Airtel 5G Data Plans: ಏರ್ಟೆಲ್ ಹೊಸ ಪ್ಲಾನ್ಗಳು; ಅನ್ಲಿಮಿಟೆಡ್ 5ಜಿ ಡಾಟಾ, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್ ಉಚಿತ
Unlimited 5G Data and Prime, Hotstar Subscriptions: ದೇಶಾದ್ಯಂತ 5ಜಿ ನೆಟ್ವರ್ಕ್ ಅಳವಡಿಸುತ್ತಿರುವ ಏರ್ಟೆಲ್ ತನ್ನ ಕೆಲ ಪ್ಲಾನ್ಗಳಲ್ಲಿ ಅನ್ಲಿಮಿಟೆಡ್ 5ಜಿ ಡಾಟಾ ಸೌಲಭ್ಯ ಒದಗಿಸುತ್ತಿದೆ. ಇದರ ಜೊತೆಗೆ ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್ ಇತ್ಯಾದಿ ಒಟಿಟಿ ಸಬ್ಸ್ಕ್ರಿಪ್ಷನ್ಗಳನ್ನೂ ನೀಡುತ್ತಿದೆ.
ನವದೆಹಲಿ: ಈಗಾಗಲೇ ದೇಶದ ಬಹುತೇಕ ಕಡೆ 5ಜಿ ನೆಟ್ವರ್ಕ್ ಅಳವಡಿಸಿರುವ ಏರ್ಟೆಲ್ (Airtel) ಇದೀಗ ತನ್ನ ಗ್ರಾಹಕರಿಗೆ 5ಜಿ ಡಾಟಾ ಸೌಲಭ್ಯದ ರುಚಿ ತೋರಿಸುವ ತವಕದಲ್ಲಿದೆ. ಸದ್ಯ ತನ್ನ 5ಜಿ ಸೇವೆಗಳನ್ನು ಏರ್ಟೆಲ್ ಉಚಿತವಾಗಿ ನೀಡುತ್ತಿದೆ. ಏರ್ಟೆಲ್ ಕೆಲ ನಿರ್ದಿಷ್ಟ ಪ್ರೀಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಪ್ಲಾನ್ಗಳಿಗೆ ಅಲ್ಲಿಮಿಟೆಡ್ 5ಜಿ ಡಾಟಾ ಸೌಲಭ್ಯ (Unlimited 5G Data) ನೀಡುತ್ತಿದೆ. 5ಜಿ ನೆಟ್ವರ್ಕ್ ಅಳವಡಿಕೆ ಆಗಿರುವ ನಗರಗಳಲ್ಲಿ ಏರ್ಟೆಲ್ ಗ್ರಾಹಕರು ಇಂಟರ್ನೆಟ್ ಖಾಲಿ ಆಗುವ ಚಿಂತೆ ಇಲ್ಲದೇ ಎಷ್ಟು ಬೇಕಾದರೂ 5ಜಿ ಇಂಟರ್ನೆಟ್ ಬಳಸಬಹುದು. 5ಜಿ ಒದಗಿಸುವ ಅಪಾರ ವೇಗದ ಇಂಟರ್ನೆಟ್ ಅನ್ನು ಬಳಸಿ ಕೃತಾರ್ಥರಾಗಬಹುದು. ನಿಮಗೆ ಅದೇ ಯೂಟ್ಯೂಬ್, ವಾಟ್ಸಾಪ್ ವಿಡಿಯೋ, ಫೇಸ್ಬುಕ್, ಇನ್ಸ್ಟಾಗ್ರಾಮ್ ವಿಡಿಯೋ ನೋಡಿ ಬೋರ್ ಆಗುತ್ತಿದ್ದರೆ ಏರ್ಟೆಲ್ನ ಕೆಲ ಪ್ಲಾನ್ಗಳಲ್ಲಿ ಅನ್ಲಿಮಿಟೆಡ್ 5ಜಿ ಜೊತೆಗೆ ಅಮೇಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ಸ್ಟಾರ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಕ್ಕುತ್ತದೆ. ಅಲ್ಲಿ ಸಿನಿಮಾ, ಸ್ಪೋರ್ಟ್ಸ್ ಇತ್ಯಾದಿಯನ್ನು 5ಜಿ ಸ್ಪೀಡ್ನಲ್ಲಿ ನೋಡಿ ಖುಷಿಪಡಬಹುದು.
