Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF Withdrawal: ವೈದ್ಯಕೀಯ ತುರ್ತುಸ್ಥಿತಿ ಬಂದಾಗ ಪಿಎಫ್ ಹಣ ಉಪಯೋಗಿಸಬಹುದು: ಹೇಗೆ ಅದರ ವಿಧಾನ, ತಿಳಿಯಿರಿ

How To Withdraw EPF Money For Medical Reason: ನಿವೃತ್ತಿಗೆ ಮುನ್ನ ಉದ್ಯೋಗಿ ವಿವಿಧ ಕಾರಣಗಳಿಂದ ತಮ್ಮ ಇಪಿಎಫ್ ಖಾತೆಯಿಂದ ಅಡ್ವಾನ್ಸ್ ಹಣ ಪಡೆಯಬಹುದು. ಅನಾರೋಗ್ಯಗೊಂಡು ಆಸ್ಪತ್ರೆಗೆ ದಾಖಲಾದರೆ 1 ಲಕ್ಷ ರೂವರೆಗೂ ಪಿಎಫ್ ಹಣ ವಿತ್​ಡ್ರಾ ಮಾಡಬಹುದು.

EPF Withdrawal: ವೈದ್ಯಕೀಯ ತುರ್ತುಸ್ಥಿತಿ ಬಂದಾಗ ಪಿಎಫ್ ಹಣ ಉಪಯೋಗಿಸಬಹುದು: ಹೇಗೆ ಅದರ ವಿಧಾನ, ತಿಳಿಯಿರಿ
ಇಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 25, 2023 | 3:31 PM

ಒಬ್ಬ ಉದ್ಯೋಗಿ ನಿವೃತ್ತಿಗೆ ಮುನ್ನ ಇಪಿಎಫ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯುವ (EPF Withdrawal) ಅವಕಾಶ ಇದೆಯಾದರೂ ಅದರ ಷರತ್ತು, ನಿಯಮಗಳು ಬಹಳ ಇವೆ. ಅಷ್ಟು ಸುಲಭಕ್ಕೆ ಉದ್ಯೋಗಿ ಭವಿಷ್ಯ ನಿಧಿ ಖಾತೆಯಿಂದ ಹಣ ಹಿಂಪಡೆಯಲು ಆಗುವುದಿಲ್ಲ. ಇಪಿಎಫ್ ಎಂಬುದು ಉದ್ಯೋಗಿಯ ನಿವೃತ್ತಿ ನಂತರದ ಜೀವನ ಸುಲಭವಾಗಿಸಲು ಮಾಡಿರುವ ಉಳಿತಾಯ ಯೋಜನೆ. ಇದರಲ್ಲಿ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಮೊತ್ತ, ಅವರು ಕೆಲಸ ಮಾಡುವ ಸಂಸ್ಥೆಯಿಂದ ನಿರ್ದಿಷ್ಟ ಮೊತ್ತದ ಕೊಡುಗೆ, ಸರ್ಕಾರದಿಂದ ಬಡ್ಡಿ ಇತ್ಯಾದಿ ಹೆಚ್ಚುವರಿ ಹಣ ಪಿಎಫ್ ಖಾತೆಗೆ ಜಮೆ ಆಗುತ್ತಾ ಹೋಗುತ್ತದೆ. ಆದರೆ, ಉದ್ಯೋಗಿ ನಿವೃತ್ತಿಗೆ ಮುನ್ನ ವೆಚ್ಚ ಅನಿವಾರ್ಯ ಎನಿಸುವ ಕೆಲ ತುರ್ತು ಸಂದರ್ಭಗಳು ಬರಬಹುದು. ಅಂತಹ ಸಂದರ್ಭಗಳಲ್ಲಿ ಪಿಎಫ್ ಖಾತೆಯಿಂದ ಉದ್ಯೋಗಿ ಹಣ ಹಿಂಪಡೆಯಲು ಅವಕಾಶ ಇದೆ.

ನಿವೃತ್ತಿಗೂ ಮುನ್ನ ಇಪಿಎಫ್ ಖಾತೆಯಿಂದ ಯಾವಾಗ ಹಣ ಹಿಂಪಡೆಯಬಹುದು?

