Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಫೋಟೋ ಬದಲಿಸಬೇಕಾ? ಇಲ್ಲಿದೆ ವಿಧಾನ

How To Change Pic In Aadhaar Card?: ಆಧಾರ್ ಕಾರ್ಡ್​ನಲ್ಲಿ 12 ಅಂಕಿಗಳ ಗುರುತಿನ ಸಂಖ್ಯೆ ಜೊತೆಗೆ ವ್ಯಕ್ತಿಯ ಹೆಸರು, ವಿಳಾಸ, ವಯಸ್ಸು, ಬಯೋಮೆಟ್ರಿಕ್ ಇತ್ಯಾದಿ ಮಾಹಿತಿ ಇರುತ್ತದೆ. ಕೆಲವನ್ನು ನಾವು ಬದಲಿಸುವ ಅವಕಾಶ ಇರುತ್ತದೆ.

Aadhaar: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಫೋಟೋ ಬದಲಿಸಬೇಕಾ? ಇಲ್ಲಿದೆ ವಿಧಾನ
ಆಧಾರ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 25, 2023 | 1:44 PM

ಆಧಾರ್ ಕಾರ್ಡ್ ಭಾರತದಲ್ಲಿ ಈಗ ಬಹಳ ಅಗತ್ಯ ಇರುವ ದಾಖಲೆಯಾಗಿದೆ. ಇದು ವಿಶ್ವದ ಅತಿದೊಡ್ಡ ಬಯೊಮೆಟ್ರಿಕ್ ಆಧಾರಿತ ಐಡಿ (Biometric based ID System) ವ್ಯವಸ್ಥೆಯಾಗಿದೆ. ಭಾರತೀಯ ನಾಗರಿಕರಿಗೆ ನೀಡಲಾಗುವ ಆಧಾರ್ ಕಾರ್ಡ್​ನಲ್ಲಿ (Aadhaar Card) 12 ಅಂಕಿಗಳ ವಿಶೇಷ ಗುರುತಿನ ಸಂಖ್ಯೆ ಇರುತ್ತದೆ. ಈ ಆಧಾರ್​ನಲ್ಲಿ ವ್ಯಕ್ತಿಯ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಇತ್ಯಾದಿ ಬಯೋಮೆಟ್ರಿಕ್ ಮಾಹಿತಿ (Biometric Data) ಇರುತ್ತದೆ. ಹೀಗಾಗಿ, ಆಧಾರ್ ಅನ್ನು ಸುಲಭಕ್ಕೆ ನಕಲಿ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಈ ಆಧಾರ್ ಕಾರ್ಡ್ ಬಹಳ ಕಡೆ ಉಪಯೋಗಕ್ಕೆ ಬರುತ್ತದೆ. ವ್ಯಕ್ತಿಯ ಗುರುತು, ಅಡ್ರೆಸ್ ಪ್ರೂಫ್ ಇತ್ಯಾದಿಗೆ ಇದು ಅಧಿಕೃತ ದಾಖಲೆಯಾಗಿದೆ. ಸರ್ಕಾರದ ಸಬ್ಸಿಡಿ ಇತ್ಯಾದಿ ಯೋಜನೆಗಳಿಗೆ ಆಧಾರ್ ಅತ್ಯಗತ್ಯದ ದಾಖಲೆಯಾಗಿದೆ. ಬ್ಯಾಂಕ್ ಖಾತೆ ಮಾಡಿಸಲು, ಹೊಸ ಸಿಮ್ ಪಡೆಯಲು, ಹೀಗೆ ನಾನಾ ಕಾರ್ಯಗಳಿಗೆ ಕೆವೈಸಿಯಲ್ಲಿ ಆಧಾರ್ ಕಾರ್ಡ್ ಮಾಹಿತಿ ಪಡೆಯಲಾಗುತ್ತದೆ.

ಆಧಾರ್ ಕಾರ್ಡ್​ನಲ್ಲಿ ವ್ಯಕ್ತಿಯ ಫೋಟೋದಿಂದ ಹಿಡಿದು ಆತನ ಹೆಸರು, ಜನ್ಮದಿನಾಂಕ, ತಂದೆ ಹೆಸರು, ಮನೆ ವಿಳಾಸದ ಮಾಹಿತಿ ಒಳಗೊಳ್ಳಲಾಗಿರುತ್ತದೆ. ಆಧಾರ್ ಕಾರ್ಡ್ ಜೊತೆ ವ್ಯಕ್ತಿಯ ಮೊಬೈಲ್ ನಂಬರ್ ಅನ್ನೂ ಲಿಂಕ್ ಮಾಡುವ ಆಯ್ಕೆಯೂ ಇರುತ್ತದೆ.