ಏರ್ಟೆಲ್ 5ಜಿ ಡಾಟಾ ಜೊತೆಗೆ ವಿವಿಧ ಒಟಿಟಿ ಸಬ್ಸ್ಕ್ರಿಪ್ಷನ್ ಒದಗಿಸುವ ಪ್ರೀಪೇಯ್ಡ್ ಪ್ಲಾನ್ಗಳು ಇಲ್ಲಿವೆ:
ಏರ್ಟೆಲ್ 499 ರೂ ಪ್ಲಾನ್:
ಇದಕ್ಕೆ 28 ದಿನಗಳ ವ್ಯಾಲಿಟಿಡಿಟಿ ಇದೆ. ಇದರಲ್ಲಿ ಅನ್ಲಿಮಿಟೆಡ್ ಕಾಲ್ ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ಜೊತೆಗೆ ಅನ್ಲಿಮಿಟೆಡ್ 5ಜಿ ಡಾಟಾ ಕೂಡ ಸಿಗುತ್ತದೆ. ಡಿಸ್ನಿ ಹಾಟ್ಸ್ಟಾರ್, ಎಕ್ಸ್ಟ್ರೀಮ್, ವಿಂಕ್ ಇತ್ಯಾದಿ ಸಬ್ಸ್ಕ್ರಿಪ್ಷನ್ಗಳು 3 ತಿಂಗಳು ಉಚಿತವಾಗಿ ಸಿಗುತ್ತವೆ. 5ಜಿ ನೆಟ್ವರ್ಕ್ ಇಲ್ಲದವರಿಗೆ ಅನ್ಲಿಮಿಟೆಡ್ 4ಜಿ ಡಾಟಾ ಸಿಗುತ್ತದೆ. ಈ ಪ್ಲಾನ್ನಲ್ಲಿ ದಿನಕ್ಕೆ 3ಜಿಬಿಯವರೆಗೆ 4ಜಿ ಡಾಟಾ ಬಳಸಬಹುದು.
ಏರ್ಟೆಲ್ 839 ರೂ ಪ್ಲಾನ್:
ಇದು 84 ದಿನಗಳ ಅವಧಿಯ ಪ್ಲಾನ್. ಇದರಲ್ಲಿ ದಿನಕ್ಕೆ 100 ಎಸ್ಸೆಮ್ಮೆಸ್, ಅನ್ಲಿಮಿಟೆಡ್ ಕಾಲ್, ಅನ್ಲಿಮಿಟೆಡ್ 5ಜಿ ಇಂಟರ್ನೆಟ್ ಡಾಟಾ ಸಿಗುತ್ತವೆ. ಡಿಸ್ನಿ ಹಾಟ್ಸ್ಟಾರ್ನ 3 ತಿಂಗಳ ಸಬ್ಸ್ಕ್ರಿಪ್ಷನ್ ಸಿಗುತ್ತದೆ. ವಿಂಕ್ ಆ್ಯಪ್ನ ಸೌಲಭ್ಯ ಪಡೆಯಬಹುದು. ಎಕ್ಸ್ಟ್ರೀಮ್ ಆ್ಯಪ್ ಇತ್ಯಾದಿ ವಿವಿಧ ಸಬ್ಸ್ಕ್ರಿಪ್ಷನ್ಗಳು ಈ ಪ್ಲಾನ್ನಲ್ಲಿ ಸಿಗುತ್ತವೆ. ದಿನಕ್ಕೆ 2ಜಿಬಿಯವರೆಗೆ 4ಜಿ ಡಾಟಾ ಬಳಸಬಹುದು.