ನಿವೃತ್ತಿಗೆ ಮುನ್ನ ಇಪಿಎಫ್ ಖಾತೆಯಿಂದ ಪೂರ್ತಿ ಹಣ ಹಿಂಪಡೆಯಲು ಆಗುವುದಿಲ್ಲ. ಮುಂಗಡವಾಗಿ ನಿರ್ದಿಷ್ಟ ಮೊತ್ತದ ಹಣ ಪಡೆಯಬಹುದು. ಕೆಲಸ ಕಳೆದುಕೊಂಡು 3 ತಿಂಗಳು ಉದ್ಯೋಗ ಸಿಗದ ಸ್ಥಿತಿಯಲ್ಲಿದ್ದರೆ ಪಿಎಫ್ ಅಡ್ವಾನ್ಸ್ ಪಡೆಯಬಹುದು. ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು, ಮದುವೆ ಖರ್ಚಿಗೆ, ಮಕ್ಕಳ ಶಾಲಾ ಶಿಕ್ಷಣಕ್ಕೆ, ಮನೆಯ ಸಾಲಕ್ಕೆ, ಮನೆ ಕಟ್ಟುವ ವೆಚ್ಚಕ್ಕೆ ಇಪಿಎಫ್ ಖಾತೆಯಿಂದ ಅಡ್ವಾನ್ಸ್ ಹಣ ಹಿಂಪಡೆಯಲು ಸಾಧ್ಯ.

ವೈದ್ಯಕೀಯ ಕಾರಣಕ್ಕೆ ಇಪಿಎಫ್​ನಿಂದ ಹಣ ಪಡೆಯುವುದು ಹೇಗೆ?

ಇಪಿಎಫ್​ಒ ನಿಯಮದ ಪ್ರಕಾರ ವೈದ್ಯಕೀಯ ಕಾರಣಕ್ಕೆ ಇಪಿಎಫ್​ಒ ಖಾತೆಯಿಂದ 1 ಲಕ್ಷ ರೂ ಹಣ ವಿತ್​ಡ್ರಾ ಮಾಡಬಹುದು. ಜೀವಕ್ಕೆ ಮಾರಕವಾಗುವ ರೋಗದಿಂದ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿ ಬಂದರೆ ಪಿಎಫ್ ಹಣ ಬಳಸಬಹುದು. ಈಗ ಈ ಕೆಲಸವನ್ನು ತುಸು ಸುಗಮಗೊಳಿಸಲಾಗಿದೆ.

ಇದನ್ನೂ ಓದಿAadhaar: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಫೋಟೋ ಬದಲಿಸಬೇಕಾ? ಇಲ್ಲಿದೆ ವಿಧಾನ

ಮೊದಲಾಗಿದ್ದರೆ ಇಪಿಎಫ್ ಸದಸ್ಯರು ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಎಸ್ಟಿಮೇಟ್ ಪಡೆದು ಅದನ್ನು ಇಪಿಎಫ್​ಒಗೆ ನೀಡಬೇಕು. ಆಗ ಮೆಡಿಕಲ್ ಅಡ್ವಾನ್ಸ್ ಪಡೆಯಲು ಸಾಧ್ಯವಾಗುತ್ತಿತ್ತು. ನಂತರ ಈ ನಿಯಮವನ್ನು ತುಸು ಸಡಿಲಿಸಲಾಯಿತು. ವ್ಯಕ್ತಿ ಆಸ್ಪತ್ರೆಗೆ ದಾಖಲಾಗುತ್ತಿದ್ದರೆ ಆಸ್ಪತ್ರೆಯಿಂದ ಎಸ್ಟಿಮೇಟ್ ಪಡೆದು ಸಲ್ಲಿಸುವ ಅಗತ್ಯ ಇಲ್ಲದೇ 1 ಲಕ್ಷ ರೂವರೆಗೂ ಅಡ್ವಾನ್ಸ್ ಹಣ ಪಡೆಯಬಹುದು.

