Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರ?: ಹೇಗೆ ಕಂಡುಹಿಡಿಯುವುದು?
Aadhaar Card: ಇಸರ್ಕಾರದ ಯೋಜನೆಗಳು ಮಾತ್ರವಲ್ಲದೆ ಇತರೆ ಸಣ್ಣಪುಟ್ಟ ಅಗತ್ಯಗಳಿಗೂ ಆಧಾರ್ ಕಾರ್ಡ್ ಜೆರಾಕ್ಸ್ ಅಗತ್ಯವಿದೆ. ಹೀಗಿರುವಾಗ ಆಧಾರ್ ಕಾರ್ಡ್ ದುರ್ಬಳಕೆಯಾಗುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ.
ಆಧಾರ್ ಕಾರ್ಡ್ (Aadhaar Card) ಎಂಬುದು ಪ್ರತಿಯೊಬ್ಬ ಭಾರತೀಯನ ಅತಿ ಅಗತ್ಯವಾದ ಗುರುತು. 2009 ರಲ್ಲಿ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾದ ಆಧಾರ್ ಇಲ್ಲವಾದಲ್ಲಿ ಸರ್ಕಾರದ ಅತ್ಯಮೂಲ್ಯ ಸೌಲಭ್ಯದಿಂದ ವಂಚಿತರಾಗುತ್ತಾರೆ. ಬ್ಯಾಂಕ್ (Bank) ಖಾತೆಯಿಂದ ಹಿಡಿದು ಒಂದು ಸಿಮ್ ಕಾರ್ಡ್ (Sim Card) ಖರೀದಿಸಲು ಕೂಡ ಆಧಾರ್ ಕಡ್ಡಾಯವಾಗಿದೆ. ಇದೇ ಕಾರಣಕ್ಕೆ ನಮಗೆ ಗೊತ್ತಿಲ್ಲದೆ ಅನೇಕ ಕಡೆಗಳಲ್ಲಿ ಆಧಾರ್ ಸಂಖ್ಯೆಗಳನ್ನು ನಮೂದಿಸುತ್ತಲೇ ಇರುತ್ತೇವೆ. ಸರ್ಕಾರದ ಯೋಜನೆಗಳು ಮಾತ್ರವಲ್ಲದೆ ಇತರೆ ಸಣ್ಣಪುಟ್ಟ ಅಗತ್ಯಗಳಿಗೂ ಆಧಾರ್ ಕಾರ್ಡ್ ಜೆರಾಕ್ಸ್ ಅಗತ್ಯವಿದೆ. ಹೀಗಿರುವಾಗ ಆಧಾರ್ ಕಾರ್ಡ್ ದುರ್ಬಳಕೆಯಾಗುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಖರೀದಿಸುತ್ತಿರುವ ಪ್ರಕರಣ ಕೂಡ ಹೆಚ್ಚಾಗುತ್ತಿದೆ.
ಕೆಲ ಜನರು ಅಮಾಯಕರ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ತೆಗೆದುಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿಯೇ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಯಾವುದಾದರು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ಪರಿಶೀಲಿಸಲು ಸರ್ಕಾರವು ಆಯ್ಕೆಯನ್ನು ಒದಗಿಸಿದೆ. ಟಾಫ್-ಕಾಪ್ ಹೆಸರಿನ ವೆಬ್‌ಸೈಟ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಮೂಲಕ ಎಷ್ಟು ಸಿಮ್ ಆ್ಯಕ್ಟಿವ್ ಆಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ಈ ಸೌಲಭ್ಯವು ತೆಲಂಗಾಣ, ಆಂಧ್ರಪ್ರದೇಶ, ಕೇರಳ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಮೆಘಾಲಯ, ತ್ರಿಪುರ, ಅರುಣಾಚಲ ಪ್ರದೇಶ ಮತ್ತು ನಾಗಲೆಂಡ್ ನಾಗರಿಕರಿಗೆ ಮಾತ್ರ ಲಭ್ಯವಿದೆ.