ಏರ್ಟೆಲ್ 3359 ರೂ ಪ್ಲಾನ್:
ಇದು ಒಂದು ವರ್ಷದ ವ್ಯಾಲಿಡಿಟಿ ಇರುವ ಪ್ಲಾನ್. ಇದರಲ್ಲೂ ಅನ್ಲಿಮಿಟೆಡ್ 5ಜಿ ಡಾಟಾ ಪಡೆಯಬಹುದು. ಡಿಸ್ನಿ ಹಾಟ್ಸ್ಟಾರ್, ವಿಂಕ್, ಅಪೋಲೋ ಇತ್ಯಾದಿ ಸೌಲಭ್ಯಗಳು ಉಚಿತವಾಗಿ ಸಿಗುತ್ತವೆ. 5ಜಿ ಸಪೋರ್ಟ್ ಇಲ್ಲದಿದ್ದರೆ ದಿನಕ್ಕೆ 2.5 ಜಿಬಿಯಷ್ಟು 4ಜಿ ಡಾಟಾ ಬಳಕೆ ಮಾಡಲು ಅವಕಾಶ ಕೊಡುತ್ತದೆ ಈ 3359 ರೂ ಪ್ಲಾನ್.
ಇದನ್ನೂ ಓದಿ: Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರ?: ಹೇಗೆ ಕಂಡುಹಿಡಿಯುವುದು?
ಏರ್ಟೆಲ್ 699 ರೂ ಪ್ಲಾನ್:
56 ದಿನಗಳ ವ್ಯಾಲಿಟಿಡಿ ಇರುವ ಏರ್ಟೆಲ್ನ ಪ್ರೀಪೇಯ್ಡ್ 699 ರೂ ಪ್ಲಾನ್ನಲ್ಲಿ ಎಷ್ಟು ಬೇಕಾದರೂ 5ಜಿ ಡಾಟಾ ಬಳಸಬಹುದು. 5ಜಿ ಇಲ್ಲದಿದ್ದರೆ ದಿನಕ್ಕೆ 3ಜಿಬಿಯಂತೆ 4ಜಿ ಡಾಟಾ ಬಳಸಬಹುದು. ಇದರ ಜೊತೆಗೆ ಅಮೇಜಾನ್ ಪ್ರೈಮ್, ಎಕ್ಸ್ಸ್ಟ್ರೀಮ್, ವಿಂಕ್ ಇತ್ಯಾದಿ ಸಬ್ಸ್ಕ್ರಿಪ್ಚನ್ಗಳನ್ನು ಉಚಿತವಾಗಿ ಪಡೆಯಬಹುದು.
ಏರ್ಟೆಲ್ 999 ರೂ ಪ್ಲಾನ್:
ಇದು 84 ದಿನಗಳ ವ್ಯಾಲಿಟಿಡಿ ಇರುವ ಏರ್ಟೆಲ್ ಪ್ರೀಪೇಯ್ಡ್ ಪ್ಲಾನ್. ಪ್ಲಾನ್ ಅವಧಿಯವರೆಗೂ ಅಂದರೆ 84 ದಿನಗಳ ಕಾಲ ಅಮೇಜಾನ್ ಪ್ರೈಮ್ ಸಬ್ಸ್ಕ್ರಿಪ್ಷನ್ ಪಡೆಯಬಹುದು. ಎಕ್ಸ್ಸ್ಟ್ರೀಮ್ ಆ್ಯಪ್, ವಿಂಕ್, ರಿವಾರ್ಡ್ಸ್ ಮಿನಿ ಇತ್ಯಾದಿ ಹಲವು ಆ್ಯಪ್ ಮತ್ತು ಒಟಿಟಿಗಳ ಮೆಂಬರ್ಶಿಪ್ ಪಡೆಯಬಹುದು. ಈ ಪ್ಲಾನ್ನಲ್ಲೂ ಎಷ್ಟು ಬೇಕಾದರೂ 5ಜಿ ಡಾಟಾ ಬಳಸಬಹುದು. 5ಜಿ ಇಲ್ಲದಿದ್ದರೆ ದಿನಕ್ಕೆ 2.5ಜಿಬಿಯಷ್ಟು 4ಜಿ ಡಾಟಾ ಬಳಸಬಹುದು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Tue, 25 April 23