ಪಿಎಫ್ ಸದಸ್ಯರ ಆರೋಗ್ಯ ಗಂಭೀರವಾಗಿದ್ದು ಅವರು ಆಸ್ಪತ್ರೆಗೆ ದಾಖಲಾಗುವುದು ಬಹಳ ಮುಖ್ಯ. ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುನ್ನ ಆಸ್ಪತ್ರೆಯಿಂದ ಎಸ್ಟಿಮೇಟ್ ಪಡೆದು ಪಿಎಫ್ ಹಣ ವಿತ್​ಡ್ರಾ ಮಾಡುವುದು ತರವಲ್ಲ. ಹೀಗಾಗಿ, ಆಸ್ಪತ್ರೆಯಿಂದ ಎಸ್ಟಿಮೇಟ್ ಪಡೆಯುವ ಅಗತ್ಯ ಇಲ್ಲದೇ ಪಿಎಫ್ ಅಡ್ವಾನ್ಸ್ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ಸರ್ಕಾರಿ ಅಥವಾ ಪಬ್ಲಿಕ್ ಸೆಕ್ಟರ್ ಆಸ್ಪತ್ರೆಗಳಲ್ಲಿ ದಾಖಲಾದರೆ ಸುಲಭವಾಗಿ ಪಿಎಫ್ ಅಡ್ವಾನ್ಸ್ ಪಡೆಯಬಹುದು. ಖಾಸಗಿ ಆಸ್ಪತ್ರೆಯಾದರೆ ಇಪಿಎಫ್​ಒದಿಂದ ಬ್ಯಾಕ್​ಗ್ರೌಂಡ್ ವೆರಿಫಿಕೇಶನ್ ನಡೆದು ಬಳಿಕ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿLIC Premium Income: ಪ್ರೀಮಿಯಮ್​ಗಳಿಂದ ಎಲ್​ಐಸಿ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ವಿಮಾ ಕಂಪನಿಗಳದ್ದೆಷ್ಟು?

ವೈದ್ಯಕೀಯ ಕಾರಣಕ್ಕೆ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಲು ಈ ಕ್ರಮಗಳನ್ನು ಅನುಸರಿಸಿ:

  • ಇಪಿಎಫ್​ಒನ unifiedportal-mem.epfindia.gov.in/memberinterfaceಸೇವಾ ಪೋರ್ಟಲ್​ಗೆ ಹೋಗಿ
  • ನಿಮ್ಮ ಯುಎಎನ್ ನಂಬರ್ ಮತ್ತು ಪಾಸ್​ವರ್ಡ್ ಹಾಕಿ ಲಾಗ್ ಇನ್ ಆಗಿ
  • ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ತುಂಬಿ, ವೆರಿಫೈ ಒತ್ತಿರಿ. ನಿಮ್ಮ ಖಾತೆಗೆ ಈ ಮಾಹಿತಿ ಲಿಂಕ್ ಆಗುತ್ತದೆ.
  • ಟರ್ಮ್ಸ್ ಅಂಡ್ ಕಂಡಿಷನ್ಸ್​ಗೆ ಸಮ್ಮತಿ ನೀಡಿ
  • ಬಳಿಕ ‘ಆನ್​ಲೈನ್ ಸರ್ವಿಸಸ್’ ಲಿಂಕ್ ಕ್ಲಿಕ್ ಮಾಡಿ.
  • ಅನಾರೋಗ್ಯಕ್ಕೆಂದು ಇರುವ ಕ್ಲೈಮ್ ಫಾರ್ಮ್-31 ಅನ್ನು ಆಯ್ದುಕೊಳ್ಳಿ
  • ನಂತರ, ‘ಪ್ರೊಸೀಡ್ ಫಾರ್ ಆನ್​ಲೈನ್ ಕ್ಲೈಮ್’ ಮೇಲೆ ಕ್ಲಿಕ್ ಮಾಡಿ.

ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದ ಬಳಿಕ ಉದ್ಯೋಗಿಯು ಆಸ್ಪತ್ರೆಯ ಮೆಡಿಕಲ್ ಬಿಲ್​ಗಳನ್ನು 45 ದಿನಗಳೊಳಗಾಗಿ ಇಪಿಎಫ್​ಒಗೆ ಸಲ್ಲಿಸಬೇಕು. ಆಗ ಪಿಎಫ್ ಹಣವನ್ನು ವಿತ್​ಡ್ರಾ ಮಾಡಲು ಸಾಧ್ಯವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