ಬ್ಯಾಂಕುಗಳು ಲಾಭ ಮಾಡಿಕೊಳ್ಳುತ್ತವೆ. ಆದರೆ, ಜನರು ದಿಢೀರ್ ಆಗಿ ತಮ್ಮ ಠೇವಣಿ ಹಣ ವಾಪಸ್ ಪಡೆಯಲು ಹೋದರೆ ಬ್ಯಾಂಕುಗಳು ತತ್​ಕ್ಷಣಕ್ಕೆ ಎಲ್ಲಿಂದ ಹಣ ತರುತ್ತವೆ? ಆಗಲೇ ಬಿಕ್ಕಟ್ಟು ಉದ್ಭವಿಸುವುದು.

ಫಸ್ಟ್ ರಿಪಬ್ಲಿಕ್​ಗೆ ನೆರವಿನ ಹಸ್ತ

ಫಸ್ಟ್ ರಿಪಬ್ಲಿಕ್ ಬ್ಯಾಂಕ್​ನಲ್ಲೂ ಇಂಥದ್ದೇ ಸ್ಥಿತಿ ಕಳೆದ ಮೂರ್ನಾಲ್ಕು ತಿಂಗಳಿಂದ ಇದೆ. ಕಳೆದ ತಿಂಗಳು ಅಮೆರಿಕದ ಹಣಕಾಸು ಸಚಿವೆ ಜನೆಟ್ ಯಲೆನ್, ಅಲ್ಲಿಯ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಜೆರೋಮ್ ಪೋವೆಲ್ ಕಾರ್ಯಪ್ರವೃತ್ತರಾಗಿ ಫಸ್ಟ್ ರಿಪಬ್ಲಿಕ್ ಬ್ಯಾಂಕಿಗೆ 30 ಬಿಲಿಯನ್ ಡಾಲರ್ ನೆರವು ಒದಗಿಸುವ ಒಪ್ಪಂದ ಏರ್ಪಡಿಸಿದರು. ವಿಶ್ವದ ಪ್ರಮುಖ ಕ್ರೆಡಿಟ್ ಕಂಪನಿಗಳಾದ ಜೆಪಿ ಮಾರ್ಗನ್, ಗೋಲ್ಡ್​ಮನ್ ಸ್ಯಾಕ್ಸ್, ಮಾರ್ಗನ್ ಸ್ಟಾನ್ಲೀ, ವೆಲ್ಸ್ ಫಾರ್ಗೋ, ಸಿಟಿಗ್ರೂಪ್ ಮೊದಲಾದವುಗಳ ಮುಖ್ಯಸ್ಥರು ಈ ಒಪ್ಪಂದಕ್ಕೆ ಕೈಜೋಡಿಸಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್​ಗೆ ನೆರವಾಗಿದ್ದಾರೆ.

ಇದನ್ನೂ ಓದಿEPFO E-Passbook Website: ಇಪಿಎಫ್​ನ ಪಾಸ್​ಬುಕ್ ಸರ್ವಿಸ್​ಗೆ ಲಾಗಿನ್ ಅಗಲು ತೊಡಕು, ಸದಸ್ಯರ ಅಳಲು

ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಉದ್ಯೋಗಿಗಳಲ್ಲಿ ಶೇ. 25 ಲೇ ಆಫ್?

ಇದೇ ವೇಳೆ, ಫಸ್ಟ್ ರಿಪಬ್ಲಿಕ್ ಬ್ಯಾಂಕ್ ತನ್ನ ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ವಿವಿಧ ಹತಾಶೆಯ ಕ್ರಮಕ್ಕೆ ಮುಂದಾಗಿದೆ. ಎಲ್ಲಾ ರೀತಿಯ ಅನಗತ್ಯ ಮತ್ತು ಐಷಾರಾಮಿ ವೆಚ್ಚಗಳನ್ನು ನಿಲ್ಲಿಸುವುದಾಗಿ ಹೇಳಿದೆ. ಅದು ಸರಿ, ಆದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನ ಸಂಸ್ಥೆಯ ಸಿಬ್ಬಂದಿವರ್ಗದ ಪೈಕಿ ಶೇ. 25ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುವುದಾಗಿ ಹೇಳಿದೆ.

ಬ್ಯಾಂಕುಗಳಿಂದ ಜನರು ಯಾಕೆ ಠೇವಣಿ ಹಿಂಪಡೆಯುತ್ತಿದ್ದಾರೆ?

  • ಅಮೆರಿಕನ್ ಬ್ಯಾಂಕುಗಳ ಮೇಲೆ ಜನರ ವಿಶ್ವಾಸ ಕಡಿಮೆ ಆದ ಕಾರಣ ತಮ್ಮ ಹಣವನ್ನು ಹಿಂಪಡೆಯಲು ಮುಂದಾಗಿದ್ದಾರೆ.
  • ಆಕರ್ಷಕ ರಿಟರ್ನ್ಸ್ ಕೊಡುವ ಭರವಸೆ ಇರುವ ಬೇರೆ ಬೇರೆ ಹೂಡಿಕೆ ಅಯ್ಕೆಗಳು ಜನರ ಮುಂದಿವೆ. ಈ ಕಾರಣಕ್ಕೆ ಹಲವಾರು ಜನರು ಬ್ಯಾಂಕುಗಳಿಂದ ಹಣವನ್ನು ಈ ಹೂಡಿಕೆಗಳಿಗೆ ವರ್ಗಾಯಿಸುತ್ತಿದ್ದಾರೆ.
  • ಬಿಕ್ಕಟ್ಟು ಕಡಿಮೆ ಆಗಿ ಸಹಜ ಸ್ಥಿತಿ ನೆಲಸುವವರೆಗೂ ಬ್ಯಾಂಕುಗಳಲ್ಲಿ ಇರುವ ತಮ್ಮ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲು ಜನರು ಮುಂದಾಗಿರಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