EPFO E-Passbook Website: ಇಪಿಎಫ್​ನ ಪಾಸ್​ಬುಕ್ ಸರ್ವಿಸ್​ಗೆ ಲಾಗಿನ್ ಅಗಲು ತೊಡಕು, ಸದಸ್ಯರ ಅಳಲು

EPF Service Disrupted: ಇಪಿಎಫ್ ಪೋರ್ಟಲ್​ನಲ್ಲಿ ಮೆಂಬರ್ಸ್ ಪಾಸ್​ಬುಕ್ ಸರ್ವಿಸ್​ಗೆ ಲಾಗಿನ್ ಆಗಲು ಆಗುತ್ತಿಲ್ಲ. ಹಲವು ವಾರಗಳಿಂದಲೂ ಈ ಸಮಸ್ಯೆ ಇದೆ ಎಂದು ಹಲವು ಪಿಎಫ್ ಸಬ್​ಸ್ಕ್ರೈಬರ್​ಗಳು ಆನ್​ಲೈನ್​ನಲ್ಲಿ ಬೇಸರ ತೋಡಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಇಪಿಎಫ್​ಒ ಭರವಸೆ ನೀಡಿದೆಯಾದರೂ ಇಂದೂ ಕೂಡ ಅದು ಸರಿಹೋಗಿಲ್ಲ.

EPFO E-Passbook Website: ಇಪಿಎಫ್​ನ ಪಾಸ್​ಬುಕ್ ಸರ್ವಿಸ್​ಗೆ ಲಾಗಿನ್ ಅಗಲು ತೊಡಕು, ಸದಸ್ಯರ ಅಳಲು
ಇಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 26, 2023 | 10:46 AM

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ (EPF- Employee Provident Fund) ಅಥವಾ ಇಪಿಎಫ್​ನ ಇಪೋರ್ಟಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹಲವು ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಕೆಲ ದಿನಗಳಿಂದ ಇಪಿಎಫ್​ನ ಪೋರ್ಟಲ್ ನಿಧಾನಗೊಂಡಿದೆ. epfindia.gov.in/site_en/For_Employees.php ಗೆ ಲಾಗಿನ್ ಆಗಲು ಕಷ್ಟವಾಗುತ್ತಿದೆ. ಇಪಿಎಫ್​ಒ ವೆಬ್​ಸೈಟ್​ನಿಂದಾಗಲೀ ಉಮಂಗ್ ಆ್ಯಪ್​ನಿಂದಾಲೀ ಇಪಾಸ್​ಬುಕ್ ಡೌನ್​ಲೋಡ್ ಮಾಡಲು ಆಗುತ್ತಿಲ್ಲ ಎಂದು ಆನ್​ಲೈನ್​ನಲ್ಲಿ ದೂರುಗಳು ಹೆಚ್ಚಾಗಿವೆ. ನಾವು (ಟಿವಿ9 ಕನ್ನಡ) ಕೂಡ ಇಪಿಎಫ್​ಒನ ಇಪೋರ್ಟಲ್​ಗೆ ಹೋಗಿ ಅಲ್ಲಿ ಮೆಂಬರ್ಸ್ ಪಾಸ್​ಬುಕ್​ಗೆ ಲಾಗಿನ್ ಆಗಲು ಕ್ಲಿಕ್ ಮಾಡಿದಾಗ ‘404 Not Found’ ಎಂಬ Error ಕಾಣಿಸಿತು. Know Your Claim Status ಲಿಂಕ್ ಕ್ಲಿಕ್ ಮಾಡಿದರೂ ಇದೇ ದೋಷದ ಮೆಸೇಜ್ ಬರುತ್ತದೆ. ಇಪಿಎಫ್ ಪೋರ್ಟಲ್​ನ ಒನ್ ಎಂಪ್ಲಾಯೀ ಒನ್ ಇಪಿಎಫ್ ಅಕೌಂಟ್, ಪೆನ್ಷನರ್ಸ್ ಪೋರ್ಟಲ್ ಇತ್ಯಾದಿ ಸರ್ವಿಸ್​ಗಳ ಲಿಂಕ್​ಗಳು ಕಾರ್ಯನಿರ್ವಹಿಸುತ್ತಿದೆ.