ಇದನ್ನೂ ಓದಿSBI vs Post Office FD: ಪೋಸ್ಟ್ ಆಫೀಸ್​ಗಿಂತ ಉತ್ತಮವಾಗಿದೆಯಾ ಎಸ್​ಬಿಐ ಎಫ್​ಡಿ ಯೋಜನೆ? ಇಲ್ಲಿದೆ ಒಂದು ಹೋಲಿಕೆ

ಕೆಲವೊಮ್ಮೆ ನಾವು ವಾಸಸ್ಥಳ ಬದಲಿಸಿದಾಗ ಆಧಾರ್​ನಲ್ಲಿಯೂ ವಿಳಾಸ ಬದಲಾಯಿಸಬಯಸುತ್ತೇವೆ. ಹಲವು ವರ್ಷಗಳ ಹಿಂದೆ ತೆಗೆಸಿಕೊಳ್ಳಲಾದ ಫೋಟೋ ಈಗ ನೋಡಲು ಮುಜುಗರವಾಗಬಹುದಾದ್ದರಿಂದ ಫೋಟೋ ಬದಲಿಸಲು ಸಾಧ್ಯವಾ? ಆಧಾರ್​ನಲ್ಲಿರುವ ನಮ್ಮ ಕೆಲ ಮಾಹಿತಿಯನ್ನು ಬದಲಾಯಿಸಲು ಸಾಧ್ಯ.

ಆಧಾರ್ ಕಾರ್ಡ್​ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

ಯಾವುದಾದರೂ ಆಧಾರ್ ಎನ್​ರೋಲ್ಮೆಂಟ್ ಸೆಂಟರ್​ಗೆ ಹೋದರೆ ಅಲ್ಲಿ ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಲು ಸಾಧ್ಯ. ನಿಮ್ಮ ಮನೆ ಸಮೀಪ ಆಧಾರ್ ಸೆಂಟರ್ ಎಲ್ಲಿದೆ, ಅದರ ವಿಳಾಸ ಏನು ಎಂಬುದನ್ನು ಆನ್​ಲೈನ್​ನಲ್ಲಿ ಈ ವೆಬ್​ಸೈಟ್ ಮೂಲಕ ತಿಳಿದುಕೊಳ್ಳಬಹುದು.

  • ಆಧಾರ್ ಎನ್ರೋಲ್ಮೆಂಟ್ ಸೆಂಟರ್​ನಲ್ಲಿ ಈ ಕಾರ್ಯಕ್ಕೆ ಒಂದು ಅರ್ಜಿ ಸಿಗುತ್ತದೆ. ಅದನ್ನು ಭರ್ತಿ ಮಾಡಿ ಅಲ್ಲಿ ಸಲ್ಲಿಸಬೇಕು.
  • ಅಲ್ಲಿರುವ ಆಪರೇಟರ್ ನಿಮ್ಮ ಬಯೋಮೆಟ್ರಿಕ್ ಮಾಹಿತಿ ಪರಿಶೀಲಿಸುತ್ತಾರೆ.
  • ನಂತರ ನಿಮ್ಮ ಫೋಟೋವನ್ನು ಅಲ್ಲಿಯೇ ಪಡೆದು ಆಧಾರ್​ಗೆ ಸೇರಿಸಲಾಗುತ್ತದೆ.
  • ಇದಾದ ಬಳಿಕ ಯುಆರ್​ಎನ್ ಸಂಖ್ಯೆ ಹೊಂದಿರುವ ಅಕ್ನಾಲಜ್ಮೆಂಟ್ ಸ್ಲಿಪ್ ಕೊಡಲಾಗುತ್ತದೆ.

ಇದನ್ನೂ ಓದಿAadhaar Update: ಸರ್ಕಾರೇತರ ಸಂಘ ಸಂಸ್ಥೆಗಳಿಗೂ ಆಧಾರ್ ದೃಢೀಕರಣ ಅವಕಾಶ: ಸರ್ಕಾರ ಪ್ರಸ್ತಾವ

ಈಗ ನೀವು ಯುಐಡಿಎಐನ ವೆಬ್​ಸೈಟ್​ನಲ್ಲಿ ನಿಮ್ಮ ಆಧಾರ್ ಕಾರ್ಡ್​ನ ಡಿಜಿಟಲ್ ಪ್ರತಿಯನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. ಅದರಲ್ಲಿ ನಿಮ್ಮ ಅಪ್​ಡೇಟೆಡ್ ಫೋಟೋ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.

ಆಧಾರ್ ಕಾರ್ಡ್​ನಲ್ಲಿ ಮಾಹಿತಿ ಅಪ್​ಡೇಟ್ ಮಾಡುವ ಇತರ ವಿಧಾನಗಳು:

ಆಧಾರ್ ಕಾರ್ಡ್​ನಲ್ಲಿ ನೀವು ಫೋಟೋ ಅಪ್​ಡೇಟ್ ಮಾಡಲು ಆಧಾರ್ ಎನ್​ರೋಲ್ಮೆಂಟ್ ಸೆಂಟರ್​ಗೆ ಹೋಗಬೇಕಾಗುತ್ತದೆ. ಈ ಆಧಾರ್ ಕೇಂದ್ರದಲ್ಲಿ ಹೆಸರು, ವಿಳಾಸ ಇತ್ಯಾದಿಗಳ ಬದಲಾವಣೆಗಳನ್ನೂ ಮಾಡಿಸಬಹುದು.

ಹಾಗೆಯೆ, ಮೈ ಆಧಾರ್ ಅ್ಯಪ್ ಮೂಲಕ ಆನ್​ಲೈನ್​ನಲ್ಲೂ ಕೆಲ ಮಾಹಿತಿ ಅಪ್​ಡೇಟ್ ಮಾಡುವ ಅವಕಾಶ ಇರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Tue, 25 April 23

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