Google Pixel 6 Pro 5G: ಕೇವಲ 46,910 ರೂ. ಗೆ ಸೇಲ್ ಆಗುತ್ತಿದೆ 1 ಲಕ್ಷದ ಈ ಸ್ಮಾರ್ಟ್ಫೋನ್: ಆಫರ್ ಮಿಸ್ ಮಾಡ್ಬೇಡಿ
ಪರಿಶೀಲಿಸುವುದು ಹೇಗೆ?:
- ಮೊದಲು https://tafcop.dgtelecom.gov.in/ ವೆಬ್‌ಸೈಟ್‌ಗೆ ಹೋಗಿ.
- ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೋದಿಸಲು ಕೇಳುತ್ತದೆ.
- ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ‘ಓಟಿಪಿ ರಿಕ್ವೆಸ್ಟ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಬಳಿಕ OTP ನಮೂದಿಸಿ ಮತ್ತು ‘ವ್ಯಾಲಿಡೇಟ್’ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಆಧಾರ್ನಿಂದ ತೆಗೆದುಕೊಂಡ ಮೊಬೈಲ್ ಸಂಖ್ಯೆಗಳು/ಸಿಮ್‌ಗಳ ಎಲ್ಲಾ ವಿವರಗಳನ್ನು ಕಾಣಬಹುದು.
- ಇಲ್ಲಿ ನಿಮಗೆ ಸಂಬಂಧಿಸಿದ ಯಾವುದೇ ಮೊಬೈಲ್ ಸಂಖ್ಯೆಗಳಿದ್ದಲ್ಲಿ ವರದಿ ಮಾಡಬಹುದು.
ಸಿಮ್ ಕಾರ್ಡ್ ಸಂಖ್ಯೆಗೆ ಸರ್ಕಾರದಿಂದ ಮಿತಿ:
ಇತ್ತೀಚೆಗಷ್ಟೆ ಕೇಂದ್ರ ಸರ್ಕಾರವು ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿರುವವರ ಫೋನ್ ಸಂಪರ್ಕವನ್ನು ಕಡಿತ ಮಾಡುವಂತೆ ಆದೇಶವನ್ನು ಹೊರಡಿಸಿದೆ. ಒಬ್ಬ ವೈಯಕ್ತಿಕ ಚಂದಾದಾರರು ಎಲ್ಲಾ TSPಗಳಲ್ಲಿ (ಟೆಲಿಕಾಂ ಸೇವಾ ಪೂರೈಕೆದಾರರು) ಒಂಬತ್ತಕ್ಕಿಂತ ಹೆಚ್ಚು ಮೊಬೈಲ್ ಸಂಪರ್ಕಗಳನ್ನು (ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂ LSAಗಳ ಸಂದರ್ಭದಲ್ಲಿ ಆರು) ಹೊಂದಿರುವುದು ಕಂಡುಬಂದರೆ ಎಲ್ಲ ಮರು-ಪರಿಶೀಲನೆಗಾಗಿ ಮೊಬೈಲ್ ಸಂಪರ್ಕಗಳನ್ನು ಕಡಿತ ಮಾಡಲಾಗುತ್ತದೆ. ಹಣಕಾಸಿನ ಅಪರಾಧಗಳು, ತೊಂದರೆ ನೀಡುವಂಥ ಕರೆಗಳು, ಸ್ವಯಂಚಾಲಿತ ಕರೆಗಳು ಮತ್ತು ಮೋಸದ ಚಟುವಟಿಕೆಗಳ ಘಟನೆಗಳನ್ನು ಪರಿಶೀಲಿಸಲು ಈ ಕ್ರಮ ಬಂದಿದೆ. ನಿಯಮದ ಪ್ರಕಾರ, ಬಳಕೆಯಲ್ಲಿ ಇಲ್ಲದ- ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್‌ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್‌ಗಳಿಗೆ ದೂರಸಂಪರ್ಕ ಇಲಾಖೆ ಕೇಳಿದೆ.
ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.