ಬಹಳ ಮಂದಿ ಇಪಿಎಫ್ ಸಬ್​ಸ್ಕ್ರೈಬರ್​ಗಳು ಫೇಸ್​ಬುಕ್, ಟ್ವಿಟ್ಟರ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಇಂಥ ಒಂದು ಪೋಸ್ಟ್​ಗೆ ಇಪಿಎಫ್​ಒ ಸಂಸ್ಥೆ ಪ್ರತಿಕ್ರಿಯಿಸಿದೆ:

‘ಸದಸ್ಯರೆ, ನಿಮಗಾಗಿರುವ ಅನನುಕೂಲಕ್ಕೆ ವಿಷಾದಿಸುತ್ತೇವೆ. ಸಂಬಂಧಿತ ತಂಡವು ಈ ವಿಚಾರವನ್ನು ಗಮನಿಸುತ್ತಿದೆ. ದಯವಿಟ್ಟು ಕೆಲ ಕಾಲ ಕಾಯಿರಿ. ಆದಷ್ಟೂ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಇಪಿಎಫ್ ಭರವಸೆ ಕೂಡ ನೀಡಿತು.

ಇದನ್ನೂ ಓದಿBank Holidays May 2023: ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್ ಬಾಗಿಲು ಬಂದ್ ಅಗಿರುತ್ತೆ ತಿಳಿದಿರಿ

ಹಲವು ವಾರಗಳಿಂದಲೂ ಈ ಸಮಸ್ಯೆ ಇದೆ ಎಂದು ಮತ್ತೊಬ್ಬ ಸದಸ್ಯ ಟ್ವಿಟ್ಟರ್​ನಲ್ಲಿ ಪ್ರಸ್ತಾಪಿಸಿ ಇಪಿಎಫ್​ಒನ ಬೇಜಾಬ್ದಾರಿತನವನ್ನು ಪ್ರಶ್ನಿಸಿದ್ದಾರೆ.

ಏನಿದು ಇಪಿಎಫ್?

ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಎಂಬುದು ಕೇಂದ್ರ ಸರ್ಕಾರದಿಂದ 1952ರಲ್ಲಿ ಆರಂಭವಾದ ಯೋಜನೆ. ಕೈಗಾರಿಕಾ ಕಾರ್ಮಿಕರ ಕ್ಷೇಮಾಭಿವೃದ್ಧಿಗೆಂದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಬಳಿಕ ಎಲ್ಲಾ ಉದ್ಯೋಗಿಗಳಿಗೂ ಈ ಸ್ಕೀಮ್ ವಿಸ್ತರಣೆ ಆಗಿದೆ. 20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಯಾವುದೇ ಸಂಸ್ಥೆ ಇಪಿಎಫ್ ಯೋಜನೆ ಅಳವಡಿಸಬೇಕು ಎಂಬ ಕಠಿಣ ನಿಯಮ ಜಾರಿಯಲ್ಲಿದೆ. ಕಡಿಮೆ ಉದ್ಯೋಗಿಗಳಿರುವ ಕಂಪನಿಗಳೂ ಬಯಸಿದರೆ ಈ ಸ್ಕೀಮ್ ಜಾರಿಗೆ ತರಬಹುದು.

