OnePlus Nord 3: ರೋಚಕತೆ ಸೃಷ್ಟಿಸಿದ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್: ಫೀಚರ್ಸ್ ಏನಿದೆ ನೋಡಿ

ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್​ನ ಅಧಿಕೃತ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 30,000-40,000 ರೂ. ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ.

OnePlus Nord 3: ರೋಚಕತೆ ಸೃಷ್ಟಿಸಿದ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್: ಫೀಚರ್ಸ್ ಏನಿದೆ ನೋಡಿ
oneplus nord 3
Follow us
Vinay Bhat
|

Updated on:Apr 23, 2023 | 1:54 PM

ಇತ್ತೀಚೆಗಷ್ಟೆ ಭಾರತದಲ್ಲಿ ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ (OnePlus Nord CE 3 Lite) ಹೆಸರಿನ ಫೋನನ್ನು ರಿಲೀಸ್ ಮಾಡಿ ಭರ್ಜರಿ ಸದ್ದು ಮಾಡಿದ್ದ ಪ್ರಸಿದ್ಧ ಒನ್​ಪ್ಲಸ್​ ಕಂಪನಿ ಇದೀಗ ಪುನಃ ಬಂದಿದೆ. ಸತತವಾಗಿ ಹಲವಾರು ಹೊಸ ಸ್ಮಾರ್ಟ್​ಫೋನ್​ಗಳನ್ನು (Smartphones) ಬಿಡುಗಡೆ ಮಾಡುತ್ತಿರುವ ಒನ್​ಪ್ಲಸ್, ಮುಂದಿನ ತಿಂಗಳು ದೇಶದಲ್ಲಿ ಒನ್​ಪ್ಲಸ್ ನಾರ್ಡ್ 3 (OnePlus Nord 3) ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದು ಒನ್​ಪ್ಲಸ್ ನಾರ್ಡ್ 2 ವಿನ ಮುಂದಿನ ವರ್ಷನ್ ಆಗಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್​ನ ಅಧಿಕೃತ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 30,000-40,000 ರೂ. ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಬಿಡುಗಡೆ ಆದ ಒನ್​ಪ್ಲಸ್ ನಾರ್ಡ್ 2 ಆರಂಭಿಕ ಬೆಲೆ 27,999 ರೂ. ಆಗಿತ್ತು. ಈಗ ಹೊಸ ಫೋನ್ ಸಾಕಷ್ಟು ಅಭಿವೃದ್ದಿ ಹೊಂದಿ ನೂತನ ಆಯ್ಕೆಗಳೊಂದಿಗೆ ಬರಲಿದೆ. ಈ ಫೋನಿನ ಫೀಚರ್ಸ್ ಕುರಿತ ಕೆಲ ಮಾಹಿತಿ ಆನ್​ಲೈನಲ್​ನಲ್ಲಿ ಸೋರಿಕೆ ಆಗಿದೆ.

ಒನ್​ಪ್ಲಸ್ ನಾರ್ಡ್ 3 ಫೋನ್​ನಲ್ಲಿ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ6.7 ಇಂಚಿನ ಅಮೋಲೆಡ್‌ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಇರುವ ಸಾಧ್ಯತೆ ಇದೆ. ಇದು 120Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಾಗಿದೆ. ಜೊತೆಗೆ ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಇನ್‌ಡಿಸ್‌ಪ್ಲೇ ನಲ್ಲಿ ನೀಡಲಾಗಿದೆಯಂತೆ.

ಇದನ್ನೂ ಓದಿ
Image
Tech Tips: ಗೂಗಲ್ ಪೇ ಕೈಕೊಟ್ರೆ ಟೆನ್ಶನ್ ಬೇಡ: ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ
Image
Google Pixel 6 Pro 5G: ಕೇವಲ 46,910 ರೂ. ಗೆ ಸೇಲ್ ಆಗುತ್ತಿದೆ 1 ಲಕ್ಷದ ಈ ಸ್ಮಾರ್ಟ್​ಫೋನ್: ಆಫರ್ ಮಿಸ್ ಮಾಡ್ಬೇಡಿ
Image
Tech Tips: ಎರಡು ಸ್ಮಾರ್ಟ್​ಫೋನ್​ನಲ್ಲಿ ಒಂದೇ ನಂಬರ್​ನ ವಾಟ್ಸ್​ಆ್ಯಪ್ ಖಾತೆ ತೆರೆಯಬಹುದೇ?
Image
Honor X50i: ಬರೋಬ್ಬರಿ 100MP ಕ್ಯಾಮೆರಾ: ಮಾರುಕಟ್ಟೆಯನ್ನು ದಂಗಾಗಿಸಿದ ಹಾನರ್ ಕಂಪನಿಯ ಹೊಸ ಸ್ಮಾರ್ಟ್​ಫೋನ್

WhatsApp: ಒಂದಲ್ಲ, ಎರಡಲ್ಲ … ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಸಾಲು ಸಾಲು ಹೊಸ ಫೀಚರ್​ಗಳು: ಇಲ್ಲಿದೆ ನೋಡಿ

ಈ ಫೋನಿನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಇದ್ದರೂ ಅಚ್ಚರಿ ಪಡಬೇಕಿಲ್ಲ. ಬಲಿಷ್ಠವಾದ ಮೀಡಿಯಾಟೆಕ್ ಡೈಮನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಬಹುದು ಎನ್ನಲಾಗಿದೆ. ಆಂಡ್ರಾಯ್ಡ್ 13 ಬಂಬಲ ಪಡೆದಿರಲಿದೆ. ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.

ಒನ್​ಪ್ಲಸ್ ನಾರ್ಡ್ 3 ಕ್ಯಾಮೆರಾ ವಿ‍ಚಾರಕ್ಕೆ ಬಂದರೆ, ಇದರಲ್ಲಿರುವ ಹಿಂಭಾಗದ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇರಲಿದೆ. ಇದು ಸೋನಿ ಸೆನ್ಸಾರ್ ಸಾಮರ್ಥ್ಯ ಇರುವ ಸಾಧ್ಯತೆ ಇದೆ. ಹಾಗೆಯೆ 8 ಮೆಗಾಪಿಕ್ಸೆಲ್​ನ ಸೆಕೆಂಡರಿ ಕ್ಯಾಮೆರಾ ಇರಲಿದ್ದು 2 ಮೆಗಾಪಿಕ್ಸೆಲ್​ನ ಕ್ಯಾಮೆರಾ ಕೂಡ ಇರಲಿದೆ. ಮುಂಭಾಗ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿಯನ್ನು ಒಳಗೊಂಡಿರುವುದು ಬಹುತೇಕ ಖಚಿತ. ಇದು ಬರೋಬ್ಬರಿ 80W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿರುವ ಜೊತೆಗೆ ಹಾಟ್‌ಸ್ಪಾಟ್‌, ಬ್ಲೂಟೂತ್‌ 5.1, ವೈಫೈ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಎಂದಿನಂತೆ ಇರಲಿದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಒನ್​ಪ್ಲಸ್ ನಾರ್ಡ್ 3 ಭಾರತದಲ್ಲಿ ಬಿಡುಗಡೆ ಆಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Sun, 23 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