ಇದನ್ನೂ ಓದಿEPF Withdrawal: ವೈದ್ಯಕೀಯ ತುರ್ತುಸ್ಥಿತಿ ಬಂದಾಗ ಪಿಎಫ್ ಹಣ ಉಪಯೋಗಿಸಬಹುದು: ಹೇಗೆ ಅದರ ವಿಧಾನ, ತಿಳಿಯಿರಿ

ಈ ಯೋಜನೆಯಲ್ಲಿ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಭಾಗವನ್ನು ಕಡಿತ ಮಾಡಿ ಆತನ ಇಪಿಎಫ್ ಖಾತೆಗೆ ಪ್ರತೀ ತಿಂಗಳೂ ಜಮೆ ಮಾಡಲಾಗುತ್ತದೆ. ಈ ಹಣಕ್ಕೆ ಕಂಪನಿಯೂ ನಿರ್ದಿಷ್ಟ ಮೊತ್ತ ತುಂಬುತ್ತದೆ. ಈ ಇಪಿಎಫ್ ಖಾತೆಯ ಮೊತ್ತಕ್ಕೆ ಸರ್ಕಾರ ಪ್ರತೀ ವರ್ಷವೂ ನಿರ್ದಿಷ್ಟ ಬಡ್ಡಿ ತುಂಬುತ್ತದೆ. ಈಗಿರುವ ಸಾಮಾನ್ಯ ನಿಯಮದ ಪ್ರಕಾರ ಉದ್ಯೋಗಿಯ ಬೇಸಿಕ್ ಸ್ಯಾಲರಿಯ ಶೇ. 12ರಷ್ಟು ಭಾಗವನ್ನು ಇಪಿಎಫ್ ಖಾತೆ ಹಾಕಲಾಗುತ್ತದೆ. ಸರ್ಕಾರಿ ಉದ್ಯೋಗಿಯಾದರೆ ಮೂಲ ವೇತನದ ಜೊತೆಗೆ ಭತ್ಯೆಯೂ ಸೇರಿ ಒಟ್ಟೂ ಮೊತ್ತದ ಶೇ. 12 ಭಾಗವನ್ನು ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಈ ಮಧ್ಯೆ ಇತ್ತೀಚಿನ ಕೆಲ ವರ್ಷಗಳ ಹಿಂದೆ ಸರ್ಕಾರ ಎಂಪ್ಲಾಯೀ ಪೆನ್ಷನ್ ಸ್ಕೀಮ್ ಮಾಡಿದೆ. ಇದಕ್ಕೆ ಉದ್ಯೋಗಿ ಕೆಲಸ ಮಾಡುವ ಸಂಸ್ಥೆ ಈ ಇಪಿಎಸ್ ಖಾತೆಗೆ ಹಣ ತುಂಬಿಸಬೇಕು. ಉದ್ಯೋಗಿಯ ಮೂಲವೇತನದ ಶೇ. 12 ಭಾಗದ ಮೊತ್ತಕ್ಕೆ ಸಮನಾದ ಹಣವನ್ನು ಸಂಸ್ಥೆಯು ಇಪಿಎಫ್ ಮತ್ತು ಇಪಿಎಸ್ ಎರಡೂ ಖಾತೆಗೆ ಹಂಚಬೇಕು.

ಇಪಿಎಸ್ ಖಾತೆಯಲ್ಲಿರುವ ನಿಧಿಯು ಕಟ್ಟುನಿಟ್ಟಾಗಿ ಉದ್ಯೋಗಿಯ ಪಿಂಚಣಿಗೆಂದೇ ಇದೆ. ಇದನ್ನು ನಿವೃತ್ತಿಗೆ ಮುಂಚೆ ಯಾವುದೇ ಕಾರಣಕ್ಕೂ ಹಿಂಪಡೆಯಲು ಅಗುವುದಿಲ್ಲ. ಇಪಿಎಫ್​ನಲ್ಲಿರುವ ನಿಧಿಯ ಮೂಲ ಉದ್ದೇಶವೂ ನಿವೃತ್ತಿ ನಂತರದ ಪಿಂಚಣಿಗೆಂದೇ ಇರುವುದು. ಆದರೆ, ನಿವೃತ್ತಿಗೆ ಮುಂಚೆ ಕೆಲವಾರು ತುರ್ತು ಕಾರಣ ಮತ್ತು ಸಂದರ್ಭಗಳಿಗೆ ಪಿಎಫ್ ಹಣ ಹಿಂಪಡೆಯುವ ಅವಕಾಶ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:46 am, Wed, 26 April 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್